ನೆಡುತೋಪಿನ ಗಿಡಗಳ ಸಂಖ್ಯೆ ಇಳಿಕೆ


Team Udayavani, Jul 18, 2018, 10:29 AM IST

18-july-1.jpg

ಪುತ್ತೂರು : ಕಾಡು ಬೆಳೆಸಿ ಎಂಬ ಘೋಷಣೆ ಕೇಳಿಬರುತ್ತಿರುವ ನಡುವೆ, ಅರಣ್ಯ ಇಲಾಖೆ ಬೆಳೆಸುವ ಗಿಡಗಳ ಸಂಖ್ಯೆಯಲ್ಲಿ ಕಡಿಮೆ ಆಗುತ್ತಿದೆ. ಹಿಂದಿನ ವರ್ಷಕ್ಕಿಂತ ಈ ವರ್ಷ ಸುಮಾರು 1 ಲಕ್ಷ ಗಿಡಗಳು ವಿತರಣೆಯಲ್ಲಿ ಕಡಿಮೆ ಆಗಲಿವೆ. ಮಂಗಳೂರು ಅರಣ್ಯ ಇಲಾಖೆಯ ವಿಭಾಗದಡಿ ಒಟ್ಟು 8 ವಲಯ ಕಚೇರಿಗಳಿವೆ. ಇವುಗಳಲ್ಲಿ ಒಟ್ಟು 9.50 ಲಕ್ಷದಷ್ಟು ಗಿಡಗಳನ್ನು 2016-17ರಲ್ಲಿ ಬೆಳೆಸಲಾಗಿದೆ. ಇದರಲ್ಲಿ ನೆಡುತೋಪಿಗೆ 7.55 ಲಕ್ಷ, ಸಾರ್ವಜನಿಕ ಹಾಗೂ ಸಂಘ-ಸಂಸ್ಥೆಗಳಿಗೆ 1.95 ಲಕ್ಷ ಗಿಡಗಳನ್ನು ನೀಡಲಾಗಿತ್ತು. 2017-18ನೇ ಸಾಲಿನಲ್ಲಿ 8.58 ಲಕ್ಷ ಗಿಡಗಳನ್ನು ಬೆಳೆಸಿದ್ದು, 92 ಸಾವಿರದಷ್ಟು ಗಿಡಗಳನ್ನು ಹಿಂದಿನ ವರ್ಷಕ್ಕಿಂತ ಕಡಿಮೆ ಬೆಳೆಸಲಾಗಿದೆ. ಅಂದರೆ ಈ ವರ್ಷ ನೆಡುತೋಪಿಗೆ ಬಳಕೆ ಆಗುವ ಗಿಡಗಳ ಸಂಖ್ಯೆ ಕಡಿಮೆ ಆಗಿದೆ. ಇದರಲ್ಲಿ 6.10 ಲಕ್ಷ ಗಿಡಗಳು ಇಲಾಖೆಯ ನೆಡುತೋಪಿಗೆ, 2.48 ಲಕ್ಷ ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗುತ್ತವೆ.

ಗಿಡಗಳು ಕಡಿಮೆ
ಪ್ರತಿವರ್ಷ ಸೆಪ್ಟಂಬರ್‌ನಲ್ಲಿ ಅರಣ್ಯ ಇಲಾಖೆ ಗಿಡಗಳನ್ನು ನಾಟಿ ಮಾಡುತ್ತದೆ. ಈ ಗಿಡಗಳು ಮುಂದಿನ ವರ್ಷ ವಿತರಣೆ ಆಗಲಿದೆ. ಅಂದರೆ 2017-18ನೇ ಸಾಲಿನಲ್ಲಿ ನಾಟಿ ಮಾಡಿದ ಸಸಿಗಳು, 2018ನೇ ಜೂನ್‌- ಜುಲೈನಲ್ಲಿ ವಿತರಣೆ ಮಾಡಲಾಗುತ್ತಿದೆ. 2018-19ನೇ ಸಾಲಿನಲ್ಲಿ ನಾಟಿ ಮಾಡಬೇಕಾಗಿರುವ ಗಿಡಗಳನ್ನು ಮುಂದಿನ ವರ್ಷಕ್ಕೆ ನೀಡಲಾಗುತ್ತದೆ. ಅಂದರೆ ಈ ವರ್ಷ ವಿತರಣೆ ಆಗಲಿರುವ ಗಿಡಗಳ ಪ್ರಮಾಣ ದಲ್ಲಿ 1 ಲಕ್ಷದಷ್ಟು ಇಳಿಕೆ ಕಂಡಿದೆ.

