ದೇಗುಲದ ಹಣ ಹಿಂದೂ ಸಮಾಜಕ್ಕೇ ವಿನಿಯೋಗವಾಗಲಿ: ಡಾ| ಭಟ್
Team Udayavani, Aug 14, 2017, 8:30 AM IST
ಮಂಗಳೂರು: ದಕ್ಷಿಣ ಭಾರತ ದಲ್ಲಿಯೇ ಮೊದಲ ಬಾರಿಗೆ ಕರಾವಳಿ ತೀರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಮಂಗಳೂರಿನ ಬೆಂಗ್ರೆಯ ಶಿವಾಜಿ ಪಾರ್ಕ್ ಬಳಿ ರವಿವಾರ ಲೋಕಾರ್ಪಣೆಗೊಂಡಿತು.
ವಿಶ್ವ ಹಿಂದೂ ಪರಿಷತ್‌ನ ಸ್ವರ್ಣ ಮಹೋತ್ಸವದ ಪ್ರಯುಕ್ತ ಬೆಂಗ್ರೆಯ ಭಾರತ್ ಮಾತಾ ಶಾಖೆಯ ವಿಶ್ವಹಿಂದೂ ಪರಿಷತ್ ಬಜರಂಗ ದಳದ ವತಿಯಿಂದ ಪ್ರತಿಮೆ ಲೋಕಾ ರ್ಪಣೆಗೊಳಿಸಲಾಯಿತು.
ಧ್ವಜಾರೋಹಣ ನಡೆಸಿ, ದಿಕ್ಸೂಚಿ ಭಾಷಣ ಮಾಡಿದ ಆರ್‌ಎಸ್‌ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯ ಕಾರಿಣಿ ಸದಸ್ಯ ಡಾ| ಕಲ್ಲಡ್ಕ ಪ್ರಭಾಕರ ಭಟ್ ಅವರು, ಹಿಂದೂ ದೇವಾಲಯಗಳ ಹಣವನ್ನು ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಹಾಗೂ ಹಿಂದೂ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ವಿನಿಯೋಗವಾಗು ವಂತೆ ಮುಜರಾಯಿ ಇಲಾಖೆ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.
ಹಿಂದೂ ಧರ್ಮಕ್ಕೆ ಆಘಾತ
ಶಿವಾಜಿ ಹುಟ್ಟುವ ಮುನ್ನವೇ ಹಿಂದೂ ಧರ್ಮ ಸಾಕಷ್ಟು ಸಮಸ್ಯೆ ನೋವುಗಳನ್ನು ಎದುರಿಸುತ್ತಿತ್ತು. ಆದರೆ ಶಿವಾಜಿ ಹುಟ್ಟಿದ ಬಳಿಕ ಆ ಎಲ್ಲ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹೋರಾಟದ ಧ್ವನಿ ಯಾಗಿ ಮೂಡಿಬರುವಲ್ಲಿ ಯಶಸ್ವಿ ಯಾಯಿತು. ಆದರೆ ಈಗ ಕರಾವಳಿ ಯಲ್ಲಿ ಮತ್ತೆ ಹಿಂದೂ ಧರ್ಮಕ್ಕೆ ಆಘಾತಗಳನ್ನು ಉಂಟು ಮಾಡಲಾಗು ತ್ತಿದೆ. ಇಂತಹುದಕ್ಕೆ ನಾವೆಂದೂ ಬೆದರುವುದಿಲ್ಲ. ಹಾಗೂ ಇಂತಹ ಎಲ್ಲ ಅಕ್ರಮಗಳನ್ನು ನಾವು ಮೆಟ್ಟಿ ನಿಲ್ಲಲು ಸರ್ವಸನ್ನದ್ಧರಾಗಿದ್ದೇವೆ ಎಂದು ಡಾ| ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದರು.
ಪ್ರತಿಮೆ ಲೋಕಾರ್ಪಣೆಗೊಳಿಸಿದ ಮಹಾರಾಷ್ಟ್ರ ಗೃಹಸಚಿವ ದೀಪಕ್ ವಸಂತ್‌ರಾವ್ ಕೆಸರ್‌ಕರ್ ಅವರು ಮಾತನಾಡಿ, ಶಿವಾಜಿ ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಲ್ಲ. ಶಿವಾಜಿಯ ಆದರ್ಶಗಳು ಹಿಂದೂ ಧರ್ಮಕ್ಕೆ ಎಂದೆಂದಿಗೂ ಅನುಕ ರಣೀಯ. ಈ ನಿಟ್ಟಿನಲ್ಲಿ ಮಂಗಳೂರಿನ ಕಡಲ ತೀರದಲ್ಲಿ ಶಿವಾಜಿ ಪ್ರತಿಮೆ ಅನಾವರಣಗೊಳಿಸಿರುವುದು ಶ್ಲಾಘ ನೀಯ ಎಂದರು.
ಸುರತ್ಕಲ್‌ನ ಮಾತಾ ಡೆವಲಪರ್ ಪ್ರೈ.ಲಿ.ನ ಸಂತೋಷ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಶರಣ್ ಪಂಪ್‌ವೆಲ್, ವಿಹಿಂಪ ಜಿಲ್ಲಾ ಕಾರ್ಯಾಧ್ಯಕ್ಷ ಜಗದೀಶ ಶೇಣವ, ಧಾರ್ಮಿಕ ಮುಖಂಡ ಶ್ರೀಕರ ಪ್ರಭು, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಬಜರಂಗದಳ ಸಂಯೋಜಕರಾದ ಭುಜಂಗ ಕುಲಾಲ್, ಪ್ರವೀಣ್ ಕುತ್ತಾರ್, ವಿಹಿಂಪ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್, ಬೆಂಗ್ರೆ ಮಹಾಜನಾ ಸಭಾ ಅಧ್ಯಕ್ಷ ಮೋಹನ್ ಬೆಂಗ್ರೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.