Bantwal: ಕಟ್ಟಡ ತೆರವಿನ ಅನುದಾನ ಹೊಣೆ ಪುರಸಭೆಗೆ
ಬಿ.ಸಿ.ರೋಡು: ಅಂಬೇಡ್ಕರ್ ವಸತಿ (ಆಶ್ರಮ) ಶಾಲೆಯ ಕಟ್ಟಡ ಶಿಥಿಲ
Team Udayavani, Aug 14, 2024, 1:09 PM IST
ಬಂಟ್ವಾಳ: ಕಟ್ಟಡ ಶಿಥಿಲಾವಸ್ಥೆಯಲ್ಲಿದೆ ಎನ್ನುವ ಕಾರಣಕ್ಕೆ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವ ಬಿ.ಸಿ.ರೋಡಿನ ಭಾರತರತ್ನ ಡಾ| ಬಿ.ಆರ್. ಅಂಬೇಡ್ಕರ್ ವಸತಿ(ಆಶ್ರಮ) ಶಾಲೆಯ ಹಳೆ ಕಟ್ಟಡದ ತೆರವಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಆದೇಶ ಬಂದಿದ್ದು, ಬಂಟ್ವಾಳ ಪುರಸಭೆಯ ಅನುದಾನ ಬಳಸಿ ಕಟ್ಟಡ ತೆರವಿಗೆ ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಗೆ ಆದೇಶಿಸಲಾಗಿದೆ.
ಬಿ.ಸಿ.ರೋಡ್‌ನ ತಾ.ಪಂ. ಕಚೇರಿ ಬಳಿ ಇರುವ ಆಶ್ರಮ ಶಾಲೆಯು ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿದ್ದು, ಕಟ್ಟಡ ಸುರಕ್ಷಿತ ವಲ್ಲ ಎಂಬ ತಾಂತ್ರಿಕ ವರದಿ ಬಂದ ಹಿನ್ನೆಲೆಯಲ್ಲಿ 2022-23ನೇ ಸಾಲಿನಲ್ಲಿ ಶಾಲೆಯನ್ನು ಬೆಂಜನಪದವಿನ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಸ್ಥಳಾಂತರಗೊಂಡು ವರ್ಷ ಕಳೆದರೂ ಕಟ್ಟಡ ತೆರವಿಗೆ ಅನುಮತಿ ಕೇಳಿ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೂ, ಇಲಾಖೆಯ ಕೇಂದ್ರ ಕಚೇರಿಯಿಂದ ಆದೇಶ ಬಂದಿರಲಿಲ್ಲ.
ಮುಖ್ಯಾಧಿಕಾರಿಗಳಿಗೆ ಪತ್ರ
ಕಟ್ಟಡ ತೆರವಿಗೆ ಯಾವುದೇ ಅಡ್ಡಿ ಇಲ್ಲದಿದ್ದರೂ ಇಲಾಖೆ ಮಾತ್ರ ಸುಮ್ಮನೆ ಕುಳಿತಿದೆ ಎಂಬ ಆರೋಪವೂ ಕೇಳಿಬಂದಿತ್ತು. ಇದೀಗ ಕಳೆದೆರಡು ದಿನಗಳ ಹಿಂದಷ್ಟೇ ತೆರವಿನ ಕುರಿತು ಆದೇಶ ಬಂದಿದ್ದು, ಮುಂದೆ ತೆರವಿನ ಕುರಿತು ಅನುದಾನ ನೀಡುವಂತೆ ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿಗಳಿಗೆ ಪತ್ರ ಬರೆಯ ಬೇಕಿದೆ.ಆದರೆ ಅವರ ಪತ್ರ ಬಂದ ತತ್‌ಕ್ಷಣ ಪುರಸಭೆ ಅದಕ್ಕೆ ಸ್ಪಂದಿಸುತ್ತದೆಯೇ ಅಥವಾ ಅವರು ಕೂಡ ಅನುದಾನ ಲಭ್ಯವಿಲ್ಲ ಎಂಬ ಉತ್ತರ ನೀಡುವ ಸಾಧ್ಯತೆ ಇದೆ. ಆಶ್ರಮ ಶಾಲೆಗೆ ಸ್ಥಳೀಯಾಡಳಿತ ಪುರಸಭೆಯೇ ಆದರೂ ಒಂದು ಕಟ್ಟಡದ ತೆರವಿಗೆ ಪುರಸಭೆಯಿಂದ ಅನುದಾನ ನೀಡುವುದಕ್ಕೆ ಯಾವ ರೀತಿ ಅವಕಾಶಗಳಿವೆ ಎಂಬುದರ ಕುರಿತು ಕೂಡ ಹಲವು ಅಭಿಪ್ರಾಯಗಳಿವೆ.
