ಕಡಬ ಜನತೆಗೆ ಕನಸಾಗೇ ಉಳಿದ ಸರಕಾರಿ ಪದವಿ ಕಾಲೇಜು
Team Udayavani, Nov 27, 2017, 4:39 PM IST
ಕಡಬ: ಕಡಬವು ಮುಂದಿನ ಜ. 1ರಿಂದ ತಾಲೂಕು ಕೇಂದ್ರವಾಗಿ ಅಧಿಕೃತವಾಗಿ ಕಾರ್ಯಾಚರಿಸಲಿದೆ. ಆದರೆ ಇಲ್ಲಿ ಶೈಕ್ಷಣಿಕವಾಗಿ ಯಾವುದೇ ಗಮನಾರ್ಹ ಬೆಳವಣಿಗೆಯಾಗಿಲ್ಲ ಎನ್ನುವುದು ವಿಷಾದದ ಸಂಗತಿ. ಇಲ್ಲಿನ ಸರಕಾರಿ ಶೈಕ್ಷಣಿಕ ವ್ಯವಸ್ಥೆ ಪ.ಪೂ. ಕಾಲೇಜು ಮಟ್ಟದಿಂದ ಮೇಲೇರಿಲ್ಲ. ಕಡಬದಲ್ಲಿ ಸರಕಾರಿ ಪದವಿ ಕಾಲೇಜು ಹಾಗೂ ವೃತ್ತಿಪರ ತರಬೇತಿ ಕೋರ್ಸುಗಳ ಕಾಲೇಜು ಆರಂಭವಾಗಬೇಕು ಎನ್ನುವ ಜನರ ಬೇಡಿಕೆ ಇನ್ನೂ ಕೈಗೂಡಿಲ್ಲ.
ಕಡಬದಲ್ಲಿ ಸರಕಾರಿ ಪದವಿ ಕಾಲೇಜು ಆರಂಭಿಸಬೇಕೆನ್ನುವ ಬೇಡಿಕೆಯನ್ನು ಮುಖ್ಯಮಂತ್ರಿಗಳ ಮುಂದೆಯೂ ಇರಿಸಲಾಗಿತ್ತು. ಕಳೆದ ವರ್ಷ (ಅ. 9) ಪಶು ವೈದ್ಯಕೀಯ ಕಾಲೇಜು ಕಟ್ಟಡದ ಶಂಕುಸ್ಥಾಪನೆಗಾಗಿ ಕೊಯಿಲಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮುಂದಿನ ಶೈಕ್ಷಣಿಕ ವರ್ಷದಿಂದ ಕಡಬದಲ್ಲಿ ಸರಕಾರಿ ಪದವಿ ಕಾಲೇಜು ಆರಂಭಿಸಲಾಗುವುದು ಎಂದು ಪ್ರಕಟಿಸಿದ್ದರು. ಆದರೆ ಈ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭಗೊಂಡು ಅರ್ಧ ಅವಧಿ ಮುಗಿದರೂ ಮುಖ್ಯಮಂತ್ರಿಗಳ ಭರವಸೆ ಈಡೇರಿಲ್ಲ.
ಪರಿಸರದ ವಿವಿಧ ಪದವಿ ಪೂರ್ವ ಕಾಲೇಜು ಗಳಿಂದ ವರ್ಷಂಪ್ರತಿ ವ್ಯಾಸಂಗ ಮುಗಿಸಿ ಹೊರಬರುವ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣಕ್ಕಾಗಿ ಸರಕಾರಿ ಪದವಿ ಕಾಲೇಜು ಇರುವುದು ದೂರದ ಸುಬ್ರಹ್ಮಣ್ಯ ಅಥವಾ ಉಪ್ಪಿನಂಗಡಿಯಲ್ಲಿ. ಕಡಬದಲ್ಲಿ ಸರಕಾರಿ ಪದವಿ ಕಾಲೇಜು ಆಗಬೇಕು ಎನ್ನುವ ಊರವರ ಬೇಡಿಕೆಗೆ ಸರಕಾರದಿಂದ ಮಾನ್ಯತೆ ಸಿಕ್ಕಿಲ್ಲ. ಕಡಬ ಸರಕಾರಿ ಪದವಿ ಕಾಲೇಜು ಹೋರಾಟ ಸಮಿತಿ ಎನ್ನುವ ಸಂಘಟನೆಯ ಮೂಲಕ ಊರ ಪ್ರಮುಖರು ಕಾಲೇಜು ಮಂಜೂರಾತಿಗಾಗಿ ಸರಕಾರದ ಮಟ್ಟದಲ್ಲಿ ನಡೆಸುತ್ತಿರುವ ಪ್ರಯತ್ನಕ್ಕೆ ಇನ್ನೂ ಯಶಸ್ಸು ಸಿಕ್ಕಿಲ್ಲ.