ಪ್ರತಿವರ್ಷ ಮೇಲಧಿಕಾರಿಗಳು ಗಿಡ ಬೆಳೆಸಬೇಕಾದ ಗುರಿಯನ್ನು ಪ್ರತಿ ವಲಯ (ರೇಂಜ್‌)ಕ್ಕೆ ನೀಡುತ್ತಾರೆ. ಇಷ್ಟು ಗಿಡಗಳನ್ನು ವಲಯ ಅರಣ್ಯ ಕಚೇರಿಯಡಿಯ ನರ್ಸರಿಯಲ್ಲಿ ನೆಟ್ಟು ಬೆಳೆಸಲಾಗುತ್ತದೆ. ಇದರಲ್ಲಿ ಸಾರ್ವಜನಿಕರಿಗೆ, ಸಂಘ- ಸಂಸ್ಥೆಗಳಿಗೆ ಹಾಗೂ ನೆಡುತೋಪಿಗೆ ಗಿಡಗಳನ್ನು ವರ್ಗೀಕರಿಸಲಾಗುತ್ತದೆ. 

ನೆಡುತೋಪಿನಲ್ಲಿ ಇಳಿಕೆ
ಸಂರಕ್ಷಿತ ಅರಣ್ಯ ಪ್ರದೇಶಗಳ ತಪ್ಪಲಿನ ಪ್ರದೇಶದ ಹೆಚ್ಚಿನ ಭಾಗದಲ್ಲಿ ಗಿಡಗಳನ್ನು (ನೆಡುತೋಪು) ನೆಟ್ಟು ಬೆಳೆಸಲಾಗಿದೆ. ಇನ್ನು ನೆಡಬೇಕಾಗಿರುವ ಪ್ರದೇಶ ಅರಣ್ಯದ ಒಳಗಿನ ಪ್ರದೇಶ. ಇಲ್ಲಿಗೆ ಗಿಡಗಳನ್ನು ಸಾಗಿಸುವುದು, ಕೂಲಿ ಕಾರ್ಮಿಕರ ರವಾನೆ, ಓಡಾಟ ಕಷ್ಟ. ರಸ್ತೆ ಇಲ್ಲದೇ ಇರುವುದರಿಂದ, ಕಾಲು ನಡಿಗೆಯಲ್ಲೇ ಸಾಗಬೇಕು. ಒಬ್ಬ ಕೂಲಿಯಾಳು ಒಮ್ಮೆ ಕಾಡಿನ ಒಳಗಡೆ ಹೋಗುವಾಗ 1-2 ಗಿಡಗಳನ್ನಷ್ಟೇ ಹೊತ್ತು ಕೊಂಡೊಯ್ಯಬಹುದು. ಅದೂ 6-8 ಕಿಲೋಮೀಟರ್‌ ದೂರ ನಡಿಗೆ ಯಲ್ಲಿ ಸಾಗಿದರೆ ದಿನಕ್ಕೆ ಒಬ್ಬ 4-6 ಗಿಡಗಳನ್ನಷ್ಟೇ ರವಾನೆ ಮಾಡಬಹುದು. ಬಳಿಕ ಗಿಡಗಳನ್ನು ನೆಟ್ಟು ಬೆಳೆಸುವ ಕೆಲಸ ಬೇರೆಯೇ ಇದೆ. ಈ ಹಿನ್ನೆಲೆಯಲ್ಲಿ ಗಿಡಗಳ ಸಂಖ್ಯೆ ಕಡಿಮೆ ಮಾಡಿದ್ದಾಗಿ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಖರ್ಚು, ತ್ರಾಸದಾಯಕ ಕೆಲಸ ತಪ್ಪಿಸುವ ಉದ್ದೇಶದಿಂದ ಹಿಂದಿನ ವರ್ಷ ಸೀಡ್‌ ಬಾಲ್‌ (ಮಣ್ಣಿನ ಬೀಜದುಂಡೆ) ನ್ನು ಕಾಡಿಗೆ ಎಸೆಯುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಇದು ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಂಡಂತೆ ಕಾಣುತ್ತಿಲ್ಲ. ಮಂಗಳೂರು ವಿಭಾಗ ವ್ಯಾಪ್ತಿಯಲ್ಲಿರುವ 1.13 ಲಕ್ಷ ಹೆಕ್ಟೇರ್‌ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 6.10 ಲಕ್ಷ ಗಿಡಗಳು ಈ ಬಾರಿ ನಾಟಿ ಕಾರ್ಯಕ್ಕೆ ಬಳಕೆ ಆಗಲಿದೆ. ಆದರೆ ಹಿಂದಿನ ವರ್ಷ 7.55 ಲಕ್ಷದಷ್ಟು ಗಿಡಗಳು ನಾಟಿ ಆಗಿವೆ. ಸಾರ್ವಜನಿಕ ವಿತರಣೆಯಲ್ಲಿ 53 ಸಾವಿರದಷ್ಟು ಏರಿಕೆ ಕಂಡಿದೆ.

