ಹಳೆಯಂಗಡಿ ದೇವಾಲಯ ಪವಿತ್ರಾತ್ಮದ ಶಕ್ತಿ ಕೇಂದ್ರ


Team Udayavani, May 1, 2017, 12:55 PM IST

3004HAL-1.jpg

ಹಳೆಯಂಗಡಿ: ಹಳೆಯಂಗಡಿ ಅಮ್ಮನ್‌ ಮೆಮೋರಿಯಲ್‌ ದೇವಾಲಯ 175 ವರ್ಷಗಳ ಇತಿಹಾಸ ಹೊಂದಿದ್ದು, ಪವಿತ್ರಾತ್ಮದ ಶಕ್ತಿ ಕೇಂದ್ರವಾಗಿದೆ. ಪ್ರಾರ್ಥನಾಲಯಗಳು ಸರ್ವಜನರ ಆಧ್ಯಾತ್ಮಿಕ ಕೇಂದ್ರವಾದಲ್ಲಿ ಮಾತ್ರ ನಮ್ಮ ಮುಂದಿನ ಪೀಳಿಗೆಯವರು ಸತ್ಯ, ನಿಷ್ಠೆ, ಸಜ್ಜನಿಕೆಯ ವ್ಯಕ್ತಿಗಳಾಗಿ ಬೆಳೆಯುತ್ತಾರೆ. ಯೇಸು ಕ್ರಿಸ್ತನ ಕೃಪೆಯು ನಮ್ಮನ್ನು ಅನುದಿನವೂ ಸನ್ಮಾರ್ಗದಲ್ಲಿ ಸಾಗಲು ಪ್ರೇರಣೆ ಎಂದು ಕರ್ನಾಟಕ ಸದರ್ನ್ ಡಯಾಸಿಸ್‌ನ ಬಿಷಪ್‌ ರೆ| ಮೋಹನ್‌ ಮನೋರಾಜ್‌ ನುಡಿದರು.

ಅವರು ಹಳೆಯಂಗಡಿಯ ನವೀಕೃತ ಸಿಎಸ್‌ಐ ಅಮ್ಮನ್‌ ಮೆಮೋರಿಯಲ್‌ ಚರ್ಚನ್ನು ರವಿವಾರ ಲೋಕಾರ್ಪಣೆಗೊಳಿಸಿ ಸಂದೇಶ ನೀಡಿದರು.ಸರ್ವರನ್ನು ಸದ್ಧರ್ಮ, ಸೌಹಾರ್ದ,ಸಮನ್ವಯಗಳಿಂದ ಒಗ್ಗೂಡಿಸುವಕೊಂಡಿಯಾಗಿ ಹಳೆಯಂಗಡಿಯ ಸಿಎಸ್‌ಐ ಅಮ್ಮನ್‌ ಸ್ಮಾರಕ ದೇವಾಲಯ ರಾಜ್ಯದಲ್ಲಿಯೇ ಅಪರೂಪದ ಧ್ಯಾನ ಕೇಂದ್ರವಾಗಿರುವುದು ವಿಶೇಷವಾಗಿದೆ ಎಂದರು.

ಸತ್ಯವೇ ದೇವರು ಶಾಸಕ ಅಭಯಚಂದ್ರ ಜೈನ್‌ ಮಾತನಾಡಿ, ಜೀವಿತಾವಧಿಯಲ್ಲಿ ಸತ್ಯ ವನ್ನೇ ದೇವರು ಎಂದು ತಿಳಿದು ಪಾಲಿಸಿದಲ್ಲಿ ಆತನಿಗೆ ದೇವರ ಒಲುಮೆಸದಾ ಸಿಗುತ್ತದೆ. ಸಮಾಜದಲ್ಲಿಯೂ ಆತನ ಸಾವಿನ ಅನಂತರವೂ ಗುಣಗಾನಮಾಡುತ್ತಾರೆ. ಕರಾವಳಿಯಲ್ಲಿ ಪ್ರೊಟೆಸ್ಟಂಟ್‌ ಸಮಾಜವು ಶಿಕ್ಷಣ, ಸಾಮಾಜಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದೆ ಎಂದು ಹೇಳಿದರು.

ಸಮ್ಮಾನ ಚರ್ಚ್‌ ನವೀಕರಣದ ಮುಖ್ಯ ರೂವಾರಿ ಸಭಾಪಾಲಕ ರೆ| ಸೆಬೆಸ್ಟಿನ್‌ ಜೆ. ಜತ್ತನ್ನ, ಅವರ ಪತ್ನಿ ಪ್ರೇಮಲತಾ, ಕಟ್ಟಡದ ಎಂಜಿನಿಯರ್‌ ಮೆಲ್ವಿನ್‌ ಕರ್ಕಡ, ಗುತ್ತಿಗೆದಾರ ಪಿ.ಎಸ್‌. ಶರ್ಮ, ವಿದ್ಯುತ್‌ ಕಾಮಗಾರಿ ನಿರ್ವಹಿಸಿದ ಸ್ಟೀಫನ್‌ ಕರ್ಕಡ ಉಡುಪಿ ಅವರನ್ನು  ಸಮ್ಮಾನಿಸಲಾಯಿತು. ದಾನಿಗಳನ್ನು ಹಾಗೂ ಕಟ್ಟಡ ನಿರ್ಮಾಣದಲ್ಲಿ ಶ್ರಮಿಸಿದ ಕೆಲಸಗಾರರನ್ನು ವಿಶೇಷವಾಗಿ ಪುರಸ್ಕರಿಸಲಾಯಿತು.

