ಸ್ವಚ್ಛ ಭಾರತಕ್ಕಾಗಿ ಪ್ರ ತಿ ಮನಸ್ಸು ಬದಲಾಗಬೇಕು
Team Udayavani, Nov 24, 2017, 3:03 PM IST
ಪುತ್ತೂರು: ಅತಿಯಾದ ಸ್ವಾತಂತ್ರ್ಯ ಸ್ವಚ್ಛತೆಯ ಸಾಮಾಜಿಕ ಕಾಳಜಿಯನ್ನೂ ಮನುಷ್ಯನಿಂದ ದೂರ ಮಾಡಿದೆ. ಸ್ವತ್ಛತೆಯ ವಿಚಾರದಲ್ಲಿ ಸಾಮಾನ್ಯ ಜನತೆಯು ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಪ್ರಶ್ನಿಸುವವರೆಗೆ ಕಾಳಜಿ ತೋರಬೇಕು ಎಂದು ಮಂಗಳೂರು ರಾಮಕೃಷ್ಣ ಮಿಷನ್‌ನ ಶ್ರೀ ಏಕಗಮ್ಯಾನಂದ ಸ್ವಾಮೀಜಿ ಹೇಳಿದರು.
ಸ್ವಚ್ಛ ಪುತ್ತೂರು ಟೀಮ್ ವತಿಯಿಂದ ಸ್ವಚ್ಛ ಪುತ್ತೂರು ನಿರ್ಮಾಣಕ್ಕಾಗಿ ಮುಂದಿನ ವರ್ಷ ಹಮ್ಮಿಕೊಳ್ಳಲಿರುವ ಕಾರ್ಯಕ್ರಮಗಳ ಯಶಸ್ಸಿಗಾಗಿ ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠ ದಲ್ಲಿ ಹಮ್ಮಿಕೊಂಡ ಪೂರ್ವಭಾವಿ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
ನಗರಸಭೆಯಾಗಲಿ, ಪುರಸಭೆಯಾಗಲಿ ತೆರಿಗೆ ವಸೂಲಿ ಮಾಡುತ್ತದೆ ಎಂದು ಸ್ವಚ್ಛತೆ ವಿಚಾರದಲ್ಲಿ ಕೇವಲ ಅವರನ್ನು ಮಾತ್ರ ಹೊಣೆ ಮಾಡುವುದಲ್ಲ. ಬದಲಾಗಿ ಸ್ವಚ್ಛ ಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬರ ಮನಃ ಸ್ಥಿತಿ ಬದಲಾಗಬೇಕು. ನಮ್ಮ ತ್ಯಾಜ್ಯ ನಮ್ಮ ಹೊಣೆ ಎಂಬ ನಿಟ್ಟಿನಲ್ಲಿ ನಾನು ಕಸ ಎಲ್ಲೆಂದರಲ್ಲಿ ಎಸೆಯುವುದಿಲ್ಲ ಎಂಬ ಸಂಕಲ್ಪವನ್ನು ಪ್ರತಿಯೊಬ್ಬರು ಮಾಡಬೇಕು. ಆಗ ಸ್ವಚ್ಛತೆಯ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ಹೇಳಿದ ಅವರು, ಭಾರತ ವಿಶ್ವಗುರು ಎಂದು ಹೇಳುತ್ತಿರುವುದು ಆಕಾಶದಲ್ಲಿ ಚಂದ್ರನನ್ನು ತೋರಿಸಿದ ಹಾಗೆ ಆಗಿದೆ. ಇದನ್ನು ಬಿಟ್ಟು ಕೆಳಹಂತದಲ್ಲೇ ಬದಲಾವಣೆ ಆಗಬೇಕಾಗಿದೆ ಎಂದರು.
ಮನೆ ಜಾಗೃತಿ
ಈ ಬಾರಿ ಸ್ವಚ್ಛ ಪುತ್ತೂರಿಗಾಗಿ ಮನೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮನೆ ಭೇಟಿ ನೀಡುವವರು ಪ್ರತಿಯೊಬ್ಬರ ಮನದಲ್ಲಿ ಸಂಕಲ್ಪ ಮಾಡಿಸುವ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ಒಟ್ಟಾರೆಯಾಗಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಿರಂತರ ತೊಡಗಿಕೊಳ್ಳಬೇಕು ಎಂದರು.
ಸ್ವಚ್ಛ ಪುತ್ತೂರು ಟೀಮ್‌ನ ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ ಮುಂದಿನ ವರ್ಷದಲ್ಲಿ ಸ್ವಚ್ಛತೆಯ ಅಂಗವಾಗಿ ಹಮ್ಮಿ
ಕೊಳ್ಳುವ ಕಾರ್ಯಕ್ರಮದ ಸಂಪೂರ್ಣ ರೂಪರೇಖೆಗಳನ್ನು ತಿಳಿಸಿದರು. ಸಭೆಯಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ನಗರಸಭೆ ಸದಸ್ಯರಾದ ರಾಜೇಶ್ ಬನ್ನೂರು, ಝೊಹರಾ ನಿಸಾರ್ ಅಹಮ್ಮದ್, ಪ್ರಗತಿ ಸ್ಟಡಿ ಸೆಂಟರ್ ಸಂಚಾಲಕ ಗೋಕುಲ್ ನಾಥ್, ಜಗಜೀವನ್‌ದಾಸ್, ರಾಜೇಶ್ ಬೆಜ್ಜಂಗಳ, ಅಬ್ದುಲ್ ಖಾದರ್, ಹರಿಣಿ ಪುತ್ತೂರಾಯ, ಯು. ಪಿ. ಶಿವಾನಂದ, ಗೌರಿ ಬನ್ನೂರು ಉಪಸ್ಥಿತರಿದ್ದರು. ದಿನೇಶ್ ಜೈನ್ ವಂದಿಸಿದರು. ಶ್ಯಾಮ್ ಸುದರ್ಶನ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.