“ಭಾಗ್ಯಲಕ್ಷ್ಮಿ’ ಯೋಜನೆ ಪ್ರಯೋಜನ ಪಡೆಯಲು ಹೆತ್ತವರ ಪರದಾಟ

Team Udayavani, Aug 6, 2017, 6:25 AM IST

Bhagya.jpg

ಮಹಾನಗರ: ಹೆಣ್ಣು ಮಕ್ಕಳ ಪ್ರಗತಿಯನ್ನು ಉತ್ತೇಜಿಸಲು ರಾಜ್ಯ ಸರಕಾರ ಜಾರಿಗೊಳಿಸಿದ “ಭಾಗ್ಯಲಕ್ಷ್ಮಿ’ ಯೋಜನೆಯ ಪ್ರಯೋಜನ ಪಡೆಯಲು ಹೆತ್ತವರು ಅಕ್ಷರಶಃ ಪರದಾಡುವಂತಾಗಿದೆ. ಅಷ್ಟಕ್ಕೂ ಇದಕ್ಕೆ ಕಾರಣ ಬಿಪಿಎಲ್‌ ಕಾರ್ಡ್‌ ಕೈ ಸೇರುವಲ್ಲಿ ಆಗುತ್ತಿರುವ ವಿಳಂಬ.

ಈ ಯೋಜನೆಯ ಫಲಾನುಭವಿಗಳಾಗಲು ಅರ್ಜಿ ಸಲ್ಲಿಸುವಾಗ ಬಿಪಿಎಲ್‌ ಕಾರ್ಡ್‌ನ ಪ್ರತಿ ಅಗತ್ಯವಾಗಿ ಬೇಕು. ಆದರೆ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೆ ಕಾದರೂ ಕಾರ್ಡ್‌ ಸಿಗುತ್ತಿಲ್ಲ. “ಇಂದು ಬರುತ್ತದೆ; ನಾಳೆ ಬರುತ್ತದೆ ಎಂದು ಕಾಯುವುದೇ ನಮ್ಮ ಕೆಲಸವಾಗಿದೆ’ ಎನ್ನುತ್ತಾರೆ ಹಲವು ಅರ್ಜಿದಾರರು.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಜನಿಸುವ ಬಡ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಲು 2006-07ರಲ್ಲಿ ಈ ಯೋಜನೆಯನ್ನು ಜಾರಿ ಗೊಳಿಸಲಾಗಿತ್ತು. ಇದರ ಪ್ರಕಾರ ಹೆಣ್ಣು ಮಗು ಜನಿಸಿದ ಒಂದು ವರ್ಷದ ಒಳಗೆ ಜನನ ಪ್ರಮಾಣ ಪತ್ರವನ್ನು ಒದಗಿಸಿ ಯೋಜನೆಗೆ ಅರ್ಜಿ ಸಲ್ಲಿಸ ಬಹುದು. ಯೋಜನೆಯ ಸದುಪಯೋಗ ಪಡೆ ಯಲು ಫಲಾನುಭವಿಗಳು ಕಡ್ಡಾಯವಾಗಿ ಬಿಪಿಎಲ್‌ ಕಾರ್ಡ್‌ ಪ್ರತಿಯನ್ನು ದಾಖಲೆಯಾಗಿ ಸಲ್ಲಿಸಬೇಕು. ಆದರೆ ಅರ್ಜಿ ಸಲ್ಲಿಸಿದ ಬಳಿಕ ಕಾರ್ಡ್‌ ಕೈ ಸೇರಲು ತಿಂಗಳುಗಟ್ಟಲೆ ಕಾಯಬೇಕು. ಇದರಿಂದ ಅತ್ತ ಬಿಪಿಎಲ್‌ ಕಾರ್ಡ್‌ ಬಾರದೇ, ಇತ್ತ ಭಾಗ್ಯಲಕ್ಷ್ಮಿ ಯೋಜನೆಗೂ ಅರ್ಜಿ ಸಲ್ಲಿಸಲಾಗದೇ ಕೈಚೆಲ್ಲುವಂಥ ಸ್ಥಿತಿ ಫ‌ಲಾನುಭವಿಗಳದ್ದು.ಹೆಣ್ಣು ಮಗುವಾದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿದ್ದು, ಕೆಲವರ ಬಳಿ ಬಿಪಿಎಲ್‌ ಕಾರ್ಡ್‌ ಇರುವುದಿಲ್ಲ. ಅಲ್ಲದೇ ಮಗು ಹುಟ್ಟುವ ಮೊದಲೇ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ದ್ದರೂ, ಮಗುವಿನ ಜನನ ಆಗಿ ತಿಂಗಳುಗಳು ಉರುಳಿದರೂ ಕಾರ್ಡ್‌ ಸಿಗುತ್ತಿಲ್ಲ ಎಂಬುದು ಹಲವರ ದೂರು.

ಆರು ತಿಂಗಳಾದರೂ ಬಂದಿಲ್ಲ
ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿರುವ ಕಾವೂರು ನಿವಾಸಿ ಮಲ್ಲಿಕಾ, “ಫೆ. 22ಕ್ಕೆ ಬಿಪಿಎಲ್‌ ಕಾರ್ಡ್‌ಗಾಗಿ ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಿದ್ದೇನೆ. 6 ತಿಂಗಳಾದರೂ ಕಾರ್ಡ್‌ ಬಂದಿಲ್ಲ. ಕಾರ್ಡ್‌ ಬಾರದೇ ಯೋಜನೆಯ ಫಲಾನುಭವಿ ಯಾಗಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ.