ಪುನಃ ಪ್ರತಿಷ್ಠೆ
ನವೀಕರಣಗೊಂಡ ಚರ್ಚ್‌ನ ಪುನಃ ಪ್ರತಿಷ್ಠಾಪನೆಯನ್ನು ಬಿಷಪ್‌ರಾದ ರೆ| ಮೋಹನ್‌ ಮನೋರಾಜ್‌, ರೆ| ಎಡ್ವಿನ್‌ ವಾಲ್ಟರ್‌, ರೆ| ಪ್ರಭುರಾಜ, ರೆ| ಸೆಬೆಸ್ಟಿನ್‌ ಜೆ. ಜತ್ತನ್ನ ಸಹಿತ ಇತರ ಧರ್ಮಗುರುಗಳು ನೆರವೇರಿಸಿದರು.

ಘಂಟಾ ಗೋಪುರ, ಸಭಾಂಗಣ, ಪ್ರವಚನ ಮಂಟಪವನ್ನು ಪ್ರಾರ್ಥನೆಯ ಮೂಲಕ ಅನಾವರಣಗೊಳಿಸಲಾಯಿತು. ಮಕ್ಕಳು ಹಾಗೂ ಸಭಾಸದರಿಂದ ವಿಶೇಷ ಸಂಗೀತದ ಆರಾಧನೆ, ಲಕ್ಷ ಸ್ತೋತ್ರ, ಕಾಣಿಕೆ ಸಮರ್ಪಣೆ ತುಳು ಸಂಗೀತವನ್ನು ಹಾಡುವ ಮೂಲಕ ಚರ್ಚನ್ನು ಧಾರ್ಮಿಕ ಪ್ರಾರ್ಥನಾ ವಿಧಿ ವಿಧಾನದಿಂದ ಲೋಕಾ ರ್ಪಣೆಗೊಳಿಸಲಾಯಿತು.

ಭಾಗವಹಿಸಿದ ಗಣ್ಯರು
ಮಂಗಳೂರು ಮನಪಾ ನಾಮ ನಿರ್ದೇಶಿತ ಸದಸ್ಯ ಸ್ಟೀಫನ್‌ ಮರೋಳಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಧಿಕಾರದ ಸದಸ್ಯ ಎಚ್‌. ವಸಂತ ಬೆರ್ನಾಡ್‌, ರೆ| ಎಸ್‌.ಡಿ. ಐಮನ್‌, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್‌ ಖಾದರ್‌, ಶರ್ಮಿಳಾ ಕೋಟ್ಯಾನ್‌, ಅಬ್ದುಲ್‌ ಅಜೀಜ್‌, ಎಚ್‌. ಹಮೀದ್‌, ಕಾಂಗ್ರೆಸ್‌ ಅಲ್ಪಸಂಖ್ಯಾಕ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಸಾಹುಲ್‌ ಹಮೀದ್ ಕದಿಕೆ, ಕರ್ನಾಟಕ ಸದರ್ನ್ ಡಯಾಸಿಸ್‌ನ ಕೋಶಾಧಿಧಿಕಾರಿ ವಿಲ್ಫೆ†ಡ್‌ ಪಾಲನ್‌, ವಲಯಾಧ್ಯಕ್ಷ ರೆ| ಪ್ರಭುರಾಜ, ಕಟ್ಟಡ ಸಮಿತಿ ಕೋಶಾಧಿಕಾರಿ ಮೋಸೆಸ್‌ ಅಮ್ಮನ್ನ ಉಪಸ್ಥಿತರಿದ್ದರು.ಕಟ್ಟಡ ಸಮಿತಿ ಕಾರ್ಯದರ್ಶಿ ಶೆರ್ಲಿ ಬೆರ್ನಾಡ್‌ ಸ್ವಾಗತಿಸಿದರು. ಸಭಾಪಾಲಕ ರೆ| ಸೆಬೆಸ್ಟಿನ್‌ ಜೆ. ಜತ್ತನ್ನ ಪ್ರಸ್ತಾವನೆಗೈದರು.ಪಾಸ್ಟ್ರೆಡ್‌ ಸಮಿತಿ ಕಾರ್ಯದರ್ಶಿ ರೆನಿಟಾ ಎನ್‌. ಕರ್ಕಡ  ಅವರು ವಂದಿಸಿದರು.

ಪ್ರಾರ್ಥನೆ ಜೀವನಾಧಾರವಾಗಲಿ
ದೇವರ ಸಾನ್ನಿಧ್ಯಕ್ಕೆ ಮನೆ-ಮನಗಳಲ್ಲಿ ಪ್ರಾರ್ಥನೆ ನಡೆಸಬೇಕು. ಮಕ್ಕಳು ವೈಯಕ್ತಿಕ, ತಂದೆ – ತಾಯಿ ಕುಟುಂಬಕ್ಕೆ ಪ್ರಾರ್ಥಿಸಬೇಕು, ದುಷ್ಟ ಶಕ್ತಿಗಳನ್ನು ದೂರಮಾಡಲು, ಮನಸ್ಸನ್ನು ಹತೋಟಿಯಲ್ಲಿಡಲು ಪ್ರಾರ್ಥನೆ ಪರ್ಯಾಯ ಶಕ್ತಿ, ಸತ್ಯ-ನೀತಿ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಮಕ್ಕಳು ಹೆತ್ತವರ ಸಂಬಂಧ ಕದಡುತ್ತಿರುವ ಈ ದಿನದಲ್ಲಿ ಪ್ರಾರ್ಥನೆ-ಧ್ಯಾನವೇ ಸೂಕ್ತ ಪರಿಹಾರ.
– ರೆ| ಮೋಹನ್‌ ಮನೋರಾಜ್‌, 
ಬಿಷಪರು, ಕರ್ನಾಟಕ ಸದರ್ನ್ ಡಯಾಸಿಸ್‌

ಟಾಪ್ ನ್ಯೂಸ್

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.