ಗೇರು ಬೆಲೆ ಇಳಿಸಿದ ಕೇರಳ ಲಾಬಿ!


Team Udayavani, Mar 13, 2017, 3:13 PM IST

geru.jpg

ಕರಾವಳಿಯಲ್ಲಿ  ಏರಿದ್ದ ಗೇರು ಬೆಲೆಯನ್ನು ಕೇರಳ ಸರಕಾರವು ಬೆಂಬಲ ಬೆಲೆ ಘೋಷಿಸುವ ಮೂಲಕವಾಗಿ ಇಳಿಸಿದೆ. ಇದರಿಂದ ಗೇರು ಬೆಳೆಯನ್ನೇ ನಂಬಿ ಕುಳಿತವರು ಚಿಂತೆಗೊಳಗಾಗಿದ್ದಾರೆ.

ಪುತ್ತೂರು: ಬೆಲೆ ಕಡಿಮೆಯಾಗಿದ್ದಾಗ ರೈತರನ್ನು ಪ್ರೋತ್ಸಾಹಿಸುವುದಕ್ಕಾಗಿ ಸರಕಾರ ಭಾರೀ ಒತ್ತಡದ ಬಳಿಕ ಕೊನೆಗೊಮ್ಮೆ ಬೆಂಬಲ ಬೆಲೆ ಘೋಷಿಸುವುದು ಸಾಮಾನ್ಯ. ಆದರೆ ಕೇರಳ ರಾಜ್ಯವು ಗೇರುಬೀಜದ ಬೆಲೆಯನ್ನು ಮಾರುಕಟ್ಟೆ ದರಕ್ಕಿಂತಲೂ ಕಡಿಮೆಗೆ ನಿಗದಿಗೊಳಿಸಿದ್ದರಿಂದ ಅಲ್ಲಿನ ಗೇರು ಸಂಸ್ಕರಣಾ ಘಟಕಗಳು ಇದನ್ನೇ ಮಾನದಂಡವಾಗಿರಿಸಿಕೊಂಡು ಬೆಳೆಗಾರರನ್ನು ಶೋಷಿಸಲಾರಂಭಿಸಿವೆ.

ಕೇರಳದ ಗಡಿ ಪ್ರದೇಶ ಸಹಿತ ಹೆಚ್ಚಿನ ಎಲ್ಲೆಡೆ ಆರಂಭದಲ್ಲಿ ಅಂಗಡಿಗಳವರು ಗೇರುಬೀಜವನ್ನು ಕಿಲೋಗೆ 150 ರೂ.ಗಳವರೆಗೆ ನೀಡಿ ಖರೀದಿಸುತ್ತಿದ್ದರು. ಆದರೆ ಕಳೆದ ವಾರ ಕೇರಳ ರಾಜ್ಯದಲ್ಲಿ ಬೆಂಬಲ ಬೆಲೆಯನ್ನು ಕೆಜಿಗೆ 135 ರೂ.ಗೆ ನಿಗದಿಗೊಳಿಸಿದ್ದರಿಂದ ಅಂಗಡಿಗಳವರು ಅದಕ್ಕಿಂತ ಹೆಚ್ಚಿನ ಬೆಲೆ ನೀಡಲು ನಿರಾಕರಿಸುತ್ತಿದ್ದಾರೆ. 

ಪೂರಕ ವಾತಾವರಣ
ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳ ಅಂತ್ಯದಲ್ಲಿ ಹೂ ಬಿಟ್ಟು ಜನವರಿ ತಿಂಗಳಲ್ಲಿ ಫಸಲು ತುಂಬಿಕೊಳ್ಳುವ ಗೇರು ಹಣ್ಣಿನ ಮರಗಳು ಕಳೆದ ವರ್ಷದಂತೆ ಈ ಬಾರಿಯೂ ತಡವಾಗಿ ಹೂ ಬಿಟ್ಟು ಈಗ ನಿಧಾನವಾಗಿ ಫಸಲು ತುಂಬಿಕೊಳ್ಳುತ್ತಿವೆ. ಡಿಸೆಂಬರ್‌ ತಿಂಗಳ ವರೆಗೂ ಸುರಿದ ಮಳೆಯಿಂದ ಗೇರು ಮರಗಳು ಹೂ ಬಿಡಲು ತಡವಾಗಿದೆ. ಆರಂಭದಲ್ಲಿ ಚಳಿ, ಅನಂತರ ಸೆಕೆಯ ವಾತಾವರಣ ಗೇರು ಫಸಲಿಗೆ ಪೂರಕ. ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ ವಾತಾವರಣ ಬಿಸಿ ಏರಿದಂತೆ ಗೇರು ಫಸಲು ಹೆಚ್ಚುತ್ತದೆ ಎಂಬುದು ಗೇರು ಕೃಷಿ ತಜ್ಞರ ಅಭಿಪ್ರಾಯ. ಪ್ರಸ್ತುತ ಇದೇ ರೀತಿಯ ವಾತಾವರಣ ಇದೆ. 

