ಲಕ್ಷದ್ವೀಪ ಜೆಟ್ಟಿ ಯೋಜನೆ ಶೀಘ್ರ ಸಾಕಾರ ಅವಶ್ಯ
Team Udayavani, Aug 6, 2017, 6:30 AM IST
ಮಹಾನಗರ: ಮಂಗಳೂರು ಮತ್ತು ಲಕ್ಷದ್ವೀಪಗಳ ನಡುವಿನ ವಾಣಿಜ್ಯ ವ್ಯವಹಾರಕ್ಕೆ ಒಂದು ಐತಿಹಾಸಿಕ ಹಿನ್ನೆಲೆ ಯಿದೆ. ಮಂಗಳೂರಿನಿಂದ ಹೆಚ್ಚಿನ ಪ್ರಮಾಣ ದಲ್ಲಿ ಸರಕು- ಸಾಮಗ್ರಿಗಳನ್ನು ಲಕ್ಷದ್ವೀಪಕ್ಕೆ ಕಳುಹಿಸಲಾಗುತ್ತಿದೆ. ಅಲ್ಲಿಂದ ಕೆಲವು ಉತ್ಪನ್ನಗಳನ್ನು ಇಲ್ಲಿಗೆ ತರಲಾಗುತ್ತಿದೆ. ಇದು ನೂರಾರು ವರ್ಷಗಳದ್ದು. ಇನ್ನಷ್ಟು ವಿಸ್ತಾರ ಗೊಳಿಸಿ ವಾಣಿಜ್ಯ ಕ್ಷೇತ್ರದಲ್ಲಿನ ವಿಫುಲ ಅವಕಾಶ ಗಳನ್ನು ಬಳಸಿಕೊಳ್ಳುವಲ್ಲಿ ರೂಪಿಸಿದ ಯೋಜನೆಯ ಫಲ ಹಳೇ ಬಂದರಿನಲ್ಲಿ ಸುಸಜ್ಜಿತವಾದ ಪ್ರತ್ಯೇಕವಾದ ಜೆಟ್ಟಿಯೊಂದರ ನಿರ್ಮಾಣ.
ಲಕ್ಷದ್ವೀಪದ ಆಡಳಿತದ ನೆರವಿನೊಂದಿಗೆ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಈ ಯೋಜನೆ ರೂಪಿಸಲಾಗಿದೆ. ಆದರೆ ಯೋಜನೆ ಸಿದ್ಧವಾಗಿ 2 ವರ್ಷ ಕಳೆದರೂ ಹೆಚ್ಚಿನ ಪ್ರಗತಿಯಾಗಿಲ್ಲ. ಮಂಗಳೂರು ಹಾಗೂ ದ.ಕ.ಜಿಲ್ಲೆಯ ಆರ್ಥಿಕತೆ ವೃದ್ಧಿªಗೆ ಸಹಕಾರಿಯಾಗುವ ಈ ಯೋಜನೆ ಅನುಷ್ಠಾನಗೊಳ್ಳಲಿ ಎಂಬುದು ವಾಣಿಜ್ಯ ಸಮುದಾಯದ ನಿರೀಕ್ಷೆ.ಹಳೇಬಂದರಿನಲ್ಲಿ ಲಕ್ಷದ್ವೀಪಕ್ಕೆ ಸುಸಜ್ಜಿತ ಜೆಟ್ಟಿ ನಿರ್ಮಾಣ ಎರಡೂ ಭಾಗಗಳ ಜನರ ಬಹುಕಾಲದ ಬೇಡಿಕೆ. ನೌಕೆಗಳ ಮೂಲಕ ಅಲ್ಲಿಂದ ವ್ಯಾಪಾರಿಗಳು, ಪ್ರಯಾಣಿಕರು ಮಂಗಳೂರು ಹಳೇ ಬಂದರಿಗೆ ಆಗಮಿಸಿ ಕಟ್ಟಡ ಸಾಮಗ್ರಿ, ಆಹಾರ ಧಾನ್ಯಗಳು, ಸಂಬಾರು ಪದಾರ್ಥ, ಜೀವನಾವಶ್ಯಕ ವಸ್ತುಗಳನ್ನು ಕೊಂಡೊ ಯ್ಯುತ್ತಾರೆ. ಅದೇ ರೀತಿ ಪ್ರವಾಸಿ ತಾಣವೂ ಆದ ಲಕ್ಷದ್ವೀಪ ಸಮೂಹಕ್ಕೆ ಅವಿಭಜಿತ ಜಿಲ್ಲೆಯಿಂದ ಬಹಳಷ್ಟು ಪ್ರವಾಸಿಗರು ಹೋಗುತ್ತಾರೆ.