ಅನುದಾನಕ್ಕಾಗಿ ಮನವಿ
ಪುರಸಭೆಯ ಅನುದಾನ ಬಳಸಿಕೊಂಡು ಆಶ್ರಮ ಶಾಲೆಯ ಕಟ್ಟಡ ತೆರವು ಮಾಡುವಂತೆ ಕಳೆದೆರಡು ದಿನಗಳ ಹಿಂದಷ್ಟೇ ಆದೇಶ ಬಂದಿದ್ದು, ಮುಂದೆ ಪುರಸಭೆಗೆ ಪತ್ರ ಬರೆದು ಅನುದಾನಕ್ಕಾಗಿ ಮನವಿ ಮಾಡಲಿದ್ದೇವೆ. ಅವರು ಅನುದಾನ ನೀಡಿದ ಬಳಿಕ ತೆರವು ಕಾರ್ಯ ನಡೆಯಲಿದೆ. -ಸುನೀತಾ, ಸಹಾಯಕ ನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ, ಬಂಟ್ವಾಳ.
ಕೆಲವು ವರ್ಷ ಬಾಡಿಗೆ ಕಟ್ಟಡ
ಕಟ್ಟಡ ತೆರವು ಪ್ರಕ್ರಿಯೆಗಳು ಪೂರ್ಣ ಗೊಂಡ ಬಳಿಕವೇ ಮುಂದೆ ಇಲಾಖೆಯ ಮೂಲಕ ಹೊಸ ಕಟ್ಟಡಕ್ಕೆ ಕ್ರಿಯಾಯೋಜನೆ ಸಿದ್ಧಗೊಂಡು ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಬೇಕಿದೆ. ಆದರೆ ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳುವುದಕ್ಕೆ ಇನ್ನೂ ಒಂದಷ್ಟು ಸಮಯಗಳು ಹಿಡಿ ಯುವುದರಿಂದ ಸದ್ಯಕ್ಕೆ ಹೊಸ ಕಟ್ಟಡ ನಿರ್ಮಾಣ ಅಸಾಧ್ಯವಾಗಿದ್ದು, ಇನ್ನೂ ಒಂದಷ್ಟು ವರ್ಷ ಬಾಡಿಗೆ ಕಟ್ಟಡದಲ್ಲೇ ಕಾರ್ಯಾಚರಿಸಬೇಕಿದೆ.
4 ದಶಕಗಳಿಂದ ಇಲ್ಲಿ ಕಾರ್ಯಾಚರಿಸು ತ್ತಿದ್ದ ಆಶ್ರಮ ಶಾಲೆಲ್ಲಿ 1-5ನೇ ತರಗತಿಯ ವರೆಗೆ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿದ್ದು, ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಾಮರ್ಥ್ಯ 125 ಆಗಿದೆ. ಆದರೆ ಕೊರೊನಾ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ.
ಪರಿಶೀಲನೆ
ಆಶ್ರಮ ಶಾಲೆಯ ಹಳೆ ಕಟ್ಟಡದ ಬಣ್ಣ ಸಂಪೂರ್ಣ ಮಾಸಿ ಹೋಗಿ ಮೇಲ್ಛಾವಣಿ ಸೇರಿದಂತೆ ಅಲ್ಲಲ್ಲಿ ಕಾಂಕ್ರೀಟ್ ಪುಡಿ ಬೀಳುತ್ತಿದ್ದವು. ಕಬ್ಬಿಣಗಳು ಸಂಪೂರ್ಣ ತುಕ್ಕು ಹಿಡಿದಿತ್ತು. ಹೀಗಾಗಿ ಸಂಬಂಧಪಟ್ಟ ಎಂಜಿನಿಯರ್‌ಗಳು ಪರಿಶೀಲಿಸಿ ಯೋಗ್ಯ ವಲ್ಲ ಎಂಬ ವರದಿ ನೀಡಿದ್ದರು. ಸಮಾಜ ಕಲ್ಯಾಣ ಇಲಾಖೆಯ ಕಮೀಷನರ್ ಡಾ| ರಾಕೇಶ್ ಕುಮಾರ್ ಕೆ. ಕೂಡ ಭೇಟಿ ನೀಡಿ ಕಟ್ಟಡವನ್ನು ಪರಿಶೀಲನೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.