ಯುವಕನ ಅಪಹರಿಸಿ ಕೊಲೆ ಯತ್ನ: ಐವರ ಬಂಧನ
Team Udayavani, Apr 25, 2018, 12:36 PM IST
ಮಂಗಳೂರು: ಯುವಕ ನೊಬ್ಬನನ್ನು ಅಪಹರಿಸಿ ಆತನ ಮೊಬೈಲ್ ಹಾಗೂ ಬೈಕನ್ನು ಸುಲಿಗೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟು ಕೊಲೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ಸಂಭವಿಸಿದ್ದು, ಇದಕ್ಕೆ ಸಂಬಂಧಿಸಿ ಮಂಗಳವಾರ ಐವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ 15,000 ರೂ. ಮೌಲ್ಯದ ಮೊಬೈಲ್, 20,000 ರೂ. ಮೌಲ್ಯದ ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ ಗಳನ್ನು ವಶಪಡಿಸಿ ಕೊಂಡಿದ್ದಾರೆ.
ಪಡೀಲ್ ಗಾಣದಬೆಟ್ಟು ನಿವಾಸಿ ಧೀರಜ್ ಕುಮಾರ್ ಯಾನೆ ಧೀರು (23), ವಾಮಂಜೂರು ಸಂತೋಷ್‌ನಗರದ ಪ್ರಾಣೇಶ್ ಪೂಜಾರಿ (21), ಕಣ್ಣೂರು ಜಾನಕಿ ತೋಟದ ನೀಕ್ಷಿತ್ ಪೂಜಾರಿ (21), ಜಲ್ಲಿಗುಡ್ಡೆ ಜಯನಗರದ ಪ್ರೀತಮ್ ಪೂಜಾರಿ (22), ಅರ್ಕುಳದ ನಿತಿನ್ ಪೂಜಾರಿ (20) ಬಂಧಿತರು.
ಘಟನೆಯ ವಿವರ
ಆರೋಪಿಗಳು ಎ.15ರಂದು ಸಂಜೆ 4.30ರ ವೇಳೆಗೆ ಜಲ್ಲಿಗುಡ್ಡೆ ಜಯನಗರದ ಯುವಕ ಗ್ಲಾನ್‌ಸನ್‌ನನ್ನು ಬಿಕರ್ನಕಟ್ಟೆಯಿಂದ ದ್ವಿಚಕ್ರ ವಾಹನದಲ್ಲಿ ಬಲಾತ್ಕಾರವಾಗಿ ಕುಳ್ಳಿರಿಸಿ ಅಡ್ಯಾರ್‌ನ ರೈಲ್ವೆ ಟ್ರ್ಯಾಕ್ ಬಳಿ ಕರೆದೊಯ್ದು ಹಣ ಕೊಡುವಂತೆ ಒತ್ತಾಯಿಸಿದ್ದಲ್ಲದೆ ಮೊಬೈಲ್‌ಫೋನ್ ಅನ್ನು ಕಸಿದುಕೊಂಡಿದ್ದರು. ಬಳಿಕ ಆತನಿಗೆ ಚಾಕು ತೋರಿಸಿ ಮನೆಯವರಿಗೆ ಫೋನ್ ಮಾಡಿ 1 ಲಕ್ಷ ರೂ. ಕೊಡುವಂತೆ ಬೆದರಿಕೆ ಹಾಕಿದ್ದರು. ಇದಕ್ಕೆ ಒಪ್ಪದಿದ್ದಾಗ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿ ಅಲ್ಲಿಂದ ನೀರುಮಾರ್ಗದ ಕೆಲರಾಯ್‌ಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಬಂಧಿತರು ಕ್ರಿಮಿನಲ್ ಹಿನ್ನೆಲೆಯ ವರಾಗಿದ್ದು, ಕೊಲೆಯತ್ನ ಪ್ರಕರಣದ ಆರೋಪಿಗಳಾಗಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.