ವಿಸ್ತರಿತ ವ್ಯಾಪ್ತಿಯೊಳಗೆ ಸುಳ್ಯದ ಎರಡು ಗ್ರಾಮಗಳ ಕಂದಾಯ ಭೂಮಿ?


Team Udayavani, Aug 3, 2017, 6:20 AM IST

0208kpk4.jpg

ಸುಳ್ಯ : ಕಸ್ತೂರಿ ರಂಗನ್‌ ವರದಿ ಜಾರಿ ಭೀತಿಯಿಂದ ತತ್ತರಿಸಿರುವ ಪಶ್ಚಿಮ ತಪ್ಪಲಿನ ಕೊಡಗು ಗಡಿಭಾಗದ ದ.ಕ. ಜಿಲ್ಲೆಗೆ ಒಳಪಟ್ಟ ಕಲ್ಮಕಾರು, ಬಾಳುಗೋಡು ಗ್ರಾಮದ ಕಂದಾಯ ಪ್ರದೇಶವು ಕೇಂದ್ರದ ವನ್ಯ ಜೀವಿಧಾಮ (ವೈಲ್ಡ್‌ ಲೈಪ್‌) ವಿಸ್ತರಿತ ವ್ಯಾಪ್ತಿಯೊಳಗೆ ಸೇರ್ಪಡೆಗೊಳ್ಳುವ ಸಂಗತಿ ಗ್ರಾಮಸ್ಥರಲ್ಲಿ  ತಲ್ಲಣ ಸೃಷ್ಟಿಸಿದೆ.

ಕಂದಾಯ ಭೂಮಿ ಇದರ ವ್ಯಾಪ್ತಿಗೆ ಒಳಪಟ್ಟರೆ, ಅಲ್ಲಿ ಯೋಜನೆಯ ಉದ್ದೇಶಿತ ಚಟುವಟಿಕೆ ಅನುಷ್ಠಾನಗೊಂಡು ಜನರು ಗುಳೇ ಹೋಗಬೇಕಾದ ಅಪಾಯವಿದೆ. ವಾಣಿಜ್ಯ ಆಧಾರಿತ ಕಸುಬುಗಳಿಗೆ ನಿಷಿದ್ಧ ಇರುವುದರಿಂದ ಪರ್ಯಾಯ ದಾರಿ ಹುಡುಕಬೇಕಿದೆ. 

ಕೊಡಗು ವ್ಯಾಪ್ತಿಗೆ   ಸೇರಿದ   ಪುಷ್ಪಗಿರಿ   ವನ್ಯ ಧಾಮದೊಳಗಿನ ವನ್ಯ ಜೀವಿಧಾಮ ಗಡಿಯಿಂದ 1.8 ಕಿ.ಮೀ. ದೂರದ ವಿಸ್ತರಿತ ಪ್ರದೇಶವನ್ನು ಪರಿಸರ ಸೂಕ್ಷ್ಮವಲಯ ವ್ಯಾಪ್ತಿಗೆ ಸೇರಿಸುವ ಕುರಿತು ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಜೂ. 27ರಂದು  ಅಧಿಸೂಚನೆ ಹೊರಡಿಸಿತ್ತು. ಇದರಲ್ಲಿ ಕೊಡಗಿನ 5, ದ.ಕ. ಜಿಲ್ಲೆಯ 2 ಗ್ರಾಮಗಳು ಸೇರಿವೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಅಧಿಸೂಚನೆಯ ಅನ್ವಯ ರಾಜ್ಯ ಸರಕಾರ ಯೋಜನೆ ರೂಪಿಸಲಿದೆ.

ಎರಡು ವರ್ಷದ ಗಡು 
ಮಾಸ್ಟರ್‌ ಪ್ಲ್ರಾನ್‌ನ್ನು ರಾಜ್ಯ ಸರಕಾರ ಎರಡು ವರ್ಷದೊಳಗೆ ರೂಪಿಸಬೇಕು. ಈ ಸಂದರ್ಭದಲ್ಲಿ ಕೇಂದ್ರ-ರಾಜ್ಯ ಸರಕಾರದ ಕಾನೂನು-ನಿಯಮ ಮೀರಬಾರದು. ಪರಿಸರ, ಅರಣ್ಯ, ವನ್ಯಜೀವಿ, ಕೃಷಿ, ಕಂದಾ ಯ, ನಗರಾಭಿವೃದ್ಧಿ, ಪ್ರವಾಸೋದ್ಯಮ ಲೊಕೋಪಯೋಗಿ, ಗ್ರಾಮೀಣಾಭಿವೃದ್ಧಿ ನೀರಾ ವರಿ  ಪಂಚಾಯತ್‌ರಾಜ್‌ ಇಲಾಖೆಗಳು ಯೋಜನೆ ರೂಪಿಸುವುದರಲ್ಲಿ ಪಾಲ್ಗೊಳ್ಳಬೇಕಿದೆ. 