ಅತಿದೊಡ್ಡ ನರ್ಸರಿ ಜಾಲ್ಸೂರು
ಪುತ್ತೂರು ವಲಯ ಅರಣ್ಯಾಧಿಕಾರಿ ವ್ಯಾಪ್ತಿಗೆ ಬರುವ ಜಾಲ್ಸೂರು ನರ್ಸರಿ ಮಂಗಳೂರು ವಿಭಾಗದ ಅತಿದೊಡ್ಡ ನರ್ಸರಿ. ಪ್ರತಿವರ್ಷ ಪುತ್ತೂರು ವಲಯದ ಗಿಡಗಳನ್ನು ಇಲ್ಲಿಯೇ ನಾಟಿ ಮಾಡಲಾಗುತ್ತದೆ. 2016-17ರಲ್ಲಿ 1.58 ಲಕ್ಷದಷ್ಟು ಗಿಡಗಳನ್ನು ಬೆಳೆಸಲಾಗಿತ್ತು. ಈ ವರ್ಷ 82 ಸಾವಿರಕ್ಕೆ ಇಳಿಸಲಾಗಿದೆ. ಅತಿದೊಡ್ಡ ನರ್ಸರಿಯೊಂದರಲ್ಲೇ 76255 ಗಿಡಗಳ ಸಂಖ್ಯೆ ಕಡಿಮೆ ಆಗಿದೆ. ಇದರಲ್ಲಿ 15 ಸಾವಿರ ಗಿಡಗಳನ್ನು ಸಾರ್ವಜನಿಕ ಬಳಕೆಗೆ ನೀಡಿದರೆ, 67 ಸಾವಿರದಷ್ಟು ಗಿಡಗಳನ್ನು ನೆಡುತೋಪಿಗೆ ಬಳಸಿಕೊಳ್ಳಲಾಗುತ್ತಿದೆ.

ಸಬ್ಸಿಡಿ ನೀಡುತ್ತಿದೆ
ಜಾಗ ಇದ್ದ ಕಡೆಗಳಲ್ಲಿ ಗಿಡಗಳನ್ನು ನೆಡುತ್ತಿದ್ದೇವೆ. ಈ ವರ್ಷ 1 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಗಿಡ ನೆಡಲು ಹಾಗೂ ಗಿಡಗಳ ಸಂಖ್ಯೆಯನ್ನು 10 ಲಕ್ಷದಷ್ಟು ಹೆಚ್ಚಿಸಲು ಯೋಜನೆ ರೂಪಿಸಲಾಗುವುದು. ಸೆಪ್ಟಂಬರ್‌ ಬಳಿಕವಷ್ಟೇ ಗಿಡಗಳ ನಾಟಿ ನಡೆಯಲಿದೆ. ಸಾರ್ವಜನಿಕರು ಗಿಡ ನೆಡಬೇಕು ಎಂಬ ದೃಷ್ಟಿಯಿಂದ ಸರಕಾರದಿಂದ ಸಬ್ಸಿಡಿಯನ್ನು ನೀಡಲಾಗುತ್ತಿದೆ.
– ಡಾ| ವಿ. ಕರಿಕಾಲನ್‌,
ಉಪಅರಣ್ಯ ಸಂರಕ್ಷಣಾಧಿಕಾರಿ,
ಮಂಗಳೂರು ವಿಭಾಗ

 ಗಣೇಶ್‌ ಎನ್‌. ಕಲ್ಲರ್ಪೆ 

ಟಾಪ್ ನ್ಯೂಸ್

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

6

Bantwal: ತುಂಬೆ ಜಂಕ್ಷನ್‌; ಸರಣಿ ಅಪಘಾತ

Untitled-1

Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು

Brahmavar

Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.