ಒಡಂಬಡಿಕೆ
ಲಕ್ಷದ್ವೀಪದ ಸರಕಾರದ ಕೋರಿಕೆಗೆ ಸ್ಪಂದಿಸಿ ಕರ್ನಾಟಕ ಬಂದರು ಇಲಾಖೆಯು ಮಂಗಳೂರು ಹಳೇ ಬಂದರಿನಲ್ಲಿ 8 ಸಾವಿರ ಚದರ ಮೀàಟರ್ ವಿಸ್ತೀರ್ಣ ಜಾಗವನ್ನು ಲಕ್ಷ ದ್ವೀಪಕ್ಕೆ ಸರಕು ಸಾಗಣೆಗೆ ಬಳಸಲು ನೀಡುತ್ತಿದೆ. ಈಗಾಗಲೇ ಎರಡೂ ರಾಜ್ಯಗಳ ಮಧ್ಯೆ ಒಡಂಬಡಿಕೆಯೂ ಆಗಿದೆ.
ಸುಮಾರು 65 ಕೋ.ರೂ. ವೆಚ್ಚದ ಈ ಯೋಜನೆಯಲ್ಲಿ ಲಕ್ಷದ್ವೀಪ ಜೆಟ್ಟಿನಲ್ಲಿ ದೊಡ್ಡ ನೌಕೆಗಳು ತಂಗಲು ಪೂರಕವಾದ ಸುಸಜ್ಜಿತ ಬರ್ತ್, ಪ್ರಯಾಣಿಕರಿಗೆ ತಂಗುದಾಣ ನಿರ್ಮಾಣ, ಸರಕು ಸಂಗ್ರಹಣೆಗೆ ಗೋದಾಮು ಸೇರಿ ಮತ್ತಿತರ ಮೂಲ ಸೌಕರ್ಯ ನಿರ್ಮಿಸಲಾಗುವುದು. ಲಕ್ಷದೀಪ ಆಡಳಿತದ ಅಂಗಸಂಸ್ಥೆಯಾದ ಸೊಸೈಟಿ ಫಾರ್ ಪ್ರಮೋಶನ್ ಆಫ್ ನೇಚರ್ ಟೂರಿಸ್ಟ್ ಆ್ಯಂಡ್ ನ್ಪೋರ್ಟ್ಸ್ ವತಿಯಿಂದ ಹಳೇ ಬಂದರು ಪ್ರದೇಶದಲ್ಲಿ 20 ಕೋ.ರೂ. ವೆಚ್ಚದಲ್ಲಿ ಅತಿಥಿ ಗೃಹ ಕಾಮಗಾರಿಗಳನ್ನು ಒಳಗೊಂಡಿದೆ.
ಪ್ರಕ್ರಿಯೆಯಲ್ಲಿ ವಿಳಂಬ
ಒಡಂಬಡಿಕೆ ಸಹಿ ಮಾಡಿ ಎರಡು ವರ್ಷಗಳಾಗುತ್ತಿವೆ. ಆದರೆ ಜೆಟ್ಟಿ ನಿರ್ಮಾಣದ ಬಳಿಕ ಇದರ ನಿರ್ವಹಣೆಗೆ ಸಂಬಂಧಿಸಿ ಕೆಲವು ಆಡಳಿತಾತ್ಮಕ ಪ್ರಕ್ರಿಯೆ, ರೂಪುರೇಷೆ ಅಂತಿಮಗೊಂಡಿಲ್ಲ. ಈ ಪ್ರಕ್ರಿಯೆಯ ವಿಳಂಬದಿಂದಾಗಿ ಯೋಜನೆ ಇನ್ನೂ ಅನುಷ್ಠಾನವಾಗಿಲ್ಲ.