ಇಲ್ಲಿ  ಭೂ ಪರಿವರ್ತನೆಗೆ ಅವಕಾಶ ಇಲ್ಲ. ಕೃಷಿ, ತೋಟಗಾರಿಕೆ, ಪಾರ್ಕ್‌, ಮನೋ ರಂಜನೆಗೆ ಕಾದಿರಿಸಿದ ಸ್ಥಳವನ್ನು ಕೈಗಾರಿಕೆ, ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ರಾಜ್ಯ ಸರಕಾರದ ಪೂರ್ವ ಅನುಮತಿ ಪಡೆದು ರಸ್ತೆ ಅಗಲ, ಮಾಲಿನ್ಯ ರಹಿತ ಕೈಗಾರಿಕೆ, ಗುಡಿ ಕೈಗಾರಿಕೆ, ಪೌರ ಮೂಲ ಸೌಕರ್ಯಗಳಿಗೆ, ಪರಿಸರ ಪ್ರವಾಸೋದ್ಯಮ, ಹೋಂಸ್ಟೇಗಳಿಗೆ ಅವಕಾಶ ಕಲ್ಪಿಸಬಹುದು. ವನ್ಯಜೀವಿಧಾಮ ವ್ಯಾಪ್ತಿಗೆ ಸೇರುವ ಗ್ರಾಮದೊಳಗೆ, ಅಸಂಸ್ಕರಿತ ತ್ಯಾಜ್ಯಗಳನ್ನು ನೀರಿಗೆ ಬಿಡುವುದು. 

ಸಣ್ಣ ಬೃಹತ್‌ ಖನಿಜಗಳ ಗಣಿಗಾರಿಕೆ, ಕ್ರಶರ್‌ಗಳು, ಮಾಲಿನ್ಯಕಾರಕ ಕೈಗಾರಿಕಾ ಘಟಕಗಳ ಸ್ಥಾಪನೆ ಅಥವಾ ವಿಸ್ತರಣೆ, ಜಲವಿದ್ಯುತ್‌ ಉತ್ಪಾದನ ಘಟಕ, ಅಪಾಯಕಾರಿ ವಸ್ತುಗಳ ಸಂಸ್ಕರಣಾ ಘಟಕ ಸ್ಥಾಪನೆ, ಹೊಸದಾಗಿ ಘನತ್ಯಾಜ್ಯ ಸಂಸðರಣ ಘಟಕ ನಿರ್ಮಿಸುವುದು, ಕೈಗಾರಿಕೆ, ಆಸ್ಪತ್ರೆ, ಇತ್ಯಾದಿಗಳಿಂದ ಬರುವ ಘನತ್ಯಾಜ್ಯವನ್ನು ಸುಡುವ ಘಟಕ, ಬೃಹತ್‌ ಗಾತ್ರದ ಕೋಳಿ ಫಾರಂ, ಇಟ್ಟಿಗೆ ನಿರ್ಮಾಣ ಘಟಕ, ಮರದ ಮಿಲ್‌ ಮೊದಲಾದವುಗಳ ಸ್ಥಾಪನೆಗೆ ಅವಕಾಶ ಇಲ್ಲ.

ಕಂದಾಯ ವ್ಯಾಪ್ತಿಯ ಆತಂಕ
ವಿಸ್ತರಿತ ವ್ಯಾಪ್ತಿ ನಿರ್ಧರಿಸುವುದು ಹೇಗೆಂದರೆ ಕೊಡಗು ಅರಣ್ಯ ( ಪುಷ್ಪಧಾಮ)ದ ಗಡಿ ಭಾಗದಿಂದ 1.8 ಕಿ.ಮೀ ವ್ಯಾಪ್ತಿ ವನ್ಯಜೀವಿ ಧಾಮದೊಳಗೆ ಸೇರ್ಪಡೆಗೊಳಿಸುವುದು. ಈ ವಿಸ್ತರಿತ ವ್ಯಾಪ್ತಿ ದ.ಕ. ಗಡಿ ಭಾಗಕ್ಕೆ  ತಾಗಿರುವ ಕಲ್ಮಕಾರು, ಬಾಳುಗೋಡು ಗ್ರಾಮದ ಕಂದಾಯ ಪ್ರದೇಶವನ್ನು ಒಳಗೊಂಡಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಯೋಜನೆಯ ವ್ಯಾಪ್ತಿಯಲ್ಲಿ  ಜನವಸತಿ, ಕೃಷಿ ಭೂಮಿ ಇದೆಯೋ ಎಂಬ ಬಗ್ಗೆ  ಸ್ಪಷ್ಟನೆ ಸಿಗಬೇಕಿದೆ.