ಜಮೀನು ಕಾದಿರಿಸಲಾಗಿದೆ
ಕಡಬ ಸರಕಾರಿ ಪ್ರೌಢಶಾಲೆಯ 14.5 ಎಕ್ರೆ ಪೈಕಿ 5 ಎಕ್ರೆ ಜಾಗವನ್ನು ಕಡಬ ಸ.ಪ್ರ. ದರ್ಜೆ ಕಾಲೇಜು ಸ್ಥಾಪನೆಗೆ ಕಾದಿರಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಸಹಾಯಕ ಕಮಿಷನರ್‌ಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ 5 ಎಕರೆ ಜಮೀನನ್ನು ಗಡಿ ಗುರುತು ಮಾಡಲಾಗಿದೆ. ಪದವಿ ಕಾಲೇಜಿನೊಂದಿಗೆ ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನೂ ಆರಂಭಿಸಿದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅದಕ್ಕಾಗಿ ವೃತ್ತಿಪರ ಶಿಕ್ಷಣ ಕೋರ್ಸುಗಳನ್ನು ಆರಂಭಿಸುವ ನಿಟ್ಟಿನಲ್ಲಿಯೂ ಜನಪ್ರತಿನಿಧಿಗಳು ಪ್ರಯತ್ನಿಸುವ ಅಗತ್ಯವಿದೆ.
ಸೂಕ್ತ ಕ್ರಮ ಕೈಗೊಳ್ಳಲಾಗುವುದು
ಕಡಬದಲ್ಲಿ ಸರಕಾರಿ ಪದವಿ ಕಾಲೇಜು ಆರಂಭಿಸಬೇಕೆನ್ನುವ ಬೇಡಿಕೆಯನ್ನು ಸರಕಾರದ ಮುಂದಿಡಲಾಗಿದೆ. ಆದರೆ ಸರಕಾರವು ಹೊಸದಾಗಿ ಯಾವುದೇ ಪದವಿ ಕಾಲೇಜುಗಳನ್ನು ಮಂಜೂರುಗೊಳಿಸಿಲ್ಲ. ಇದೀಗ ಕಡಬವು ತಾ| ಕೇಂದ್ರವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಆದ್ಯತೆಯ ಮೇಲೆ ಕಡಬದಲ್ಲಿ ಸರಕಾರಿ ಪದವಿ ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಂಬಂಧಪಟ್ಟ ಸಚಿವರು, ಇಲಾಖಾಧಿಕಾರಿಗಳಲ್ಲಿ ಮಾತುಕತೆ ನಡೆಸಲಾಗಿದೆ.
– ಎಸ್. ಅಂಗಾರ, ಸುಳ್ಯ ಶಾಸಕರು
ಸರಕಾರಿ ಪದವಿ ಕಾಲೇಜು ಅಗತ್ಯ
ಹಲವಾರು ಬಾರಿ ಬೆಂಗಳೂರಿಗೆ ತೆರಳಿ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಗಿದೆ. ವಿದ್ಯಾರ್ಥಿಗಳ ಕೊರತೆಯಿಂದಾಗಿ ಹಲವಾರು ಕಾಲೇಜುಗಳು ಮುಚ್ಚುತ್ತಿದ್ದು, ಸರಕಾರವು ಹೊಸದಾಗಿ ಪ.ಪೂ., ಪದವಿ ಕಾಲೇಜು ಆರಂಭಿಸಲು ಹಿಂದೇಟು ಹಾಕುತ್ತಿರುವಂತಿದೆ. ಕಡಬದಲ್ಲಿ ಸ.ಪದವಿ ಕಾಲೇಜಿನ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ.
–ವಿಜಯಕುಮಾರ್ ರೈ ಕರ್ಮಾಯಿ,
ಅಧ್ಯಕ್ಷರು, ಕಡಬ ಸ. ಪ. ಕಾಲೇಜು ಹೋರಾಟ ಸಮಿತಿ
ನಾಗರಾಜ್ ಎನ್.ಕೆ. ಕಡಬ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಸ್- ಸ್ಕೂಟರ್ ಢಿಕ್ಕಿ ಪ್ರಕರಣ: ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಸವಾರ ಕೂಡ ಮೃತ್ಯು
Belthangady: ಹೆಬ್ಬಾವು ಹಿಡಿದು ವೈರಲ್ ಆದ ಕುಪ್ಪೆಟ್ಟಿ ನಿವಾಸಿ ಆಶಾ!
Punjalkatte: ಗುಂಡಿಗಳು ಸಾರ್ ಗುಂಡಿಗಳು
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
Belthangady: ಹೆಬ್ಬಾವು ಹಿಡಿದು ವೈರಲ್ ಆದ ಕುಪ್ಪೆಟ್ಟಿ ನಿವಾಸಿ ಆಶಾ!
MUST WATCH
ಹೊಸ ಸೇರ್ಪಡೆ
Haveri: ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಬಂಧನ
Moo Deng: ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು… ನೀರಾನೆ ಮರಿಯ ಭವಿಷ್ಯ ನಿಜವಾಯ್ತು
Mangaluru: ಡಿ.28; ಮಂಗಳೂರು ಕಂಬಳ; ಪೂರ್ವಭಾವಿ ಸಭೆ
Tamil Nadu: ನಮಗೆ ಯಾರೇ ಎದುರಾಳಿಯಾದ್ರೂ 2026ರಲ್ಲಿ ಗೆಲ್ಲೋದು ನಾವೇ: ಡಿಸಿಎಂ ಉದಯನಿಧಿ
Udupi: ಕಾರ್ಮಿಕರ ದಾಖಲೆ ಪಡೆಯಲು ಜಿಲ್ಲಾಧಿಕಾರಿ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.