ಪುರಭವನದ ಬಾಡಿಗೆ ದರ ಇಳಿಕೆ ಮೇಯರ್‌ಗೆ ಕಲಾವಿದರಿಂದ ಸಮ್ಮಾನ
Team Udayavani, Jul 4, 2017, 3:45 AM IST
ಮಹಾನಗರ: ಯಕ್ಷಗಾನ, ನಾಟಕ ಮುಂತಾದ ಉಚಿತ ಕಾರ್ಯಕ್ರಮಗಳಿಗೆ ಪುರಭವನದ ಬಾಡಿಗೆಯನ್ನು ಕಡಿತಗೊಳಿಸಿರುವುದನ್ನು ಸ್ವಾಗತಿಸಿರುವ ಮಂಗಳೂರಿನ ಕಲಾವಿದರ ಸಂಘಟನೆಗಳು ಸೋಮವಾರ ಮಂಗಳೂರು ಮೇಯರ್ ಕವಿತಾ ಸನಿಲ್ ಅವರನ್ನು ಭೇಟಿ ಮಾಡಿ ಸಮ್ಮಾನಿಸಿ ಗೌರವಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಮೇಯರ್ ಕವಿತಾ ಸನಿಲ್ ಅವರು, ಯಕ್ಷಗಾನ, ನಾಟಕ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಲು ಕಷ್ಟವಾಗುತ್ತಿರುವ ಇಂದಿನ ದಿನಗಳಲ್ಲಿ ಕಲಾವಿದರ ನೋವಿಗೆ ಸ್ಪಂದಿಸಿ ಬಾಡಿಗೆ ದರವನ್ನು ಕಡಿತಗೊಳಿಸಲಾಗಿದೆ. ಕಲಾವಿ ದರು ನಿತ್ಯ ತನ್ನ ಕಲಾ ಚಟುವಟಿಕೆಗಳ ಮೂಲಕ ಕಲಾರಸಿಕರ ಮನಸು ಗೆಲ್ಲುವಲ್ಲಿ ಶ್ರಮಿಸುವಂತಿರಬೇಕು ಎಂದರು.
ಹಿರಿಯ ರಂಗಕರ್ಮಿ ವಿ. ಜಿ. ಪಾಲ್ ಮಾತನಾಡಿ ಬಹಳ ದಿನಗಳಿಂದ ಪುರಭವನದ ಬಾಡಿಗೆ ದರವನ್ನು ಕಡಿತಗೊಳಿಸಲು ಕಲಾವಿದರು ವಿವಿಧ ರೀತಿಯಲ್ಲಿ ಮನವಿ ಮಾಡಿದ್ದರು. ಆದರೆ ಸೂಕ್ತ ಸ್ಪಂದನೆಯನ್ನು ಯಾರೂ ನೀಡಿರಲಿಲ್ಲ. ಆದರೆ ಮೇಯರ್ ಸ್ಥಾನದಿಂದ ಕವಿತಾ ಸನಿಲ್ ಅವರು ದಿಟ್ಟವಾಗಿ ಹಾಗೂ ತುರ್ತಾಗಿ ಬಾಡಿಗೆ ದರವನ್ನು ಕಡಿಮೆ ಮಾಡುವ ಮೂಲಕ ಕಲಾವಿದರ ಬದುಕಿಗೆ ಬೆಳಕು ನೀಡಿದ್ದಾರೆ ಎಂದರು.
ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ, ಲಕುಮಿ ತಂಡದ ಸಂಚಾಲಕ ಕಿಶೋರ್ ಡಿ. ಶೆಟ್ಟಿ, ಚಾ ಪರ್ಕ ತಂಡದ ಸಂಚಾಲಕ ದೇವದಾಸ ಕಾಪಿಕಾಡ್, ಚಲನಚಿತ್ರ ನಿರ್ದೇಶಕ, ಹಿರಿಯ ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್‌ಬೈಲ್, ಪ್ರಮುಖರಾದ ಸರಪಾಡಿ ಅಶೋಕ್ ಶೆಟ್ಟಿ ದಿನಕರ ಪಚ್ಚನಾಡಿ, ಶಿವಾನಂದ ಕರ್ಕೇರ, ಮೋಹನ್ ಕೊಪ್ಪಳ ಉಪಸ್ಥಿತರಿದ್ದರು. ಕುದ್ರೋಳಿ ಗಣೇಶ್ ಅವರು ಜಾದೂವಿನ ಮೂಲಕ ಮೇಯರ್ ಕವಿತಾ ಸನಿಲ್ ಅವರ ಭಾವಚಿತ್ರವನ್ನು ಪ್ರದಾನ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.