“ಸರಕಾರ ಬಡವರಿಗಾಗಿ ಅನೇಕ ಸೇವೆಗಳನ್ನು ಜಾರಿಗೊಳಿಸಿರುವುದಾಗಿ ಹೇಳುತ್ತದೆ. ಆದರೆ ಯೋಜನೆಗಳು ಸಮರ್ಪಕವಾಗಿ ತಲುಪಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಭಾಗ್ಯಲಕ್ಷ್ಮಿ ಯೋಜನೆಗಾಗಿ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ಹಲವು ಮಂದಿ ಬಡ ತಾಯಂದಿರು ಕಾರ್ಡ್‌ ಬಾರದಿರುವುದರಿಂದ ಬಹಳ ಸಮಸ್ಯೆ ಅನುಭವಿಸುತ್ತಿದ್ದಾರೆ’ ಎನ್ನುತ್ತಾರೆ ಅವರು.

12 ವರ್ಷ: 34,959 ಮಂದಿ ಫಲಾನುಭವಿಗಳು
ಭಾಗ್ಯಲಕ್ಷ್ಮಿ ಯೋಜನೆ 2006-07ರಲ್ಲಿ ಜಾರಿಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಒಟ್ಟು 34,959 ಮಂದಿ ಇದರ ಫಲಾನುಭವಿಗಳಾಗಿದ್ದಾರೆ. 2006-07ರಲ್ಲಿ 3,160, 2007-08ರಲ್ಲಿ 3,194, 2008-09ರಲ್ಲಿ 3,725, 2009-10ರಲ್ಲಿ 3,427, 2010-11ರಲ್ಲಿ 3,140, 2011-12ರಲ್ಲಿ 3,113 ಮಂದಿ ಫಲಾನುಭವಿಗಳಾಗಿದ್ದಾರೆ. 2012-13ರಲ್ಲಿ 3,166, 2013-14ರಲ್ಲಿ 1,995, 2014-15ರಲ್ಲಿ 3,303, 2015-16ರಲ್ಲಿ 3,000, 2016-17ರಲ್ಲಿ 2,476 ಹಾಗೂ 2017-18ರಲ್ಲಿ ಜೂನ್‌ವರೆಗೆ 1,260 ಮಂದಿ ಭಾಗ್ಯಲಕ್ಷ್ಮಿ ಯೋಜನೆಯ ಸದುಪಯೋಗವನ್ನು ಪಡೆದಿದ್ದಾರೆ. ಈ ಪೈಕಿ ಮಂಗಳೂರು ತಾಲೂಕಿನಲ್ಲಿ ಕಳೆದ ವರ್ಷ 716 ಮಂದಿ ಫಲಾನುಭವಿಗಳಾಗಿದ್ದು, ನಗರದ 608 ಮತ್ತು ಗ್ರಾಮೀಣ ಭಾಗದ 108 ಮಂದಿ ಇದ್ದಾರೆ. ಪ್ರಸಕ್ತ ವರ್ಷದಲ್ಲಿ ಜೂನ್‌ವರೆಗೆ ಗ್ರಾಮೀಣ ಭಾಗದ 292 ಮತ್ತು ನಗರದ 68 ಮಂದಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ.

ಕಾರ್ಡ್‌ ಬಂದ ತತ್‌ಕ್ಷಣ ವಿತರಣೆ
ಬಿಪಿಎಲ್‌ ಪಡಿತರ ಅರ್ಜಿ ಸಲ್ಲಿಸಿದವರ ಅರ್ಜಿ ಪರಿಶೀಲನೆ ನಡೆದಿದೆ. ಈಗಾಗಲೇ ಜನವರಿಯಿಂದ ಜೂನ್‌ವರೆಗೆ ಒಟ್ಟು 3,150 ಅರ್ಜಿಗಳು ಬಂದಿದ್ದು, ಎಲ್ಲವನ್ನೂ ಅಪ್‌ಲೋಡ್‌ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಸಂಬಂಧಪಟ್ಟ ಇಲಾಖೆಯವರು ಮಂಜೂರು ಮಾಡಿದ ಬಳಿಕ ಕಾರ್ಡ್‌ನ್ನು ಮುದ್ರಣಕ್ಕೆ ಕಳುಹಿಸಲಾಗುತ್ತದೆ. ಮುದ್ರಿತ ಕಾರ್ಡ್‌ಗಳು ಬಂದ ತತ್‌ಕ್ಷಣ ಅರ್ಜಿದಾರರಿಗೆ ವಿತರಿಸಲಾಗುವುದು.

-ಮಹದೇವಯ್ಯ, 
ತಹಶೀಲ್ದಾರ್‌, ಮಂಗಳೂರು

– ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

musk

Elon Musk ಮಾನಸಿಕ ಸ್ಥಿತಿ ಸರಿಯಿಲ್ಲ: ಲೇಖಕ ಅಬ್ರಾಮ್‌ಸನ್‌

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Mangaluru: ಪಿಲಿಕುಳ ಆಯುಕ್ತರ ಅಧಿಕಾರ ಸ್ವೀಕಾರ

Mangaluru: ಪಿಲಿಕುಳ ಆಯುಕ್ತರ ಅಧಿಕಾರ ಸ್ವೀಕಾರ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

musk

Elon Musk ಮಾನಸಿಕ ಸ್ಥಿತಿ ಸರಿಯಿಲ್ಲ: ಲೇಖಕ ಅಬ್ರಾಮ್‌ಸನ್‌

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.