ವಿಸ್ತರಣೆಯ ಉದ್ದೇಶ
ಸಾವಯವ ಕೃಷಿ, ಮಳೆ ನೀರು ಕೊಯ್ಲು, ಗುಡಿ ಕೈಗಾರಿಕೆ, ನವೀಕರಿಸಬಹುದಾದ ಇಂಧನಗಳ ಬಳಕೆ, ಕೃಷಿ ಅರಣ್ಯ ಪರಿಸರ ಸ್ನೇಹಿ ಸಾರಿಗೆ ಹಡಿಲು ಬಿದ್ದ ಭೂಮಿಯ ಪುನಾರುಜ್ಜೀವನಕ್ಕೆ ಉತ್ತೇಜನ ನೀಡಬೇಕು ಅನ್ನುವುದು ಯೋಜನೆಯ ಅಂಶ.
 
ಇನ್ನೊಂದು ಅಂಶವೆಂದರೆ, ವಲಯದ 1.ಕಿ.ಮೀ ವ್ಯಾಪ್ತಿಯೊಳಗೆ ರಾಜ್ಯ ಸರಕಾ ರದಿಂದ ಅನುಮತಿ ಇಲ್ಲದೆ ಸರಕಾರಿ ಅಥವಾ ಖಾಸಗಿ ಜಾಗದಲ್ಲಿ ಮರ ಕಡಿ ಯುವ ಹಾಗೂ ಟ್ಯಾಪಿಂಗ್‌ ಮಾಡು ವಂತಿಲ್ಲ.ಅರಣ್ಯ ಉತ್ಪನ್ನಗಳ ಸಂಗ್ರಹ, ವಿದ್ಯುತ್‌ ಮಾರ್ಗ ರಚನೆಯನ್ನು ನಿಯಮ ಅನುಸಾರ ನಿಯಂತ್ರಿಸಬೇಕು ಅನ್ನುತ್ತದೆ ಅಧಿಸೂಚನೆಯಲ್ಲಿನ ಅಂಶಗಳು.

ಯಾವ-ಯಾವ ಪ್ರದೇಶ
ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಕುಮಾರಳ್ಳಿ, ಕೊತನಳ್ಳಿ, ಸರ್ಲಬ್ಬಿ, ಮಡಿಕೇರಿ ತಾಲೂಕಿನ ಹಮ್ಲಿಯಾಳ, ಕಾಲೂರು, ಗಾಳಿಬೀಡು ಮತ್ತು ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು ಮತ್ತು ಬಾಳುಗೋಡು ಗ್ರಾಮಗಳು ಇಎಸ್‌ರkುಡ್‌ ವ್ಯಾಪ್ತಿಗೆ ಒಳ ಪಟ್ಟಿದೆ. ಸುಬ್ರಹ್ಮಣ್ಯ, ಕಿರಿಭಾಗ, ನಾಲ್ಕೂರು ಮೀಸಲು ಅರಣ್ಯದ ಕೆಲ ಭಾಗಗಳು, ಕೊಡಗು, ಹಾಸನ  ಜಿಲ್ಲೆಯ ಬಿಸಿಲೆ ಮೊದಲಾದಿ ಪ್ರದೇಶಗಳನ್ನು ಇದರೊಳಗೆ ಸೇರಿಸಲಾಗಿದೆ.

ಜನವಸತಿಗೆ ಸಂಚಕಾರ
ವನ್ಯಜೀವಿಧಾಮ ವ್ಯಾಪ್ತಿಯ ಕಾಡಿನೊಳಗೆ ಈಗಾಗಲೇ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಿದೆ. ಅಲ್ಲಿ ಜನರಿಗೆ ಪ್ರವೇಶ ಇಲ್ಲ. ಹಾಗಾಗಿ ಈ ಯೋಜನೆಯನ್ನು ಕಂದಾಯ ಭೂಮಿಯ ವ್ಯಾಪ್ತಿಯೊಳಗೆ ವಿಸ್ತರಿಸಬಾರದು. ವಿಸ್ತರಿಸಿದರೆ ಜನರಿಗೆ ಬದುಕಲು ಸಾಧ್ಯವಿಲ್ಲ. ಅಧಿಸೂಚನೆಯಲ್ಲಿ ಕಲ್ಮಕಾರು ಹಾಗೂ ಬಾಳುಗೋಡು ವನ್ಯ ಜೀವಿಧಾಮ ವ್ಯಾಪ್ತಿಗೆ ಸೇರಿರುವ ಅಂಶ ಉಲ್ಲೇಖವಾಗಿದೆ. ಅದು ಕಂದಾಯ ಪ್ರದೇಶದ ವ್ಯಾಪ್ತಿಯೇ ಅನ್ನುವುದು ಸ್ಪಷ್ಟವಾಗಬೇಕಿದೆ.

– ಹಮೀದ್‌ ಇಟ್ನೂರು,
ಅಧ್ಯಕ್ಷರು, ರೈತ ಹಿತ ರಕ್ಷಣಾ ವೇದಿಕೆ 

– ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ

IPL Mega Auction: Here’s what all 10 teams look like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

Stock-liqer

Sulya: ಆರಂತೋಡು: ಚಿಕನ್‌ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ

IPL Mega Auction: Here’s what all 10 teams look like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.