ಬಂಟ್ವಾಳದಲ್ಲಿ ಗರಿಷ್ಠ, ಹೆಬ್ರಿಯಲ್ಲಿ ಕನಿಷ್ಠ ಸಂಖ್ಯೆಯಲ್ಲಿ ಮತದಾರರು
ಪರಿಷತ್ ಚುನಾವಣೆ: ದ.ಕ. ಸ್ಥಳೀಯಾಡಳಿತ ಕ್ಷೇತ್ರ
Team Udayavani, Nov 28, 2021, 6:35 AM IST
ಮಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದಲ್ಲಿ ಬಂಟ್ವಾಳ ತಾಲೂಕು ಅತೀ ಹೆಚ್ಚು ಅಂದರೆ 903 ಮತ್ತು ಹೆಬ್ರಿ ತಾಲೂಕು ಹೆಚ್ಚು ಅತೀ ಕಡಿಮೆ ಅಂದರೆ 122 ಮತದಾರರನ್ನು ಹೊಂದಿದೆ.
ದ.ಕ. ದಲ್ಲಿ 3,535 ಹಾಗೂ ಉಡುಪಿಯಲ್ಲಿ 2,505 ಸೇರಿದಂತೆ ಒಟ್ಟು 6,040 ಮತದಾರರಿದ್ದಾರೆ. ಇದರಲ್ಲಿ ಒಟ್ಟು 377 ಗ್ರಾ.ಪಂ.ಗಳ 5,677 ಸದಸ್ಯರು, ಒಂದು ಮಹಾನಗರ ಪಾಲಿಕೆಯ 68, ಮೂರು ನಗರಸಭೆಗಳ 105, ನಾಲ್ಕು ಪುರಸಭೆಗಳ 120 ಹಾಗೂ ನಾಲ್ಕು ಪಟ್ಟಣ ಪಂಚಾ ಯತ್‌ಗಳ 70 ಸದಸ್ಯರಿದ್ದಾರೆ.
ಮತಗಟ್ಟೆಗಳ ಪ್ರಕಾರ ಉಡುಪಿ ಜಿಲ್ಲೆಯ ಯಡಮೊಗೆ ಗ್ರಾ.ಪಂ. ಮತಗಟ್ಟೆ ಅತೀ ಕಡಿಮೆ 4 ಮತದಾರರನ್ನು ಹೊಂದಿದೆ. ದ.ಕ. ಜಿಲ್ಲೆಯಲ್ಲಿ ಮಡಪ್ಪಾಡಿ ಗ್ರಾ.ಪಂ. ಮತಗಟ್ಟೆ ಹಾಗೂ ಕೊಣಾಜೆ ಗ್ರಾ.ಪಂ. ಮತಗಟ್ಟೆಯಲ್ಲಿ ಅತಿ ಕಡಿಮೆ ಅಂದರೆ ತಲಾ ಐವರು ಮತದಾರರಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಮತಗಟ್ಟೆಯಲ್ಲಿ ಗರಿಷ್ಠ 68 ಹಾಗೂ ಉಡುಪಿಯಲ್ಲಿ ಶಿರೂರು ಗ್ರಾ.ಪಂ. ಮತಗಟ್ಟೆಯಲ್ಲಿ ಗರಿಷ್ಠ 44 ಮತದಾರರಿದ್ದಾರೆ.
ಇದನ್ನೂ ಓದಿ:ಮುಂಬೈಗೆ ಬರುವ ಆಫ್ರಿಕನ್ನರಿಗೆ ಕಡ್ಡಾಯ ಕೊರೊನಾ ಪರೀಕ್ಷೆ
ಮಹಿಳಾ ಮತದಾರರ ಪ್ರಾಬಲ್ಯ
ದ.ಕ. ಸ್ಥಳೀಯಾಡಳಿತ ಕ್ಷೇತ್ರದ ಮತದಾರರಲ್ಲಿ ಎರಡೂ ಜಿಲ್ಲೆಗಳಲ್ಲೂ ಮಹಿಳಾ ಮತದಾರರು ಅಧಿಕ ಸಂಖ್ಯೆಯಲ್ಲಿದ್ದಾರೆ. ಒಟ್ಟು 6,040 ಮತದಾರರಲ್ಲಿ 3,123 ಮಹಿಳಾ ಮತದಾರರು. 2,917 ಪುರುಷ ಮತದಾರರಿದ್ದಾರೆ. ಉಡುಪಿ ಜಿಲ್ಲೆಯ ಒಟ್ಟು 2,505 ಮತದಾರರಲ್ಲಿ 1,298 ಮಹಿಳಾ ಹಾಗೂ 1,207 ಪುರುಷರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,535 ಮತದಾರರಲ್ಲಿ 1,710 ಪುರುಷರು ಹಾಗೂ 1,825 ಮಹಿಳಾ ಮತದಾರರಿದ್ದಾರೆ.
ಮಂಗಳೂರಿನಲ್ಲಿ ಮತ ಎಣಿಕೆ
ಡಿ. 10ರಂದು ಮತದಾನ ಬಳಿಕ ಮತಪೆಟ್ಟಿಗೆಗಳನ್ನು ಡಿಮಸ್ಟರಿಂಗ್ ಕೇಂದ್ರಗಳಿಂದ ತಂದು ಮಂಗಳೂರಿನ ಪಾಂಡೇಶ್ವರದ ರೊಸಾರಿಯೋ ಪದವಿಪೂರ್ವ ಕಾಲೇಜಿನಲ್ಲಿ 10 ಸ್ಟ್ರಾಂಗ್ ರೂಂಗಳಲ್ಲಿ ಇಡಲಾಗುವುದು. ಡಿ. 14ರಂದು ಇಲ್ಲಿ ಮತ ಎಣಿಕೆಯ ನಡೆಯಲಿದೆ. ಎರಡು ಹಾಲ್‌ಗಳಲ್ಲಿ ತಲಾ 7 ಟೇಬಲ್‌ಗಳನ್ನು ಅಳವಡಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.