ಹೊಸ ಜೆಟ್ಟಿ ಬಳಕೆದಾರರಿಗೆ ಶುಲ್ಕ ನಿಗದಿ, ಆಡಳಿತಾತ್ಮಕ ನಿರ್ವಹಣೆ, ಕಂದಾಯ ಸಂಗ್ರಹಣೆ ಸೇರಿದಂತೆ ಹಲವು ಅಂಶಗಳು ಪ್ರಸ್ತಾವನೆಯಲ್ಲಿ ಒಳಗೊಂಡಿವೆ. ಇದಕ್ಕೆ ಕರ್ನಾಟಕ ಸರಕಾರ ಹಾಗೂ ಲಕ್ಷದ್ವೀಪ ಆಡಳಿತ ಸಹಿ ಹಾಕಿದ ಬಳಿಕ ನಿರ್ಮಾಣ ಕುರಿತು ಪೂರಕ ಪ್ರಕ್ರಿಯೆ ಪ್ರಾರಂಭವಾಗಲಿದೆ. ಒಡಂಬಡಿಕೆ ಆಗುವಾಗ ಇದ್ದ ಲಕ್ಷದ್ವೀಪ ಆಡಳಿತಾಧಿಕಾರಿ ವರ್ಗಾವಣೆಗೊಂಡಿದ್ದಾರೆ. ನೂತನ ಅಧಿಕಾರಿ ಬಂದಿದ್ದಾರೆ.ಈಗಲಾದರೂ ಯೋಜನೆಯನ್ನು ತ್ವರಿತಗತಿ ಯಲ್ಲಿ ಜಾರಿಗೊಳಿಸಬೇಕೆಂಬುದು ವಾಣಿಜ್ಯ ಸಮುದಾಯದ ಆಗ್ರಹ.
ಪ್ರಮುಖ ಆಶ್ರಯ
ಮಂಗಳೂರಿನಿಂದ 365 ಕಿ.ಮೀ.( 277 ಮೈಲು ) ದೂರದಲ್ಲಿವೆ ಲಕ್ಷ ದ್ವೀಪ ಸಮೂಹ. ಕವರೆಟ್ಟಿ, ಅಗಾಟ್ಟಿ , ಕಲ್ಪೆನಿ, ಮಿನಿಕ್ವಾಯ್, ಅಮಿನಿ. ಚತ್ತಲತ್, ಕಿಲ್ತಾನ್ ಹಾಗೂ ಬಿತ್ತಾ, ಅಂದ್ರೋತ್, ಕಡಮಟ್ಟ್ ಪ್ರಮುಖ ದ್ವೀಪಗಳು. ಕ್ರೂಜ್‌ನಲ್ಲಿ ಸುಮಾರು 16 ರಿಂದ 18 ತಾಸುಗಳ ಪ್ರಯಾಣ. ಲಕ್ಷದ್ವೀಪ ತಮ್ಮ ಪ್ರಮುಖ ಆವಶ್ಯಕತೆಗಳಿಗೆ ಮುಖ್ಯವಾಗಿ ಆಶ್ರಯಿಸುವುದು ಕೇರಳದ ಕೊಚ್ಚಿ ಹಾಗೂ ಕರ್ನಾಟಕದ ಮಂಗಳೂರನ್ನು.
ಪ್ರಕ್ರಿಯೆಗೆ ಚಾಲನೆ
ಹಳೆ ಬಂದರಿನಲ್ಲಿ ಸುಸುಜ್ಜಿತ ಲಕ್ಷದ್ವೀಪ ಜೆಟ್ಟಿ ನಿರ್ಮಾಣ ಯೋಜನೆ ಶೀಘ್ರ ಕಾರ್ಯಗತ ಗೊಳ್ಳುವ ನಿಟ್ಟಿನಲ್ಲಿ ಪ್ರಕ್ರಿಯೆ ಪ್ರಗತಿಯಲ್ಲಿವೆ. ಈ ನಿಟ್ಟಿನಲ್ಲಿ ನಾನು ಸರಕಾರದ ಮಟ್ಟದಲ್ಲಿ ಕಾರ್ಯೋನ್ಮುಖರಾಗಿದ್ದೇನೆ. ಪ್ರಸ್ತುತ ಲಕ್ಷದ್ವೀಪದ ಆಡಳಿತದಿಂದ ಕೆಲವು ಆಡಳಿತಾತ್ಮಕ ಪ್ರಕ್ರಿಯೆಗಳು ಬಾಕಿ ಇವೆ. ಇದು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ನಾನು ಹಾಗೂ ರಾಜ್ಯ ಬಂದರು ಇಲಾಖೆಯ ಕಾರ್ಯದರ್ಶಿಯವರು ಶೀಘ್ರವೇ ಲಕ್ಷದ್ವೀಪಕ್ಕೆ ತೆರಳುತ್ತೇವೆ.
– ಜೆ.ಆರ್. ಲೋಬೋ, ಶಾಸಕರು , ಮಂಗಳೂರು ದ.ವಿಧಾನಸಭಾ ಕ್ಷೇತ್ರ
– ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.