ಮಳೆ ಬಂದರೆ ಬೆಳೆ, ಬಾರದಿದ್ದರೆ ಬೆಲೆ
ಗೇರು ಮರ ಹೂಬಿಟ್ಟ ಬಳಿಕ ಅಂದರೆ ಫೆಬ್ರವರಿ, ಮಾರ್ಚ್‌ ಹಾಗೂ ಎಪ್ರಿಲ್‌ ತಿಂಗಳಲ್ಲಿ ಒಂದೆರಡು ಸಾಮಾನ್ಯ ಮಳೆಯಾದರೆ ಗೇರು ಬೀಜ ಫಸಲು ಹೆಚ್ಚಾಗುತ್ತದೆ. ಆದರೆ ನಿರಂತರ ಮಳೆ ಸುರಿದರೆ, ಮೋಡ 
ಇದ್ದರೆ ಅಥವಾ ಮಂಜಿನ ವಾತಾವರಣ ಹೆಚ್ಚಿದ್ದರೆ ಹೂವು ಕರಟಿ ಫ‌ಸಲು ಕಡಿಮೆಯಾಗುತ್ತದೆ. ಈ ಬಾರಿ ಫೆಬ್ರವರಿಯಲ್ಲಿ 
ಸಣ್ಣ ಪ್ರಮಾಣದಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ ಗೇರು ಕೃಷಿಗೆ ಲಾಭವೇ ಆಗಿದೆ. ಮುಂದೆ ಹತ್ತನಾವ (ಪತ್ತನಾಜೆ) ತನಕ ಮಾರುಕಟ್ಟೆಯಲ್ಲಿ ಗೇರುಬೀಜ ಖರೀದಿಯಾಗುವುದರಿಂದ ದೊಡ್ಡ ಪ್ರಮಾಣದ ಮಳೆ ಬಾರದಿದ್ದರೆ ಹೆಚ್ಚು ಗೇರು ಫಸಲು ಕೈಹಿಡಿಯುವ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ. 

ಉಳ್ಳಾಲ ತಳಿಗಳಿಗೆ ಬೇಡಿಕೆ
ಕರಾವಳಿ ಭಾಗದಲ್ಲಿ ಊರಿನ ತಳಿಗಳ ಜತೆಗೆ ಉಳ್ಳಾಲ-3, ಭಾಸ್ಕರ, ವಿಆರ್‌ಐ 3 ಮೊದಲಾದ ತಳಿಗಳಿವೆ. ಉಳ್ಳಾಲ-3 ತಳಿ ಮಾತ್ರ ಬೇಗ ಹೂ ಬಿಡುತ್ತವೆ. ಉಳಿದವು ಸ್ವಲ್ಪ ತಡವಾಗುತ್ತವೆ. ಈ ತಳಿಗಳಲ್ಲಿ ಉತ್ತಮ ಫ‌ಸಲು ಬರುವುದರಿಂದ ಇದಕ್ಕೆ ಬೇಡಿಕೆಯೂ ಹೆಚ್ಚಿದೆ.

ಇಲ್ಲೊಂದು ರೀತಿ, ಅಲ್ಲೊಂದು ರೀತಿ
ಬೆಂಬಲ ಬೆಲೆಯಿಂದ ಬೆಳೆಗಾರರಿಗೆ ಉಪಕಾರವಾಗಬೇಕಿತ್ತು. ಆದರೆ ಇಲ್ಲಿ ಅಪಕಾರವಾಗಿದೆ. ಕಚ್ಚಾ ಗೇರುಬೀಜಕ್ಕೆ ಮಳೆ ಬಿದ್ದ ಮೇಲೆ ಬೆಲೆಯೇ ಇಲ್ಲದಂತಾಗುತ್ತದೆ. ಆದುದರಿಂದ ಯಾವುದೇ ಬೆಳೆಗಾರ ಅಂತಹ 
ಅಪಾಯವನ್ನು ಎದುರಿಸಲು ಸಿದ್ಧನಾಗಿರುವುದಿಲ್ಲ. ಇದನ್ನು ಗೇರು ಉತ್ಪನ್ನಗಳ ಸಂಸ್ಕರಣಾ ಘಟಕಗಳವರು ಚೆನ್ನಾಗಿ ತಿಳಿದಿದ್ದು, ಆ ದಾಳವನ್ನು ಈಗ ಉರುಳಿಸುತ್ತಿದ್ದಾರೆ. 

ದಾಖಲೆ ನಿರ್ಮಿಸಿದ ಗೇರು
2015ನೇ ಸಾಲಿನಲ್ಲಿ 80ರಿಂದ 90 ರೂ.ಗೆ ಖರೀದಿಯಾಗಿದ್ದ ಗೇರುಬೀಜ 2016ನೇ ಸಾಲಿನಲ್ಲಿ ಗರಿಷ್ಠ 120-130 ರೂ. ತನಕವೂ ಖರೀದಿಯಾಗಿದೆ. 2017ನೇ ಸಾಲಿನಲ್ಲಿ ಆರಂಭದಲ್ಲೇ ಮಾರುಕಟ್ಟೆಯಲ್ಲಿ 150 ರೂ.ಗೆ ಖರೀದಿಯಾಗಿದೆ. 2015ರ ಮೊದಲು 50 ರೂ.ಗಿಂತ ಕೆಳಗಿನ ದರದಲ್ಲಿ ಹೊಯ್ದಾಡುತ್ತಿದ್ದ ಗೇರುಬೀಜ ದರ ಕಳೆದ 4 ವರ್ಷಗಳಿಂದ ಏರಿಕೆ ಹಾದಿಯಲ್ಲೇ ಸಾಗಿ 150 ರೂ. ತನಕ ತಲುಪಿ ದಾಖಲೆ ನಿರ್ಮಿಸಿತ್ತು. ರಬ್ಬರ್‌, ಅಡಿಕೆ ಮಧ್ಯೆ ಅಳಿದುಳಿದ ಗೇರು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಆದರೆ ಈಗ ಮತ್ತೆ ಕೇರಳ ಲಾಬಿ ಚಿಂತೆಯನ್ನು  ಮೂಡಿಸಿದೆ.

– ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.