ಮಾಡಕ್ಕಲ್ ತೂಗು ಸೇತುವೆ ಅವಶೇಷ ತೆರವು ಆರಂಭ
Team Udayavani, Mar 8, 2018, 5:33 PM IST
ಕಾಸರಗೋಡು: ಹಿನ್ನೀರಿನಲ್ಲಿ ಕುಸಿದು ಬಿದ್ದ ಮಾಡಕ್ಕಲ್ ತೂಗುಸೇತುವೆಯ ಅವಶೇಷಗಳನ್ನು ತೆರವುಗೊಳಿಸಲು ಪ್ರಕ್ರಿಯೆ ಆರಂಭಗೊಂಡಿದೆ. ಎರ್ನಾಕುಳಂನ ಖಾಸಗಿ ಕಂಪೆನಿಯೊಂದರ ತಜ್ಞ ಕಾರ್ಮಿಕರು ಹಿನ್ನೀರಿನಲ್ಲಿ ಹೂತು ಹೋಗಿರುವ ತೂಗು ಸೇತುವೆಯ ಕಬ್ಬಿಣದ ಸ್ಟ್ರಕ್ಚರ್‌ಗಳನ್ನು ತೆರವುಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.
ಮುಳುಗು ತಜ್ಞರು ಮಾಸ್ಕ್ ಮತ್ತು ಆಕ್ಸಿಜೆನ್ ಸಿಲಿಂಡರ್‌ಗಳನ್ನು ಬಳಸಿಕೊಂಡು ಹಿನ್ನೀರಿನ ತಳದಲ್ಲಿ ಹೂತು ಹೋಗಿರುವ ಕಬ್ಬಿಣದ ಅವಶೇಷಗಳನ್ನು ಮೇಲೆತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಗ್ಯಾಸ್ ಕಟ್ಟರ್‌ಗಳನ್ನು ಬಳಸಿ ನೀರಿನಲ್ಲಿ ಮುಳುಗಿರುವ ಕಬ್ಬಿಣದ ಅವಶೇಷಗಳನ್ನು ತುಂಡರಿಸಿ ತೆರವುಗೊಳಿಸಲಿದ್ದಾರೆ. ಕಬ್ಬಿಣವನ್ನು ತುಂಡರಿಸಲು ಕನಿಷ್ಠ ಒಂದು ವಾರವಾದರೂ ಬೇಕೆಂದು ಅಂದಾಜಿಸಲಾಗಿದೆ. ಒಂದು ವಾರದಲ್ಲಿ ತುಂಡರಿಸಿದ ಭಾಗಗಳನ್ನು ದಡಕ್ಕೆ ತರಲು ಆರಂಭಿಸಬಹುದು.
ಸುಮಾರು 15ರಷ್ಟು ಕಾರ್ಮಿಕರು ತೆರವು ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಈ ತಂಡಕ್ಕೆ ಕಬ್ಬಿಣದ ಭಾಗಗಳನ್ನು ದಡಕ್ಕೆ ತರಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಎಲ್ಲಾ ಅವಶೇಷಗಳನ್ನು ತೆರವುಗೊಳಿಸಲು ಕನಿಷ್ಠ ಎರಡು ತಿಂಗಳಾದರೂ ಬೇಕಾಗಬಹುದೆಂದು ಕಾರ್ಮಿಕರು ಹೇಳುತ್ತಿದ್ದಾರೆ. ಸೇತುವೆಯ ಕಾಂಕ್ರೀಟ್ ಭಾಗ ತೆರವಿಗೆ ಈ ತಂಡದೊಂದಿಗೆ ಯಾವುದೇ ಒಡಂಬಡಿಕೆ ಮಾಡಿಕೊಂಡಿಲ್ಲ.
4 ಕೋ.ರೂ.; ಎರಡೇ ವರ್ಷ
ವಲಿಯಪರಂಬ ಗ್ರಾ. ಪಂ.ನ ಮಾಡಕ್ಕಲ್ – ವಡಕೆವಳಪ್ಪು ತೂಗು ಸೇತುವೆ ನಾಲ್ಕು ವರ್ಷಗಳ ಹಿಂದೆ ಕುಸಿದು ಬಿದ್ದಿತ್ತು. ನಾಲ್ಕು ಕೋ. ರೂ. ವೆಚ್ಚದಲ್ಲಿ ನಿರ್ಮಿಸಿದ ತೂಗು ಸೇತುವೆ ಉದ್ಘಾಟನೆಗೊಂಡು ಕೇವಲ ಎರಡೇ ತಿಂಗಳಲ್ಲಿ ಕುಸಿದು ಬಿದ್ದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್
Women’s Ashes Series: ಆಸ್ಟ್ರೇಲಿಯ-ಇಂಗ್ಲೆಂಡ್ ಬಿಗ್ ಫೈಟ್
Assam: ಕಲ್ಲಿದ್ದಲು ಗಣಿ ಒಳಗೆ ಪ್ರವಾಹ: 3 ಸಾವು, 6 ಕಾರ್ಮಿಕರು ನಾಪತ್ತೆ!
Life threat: ಸಲ್ಮಾನ್ ಮನೆ ಬಾಲ್ಕನಿಗೆ ಬುಲೆಟ್‌ಪ್ರೂಫ್ ಗಾಜು
Pushpa 2: ಕಾಲ್ತುಳಿತದ ಗಾಯಾಳು ಬಾಲಕನ ಭೇಟಿಯಾದ ಅಲ್ಲು ಅರ್ಜುನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.