ವ್ಯಾಟ್ಸಪ್ ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’; ಲಿಂಕ್ ಒತ್ತಿದರೆ ನಿಮ್ಮ ಬ್ಯಾಂಕ್ ಹಣಕ್ಕೆ ಕನ್ನ!
Team Udayavani, Mar 19, 2022, 11:45 AM IST
ಮಂಗಳೂರು: ಭಾರೀ ಸದ್ದು ಮಾಡುತ್ತಿರುವ “ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಉಚಿತವಾಗಿ ತೋರಿಸುವ ನೆಪದಲ್ಲಿ ಮೊಬೈಲ್‌ಗೆ ಲಿಂಕ್ ಕಳುಹಿಸಿ ವಂಚನೆ ನಡೆಯುವ ಬಗ್ಗೆ ಸೈಬರ್ ಭದ್ರತ ತಜ್ಞರು ಎಚ್ಚರಿಸಿದ್ದಾರೆ.
ವಂಚಕರು ಮೊಬೈಲ್‌ಗೆ ಲಿಂಕ್ ಒಂದನ್ನು ಕಳುಹಿಸುತ್ತಾರೆ. ಅದರ ಜತೆಗೆ “ದಿ ಕಾಶ್ಮೀರ್ ಫೈಲ್ಸ್’ ಸಿನೆಮಾವನ್ನು ಉಚಿತವಾಗಿ ವೀಕ್ಷಿಸಬಹುದು ಎಂಬ ಸಂದೇಶ ಕೂಡ ಇರುತ್ತದೆ. ಈ ಲಿಂಕ್‌ನ್ನು ಕ್ಲಿಕ್ ಮಾಡಿದಾಗ ಮೊಬೈಲ್ ಫೋನ್‌ಗೆ ವೈರಸ್ ಕೂಡ ಡೌನ್‌ಲೋಡ್ ಆಗುತ್ತದೆ. ಇದೊಂದು ಮಾಲ್‌ವೇರ್. ಈ ಮಾಲ್‌ವೇರ್ (ವೈರಸ್) ಮೂಲಕ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರಗಳನ್ನು ಕದಿಯುತ್ತಾರೆ. ಅನಂತರ ಖಾತೆಯಿಂದ ಹಣವನ್ನು ದೋಚುತ್ತಾರೆ.
ಇಂತಹ ಘಟನೆಗಳು ಉತ್ತರ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಮಂಗಳೂರಿನಲ್ಲಿಯೂ ಕೆಲವರು ಈಗಾಗಲೇ ಇಂತಹ ಲಿಂಕ್‌ನ್ನು ಒತ್ತಿರುವ ಮಾಹಿತಿ ಲಭಿಸಿದೆ ಎಂದು ಸೈಬರ್ ಭದ್ರತ ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ:ಮದುವೆ ವಿಚಾರಕ್ಕೆ ಜಗಳ; ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಿಯಕರ?
ಪ್ರಚಲಿತ ವಿಚಾರಗಳ ಆಯ್ಕೆ ಈ ರೀತಿಯ ವಂಚನೆ ಮಾಡುವಾಗ ಸೈಬರ್ ವಂಚಕರು ಪ್ರಚಲಿತ ಭಾರೀ ಸುದ್ದಿಯಲ್ಲಿರುವ ಮತ್ತು ಜನರು ಸ್ವಲ್ಪವೂ ಯೋಚಿಸದೆ ತತ್‌ಕ್ಷಣ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ವಿಚಾರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ “ಕಾಶ್ಮೀರ್ ಫೈಲ್ಸ್’ ಸಿನೆಮಾ ಹೆಚ್ಚು ಸದ್ದು ಮಾಡುತ್ತಿರುವುದರಿಂದ ಅದನ್ನು ಆಯ್ದುಕೊಂಡಿದ್ದಾರೆ.
ವಿಭಿನ್ನ ಲಿಂಕ್
ವಂಚಕರು ಎಲ್ಲರಿಗೂ ಒಂದೇ ರೀತಿಯ ಲಿಂಕ್ ಕಳುಹಿಸದೆ ವಿಭಿನ್ನ ಲಿಂಕ್ ಕಳುಹಿಸುತ್ತಾರೆ. ಈ ಲಿಂಕ್ ಗಳಲ್ಲಿ ಸಿನೆಮಾವೂ ಇರಬಹುದು. ಆದರೆ ಅದರ ಜತೆಗೆ ವೈರಸ್ ಕೂಡ ಇರುತ್ತದೆ. ಕೆಲವು ವಂಚಕರು ಉದ್ದೇಶಪೂರ್ವಕವಾಗಿಯೇ ಇಂತಹ ಪೈರೇಟೆಡ್ ಸಿನೆಮಾಗಳ ಲಿಂಕ್ ಕಳುಹಿಸುತ್ತಾರೆ ಎನ್ನುವುದು ಸೈಬರ್ ಭದ್ರತ ತಜ್ಞರ ಕಿವಿಮಾತು.
ಇಂತಹ ಲಿಂಕ್ ಬಂದ ಕೂಡಲೇ ಒತ್ತಬಾರದು. ಅದನ್ನು ತೀರಾ ಪರಿಚಿತರು ಕಳುಹಿಸಿದ್ದರೂ ಅದರ ಕುರಿತು ವಿಚಾರಿಸಬೇಕು. ಇಂತಹ ಲಿಂಕ್‌ಗಳ ಮೂಲಕ ಮೊಬೈಲ್‌ಗೆ “ಶಾರ್ಕ್‌ಬೋಟ್’ ರೀತಿಯ ಬ್ಯಾಂಕಿಂಗ್ ಟ್ರೋಜನ್ ವೈರಸ್‌ನ್ನು ಗೊತ್ತಿಲ್ಲದಂತೆಯೇ ಇನ್‌ಸ್ಟಾಲ್ ಮಾಡಿಸಲಾಗುತ್ತದೆ. ಈ ರೀತಿಯ ಲಿಂಕ್‌ಗಳನ್ನು ಒತ್ತದಿರುವುದೇ ಉತ್ತಮ. – ಡಾ| ಅನಂತ ಪ್ರಭು ಜಿ. ಸೈಬರ್ ಭದ್ರತಾ ತಜ್ಞ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.