ಅಡಿಕೆ ಹಾಳೆಯಿಂದ ಪೆನ್ನು !
Team Udayavani, Aug 10, 2017, 8:40 AM IST
ಉಪ್ಪಿನಂಗಡಿ: ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿನಿ ಅಲಿಷಾ ಜೋಸ್ ಅವರು ಅಡಿಕೆ ಹಾಳೆಯಿಂದ ಲೇಖನಿಯನ್ನು ತಯಾರಿಸುವ ಮೂಲಕ ಹಾಳೆಯನ್ನು ಹೀಗೂ ಬಳಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಈಗಾಗಲೇ ಅಡಿಕೆ ಹಾಳೆಯಿಂದ ತಟ್ಟೆ, ಲೋಟಗಳನ್ನು ತಯಾರಿಸಲಾಗುತ್ತಿದೆ. ಪಶು ಆಹಾರವಾಗಿಯೂ ಬಳಸಲಾಗುತ್ತಿದೆ. ಬಳಸಿ ಎಸೆಯುವ ಪ್ಲಾಸ್ಟಿಕ್ ಪೆನ್ನುಗಳಿಂದ ಪರಿಸರಕ್ಕಾಗುವ ಹಾನಿಯನ್ನು ಗ್ರಹಿಸಿದ ವಿದ್ಯಾರ್ಥಿನಿ ಅಲಿಷಾ ಅವರು ಪ್ಲಾಸ್ಟಿಕ್ ಪೆನ್ನಿನ ಬದಲು ಪ್ರಾಕೃತಿಕ ವಸ್ತುಗಳಿಂದ ಪೆನ್ನು ತಯಾರಿಸಲು ಸಾಧ್ಯವೇ ಎಂದು ಚಿಂತಿಸತೊಡಗಿದರು. ಸತತ ಪ್ರಯೋಗದ ಬಳಿಕ ಸುಂದರವಾದ ಅಡಿಕೆ ಹಾಳೆಯ ಪೆನ್ನು ಸಿದ್ಧಗೊಂಡಿತು.
ಹಸಿರ ಸಿರಿ ಕನಸು: ಪ್ರಾಕೃತಿಕ ವಸ್ತುವಿನಿಂದ ಪೆನ್ನು ತಯಾರಿಸಿರುವುದು ಮಾತ್ರ ಅಲಿಷಾ ಜೋಸ್ ಅವರ ಉದ್ದೇಶವಲ್ಲ. ಅಡಿಕೆ ಹಾಳೆಯ ಪೆನ್ನುಗಳ ಮೂಲಕ ಸಸಿಗಳು ಬೆಳೆದು ಹಸಿರು ಸಿರಿ ವ್ಯಾಪಿಸಬೇಕೆಂಬ ಹಂಬಲವೂ ಅಡಗಿದೆ. ಅದಕ್ಕಾಗಿ ಈ ಪೆನ್ನಿನೊಳಗೆ ತಲಾ ಎರಡು ಕಾಳುಗಳನ್ನು ಇರಿಸಲಾಗಿದೆ. ಬಳಸಿ ಎಸೆದ ಪೆನ್ನು ಮಣ್ಣು ಸೇರಿದಾಗ ಅದರಲ್ಲಿದ್ದ ಕಾಳು ಮೊಳಕೆಯೊಡೆದು ಸಸಿಯೊಂದು ಬೆಳೆಯಲಿ ಎನ್ನುವುದೇ ಈ ವಿದ್ಯಾರ್ಥಿನಿಯ ಆಶಯ. ಅಲಿಷಾ ಜೋಸ್ ಶ್ರಮವನ್ನು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕ ಯುಎಸ್‌ಎ ನಾಯಕ್, ಪ್ರಾಂಶುಪಾಲ ರವೀಂದ್ರ ದರ್ಬೆ ಶ್ಲಾ ಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.