ಬಡವರ ಸೇವೆ ಧ್ಯೇಯವಾಗಲಿ : ಕೃಷ್ಣ ಪಾಲೆಮಾರ್
Team Udayavani, Jul 20, 2017, 6:00 AM IST
ದೇರೆಬೈಲ್: “ಬಡವರ ಮತ್ತು ದೀನ ದಲಿತರ ಸೇವೆಯೇ ನಮ್ಮೆಲ್ಲರ ಧ್ಯೇಯ ವಾಗಬೇಕು. ಆ ಮೂಲಕ ಸಮಾಜದ ಬಡವ-ಬಲ್ಲಿದರ ಕಷ್ಟ, ಕಾರ್ಪಣ್ಯಗಳು ನಿವಾರಣೆ ಆಗಬೇಕು ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಹೇಳಿದರು.
ದೀನ್‌ದಯಾಳ್ ಜನ್ಮಶತಾಬ್ಧದ ಅಂಗವಾಗಿ ದೇರೆಬೈಲ್ ಕೊಂಚಾಡಿ ವಿದ್ಯಾ ಪ್ರೈಮರಿ ಶಾಲೆಯಲ್ಲಿ ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಮತ್ತು ಮಂಗಳೂರು ನಗರ ಉತ್ತರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಸಂಯುಕ್ತ ಆಶ್ರಯ ದಲ್ಲಿ, ಅಮೃತಾನಂದಮಯೀ ಟ್ರಸ್ಟ್ ಬೋಳೂರು ಹಾಗೂ ಅತ್ತಾವರ ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಬೃಹತ್ ವೈದ್ಯಕೀಯ ಶಿಬಿರವನ್ನು ಅವರು ಉದ್ಘಾಟಿಸಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಭಾಸ್ಕರ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕದ್ರಿ ಲಯನ್ಸ್ ಕ್ಲಬ್ ಅಧ್ಯಕ್ಷ ವಿಜಯ ಶೆಟ್ಟಿ ಮಾತನಾಡಿದರು. ಹಿಂದುಳಿದ ಮೋರ್ಚಾದ ಜಿಲ್ಲಾ ಖಜಾಂಚಿ ರಾಮ ಮುಗ್ರೋಡಿ ಪ್ರಸ್ತಾವನೆಗೈದರು. ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಸುರೇಶ ಕರ್ಣೇಡ್ಕರ್, ಅಮೃತಾ ನಂದಮಯೀ ಟ್ರಸ್ಟ್‌ನ ಡಾ| ದೇವದಾಸ್, ಡಾ| ಸುಚಿತ್ರಾ ರಾವ್, ಲಯನ್ಸ್ ಕ್ಲಬ್ ಶಿಬಿರದ ಸಂಯೋಜಕ ಗೋವಿಂದ ಶರ್ಮ, ಡಾ| ಬದರಿನಾಥ್, ಲಿಯೋ ಕ್ಲಬ್‌ನ ಅಧ್ಯಕ್ಷೆ ಪಲ್ಲವಿ ಪೈ, ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ಪೂಜಾ ಪೈ ಉಪಸ್ಥಿತರಿದ್ದರು.
ಬಿಜೆಪಿ ಹಿಂ. ವರ್ಗಗಳ ಮೋರ್ಚಾದ ಅಧ್ಯಕ್ಷ ಭಾಸ್ಕರ್ ಸಾಲ್ಯಾನ್ ಸ್ವಾಗತಿಸಿ, ಉಪಾಧ್ಯಕ್ಷ ನವೀನ್‌ಚಂದ್ರ ಪೂಜಾರಿ ವಂದಿಸಿದರು. ಪ್ರ.ಕಾರ್ಯದರ್ಶಿ ಪ್ರಸನ್ನ ಕುಮಾರ್ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.