ಸುಳ್ಯಕ್ಕಿಲ್ಲ ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆ 


Team Udayavani, Oct 31, 2017, 5:06 PM IST

31-Mng-16.jpg

ಸುಳ್ಯ: ಭಾಗಮಂಡಲದ ಪಶ್ಚಿಮ ದಿಕ್ಕಿನಿಂದ ಉಗಮಗೊಂಡು ಜೋಡುಪಾಲದಿಂದ ಸುಳ್ಯವನ್ನು ಪ್ರವೇಶಿಸುವ ಪಯಸ್ವಿನಿ ನದಿ ತಾಲೂಕಿನ ಜನರ ಕುಡಿಯುವ, ಕೃಷಿ ಭೂಮಿಯ ಜೀವ ಜಲ. ಬೇಸಗೆಯಲ್ಲಿ ಆಕೆಯನ್ನು ಹಿಡಿದಿಟ್ಟು ಅಂತರ್ಜಲ ಸಂರಕ್ಷಿಸುವ, ದಿನ ಬಳಕೆಗೆ ಬಳಸುವ ಯಾವ ಯೋಜನೆಗಳು ಇಲ್ಲಿ ಅನುಷ್ಠಾನಗೊಂಡೇ ಇಲ್ಲ!

ಕೆಲವು ವರ್ಷಗಳಿಂದ ನದಿ ನೀರಿನ ಮಟ್ಟ ಕುಸಿಯುತ್ತಿದ್ದು, ಸಕಾಲದಲ್ಲಿ ಮಳೆ ಸುರಿಯದಿದ್ದಲ್ಲಿ ನಗರದಲ್ಲಿ ಜಲಕ್ಷಾಮ ಉಂಟಾಗುವುದು ನಿಶ್ಚಿತ. ಕೊನೆ ಹಂತದಲ್ಲಿ ಅಳವಡಿಸುವ ಮರಳಿನ ಚೀಲದ ಕಟ್ಟವೇ ಸುಳ್ಯಕ್ಕೆಈಗಲೂ ಆಸರೆ. ಅದಕ್ಕೊಂದು ಶಾಶ್ವತ ವೆಂಟೆಡ್‌ ಡ್ಯಾಂ ನಿರ್ಮಿಸುವ ಪ್ರಯತ್ನ ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

ನಗರದ ನೀರಿನ ಆವಶ್ಯಕತೆ
ಸುಳ್ಯದ ಹದಿನೆಂಟು ವಾರ್ಡ್‌ಗಳಲ್ಲಿ 2011ರ ಜನಗಣತಿ ಪ್ರಕಾರ 20 ಸಾವಿರಕ್ಕೂ ಮಿಕ್ಕಿ ಜನಸಂಖ್ಯೆ ಇದೆ. 3,625
ಕುಟುಂಬಗಳು ಇಲ್ಲಿವೆ. ದಿನವೊಂದಕ್ಕೆ 1.60 ಎಂಎಲ್‌ಡಿ ನೀರಿನ ಪೂರೈಕೆ ಬೇಕಿದೆ. 3,800ಕ್ಕೂ ಅಧಿಕ
ನಳ್ಳಿ ಸಂಪರ್ಕ ಇದೆ. ಕೊಳವೆ ಬಾವಿ ಹೊರತುಪಡಿಸಿ ನಗರದ ಬಹುತೇಕ ನೀರಿನ ದಾಹ ನೀಗಿಸುವುದು ಆಲೆಟ್ಟಿ ಸಮೀಪದ ಅರಂಬೂರು ಸೇತುವೆ ಬಳಿಯ ಮರಳಿನ ಕಟ್ಟ. ಕಲ್ಲಮುಟ್ಲು ಪಂಪೌ ಹೌಸ್‌ನಿಂದ ನೀರು ಸಂಗ್ರಹಿಸಿ, ಅದನ್ನು ನಳ್ಳಿ ಮೂಲಕ ಪೂರೈಸಲಾಗುತ್ತದೆ. ಬೇಸಗೆ ಕಾಲದ ಕೊನೆಯ ಮೂರು ತಿಂಗಳಲ್ಲಿ ಮರಳಿನ ಕಟ್ಟ ನಿರ್ಮಿಸಿ
ನೀರು ಪೂರೈಸಲಾಗುತ್ತದೆ. 2016ರಲ್ಲಿ ನೀರಿನ ಮಟ್ಟ ಬರಿದಾಗಿ, ನಗರದ ಜನರಿಗೆ ಕುಡಿಯುವ ನೀರಿಗೆ ತತ್ವಾರ
ಉಂಟಾಗಿತ್ತು. ಕೊನೆ ಕ್ಷಣದಲ್ಲಿ ಸುರಿದ ಮಳೆ ಇಡೀ ನಗರವನ್ನು ಪಾರು ಮಾಡಿದ್ದು ಸುಳ್ಳಲ್ಲ.

ಯೋಜನೆ ನನೆಗುದಿಗೆ
ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ನಾಲ್ಕು ವರ್ಷಗಳ ಹಿಂದೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಸರಕಾರಕ್ಕೆ 65.5 ಕೋಟಿ ರೂ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದು ಇನ್ನೂ ಈಡೇರಿಲ್ಲ. ಇಲ್ಲಿನ ಹಲವರು ರಾಜ್ಯ ಮತ್ತು ಕೇಂದ್ರ ಸರಕಾರದಲ್ಲಿ ಸಚಿವ, ಮುಖ್ಯಮಂತ್ರಿ ಸೇರಿದಂತೆ ಪ್ರಭಾವಿ ಹುದ್ದೆಗಳಲ್ಲಿ ಕೆಲಸ ಮಾಡಿದ್ದರೂ ಅವರಿಂದ ಈ ಯೋಜನೆ ಜಾರಿಗೆ ತರಲು ಸಾಧ್ಯವಾಗಿಲ್ಲ. ನಗರ ಪಂಚಾಯತ್‌ ಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಅಪರೂಪಕೊಮ್ಮೆ ವಿಷಯ ಚರ್ಚೆಗೆ ತೆಗೆದುಕೊಂಡರೂ ಪ್ರಸ್ತಾವನೆ ಸರಕಾರದ ಹಂತದಲ್ಲಿದೆ ಎಂಬ ಉತ್ತರದ ಮೂಲಕ ಮುಗಿಯುತ್ತಿದೆ.

ಮಲಿನದ ಭೀತಿ
ಕಳೆದ ವರ್ಷ ಬೇಸಗೆ ಕಾಲದಲ್ಲಿ ಮೀನು ಹಿಡಿಯುವ ನೆಪದಲ್ಲಿ ನದಿ ನೀರಿಗೆ ವಿಷ ಬೆರೆಸಿದ, ಕೋಳಿ ಮತ್ತಿತರ ಮಾಂಸದ ತ್ಯಾಜ್ಯವನ್ನು ನದಿ ನೀರಿಗೆ ಎಸೆದ ಘಟನೆಗಳು ಜರಗಿದ್ದವು. ಆಗ ನ.ಪಂ. ಆಡಳಿತ ಜಾಗೃತಿಯ ಸಂದೇಶ ಹಾಗೂ ನದಿ ನೀರನ್ನು ಮಲಿನಗೊಳಿಸದಂತೆ ಎಲ್ಲ ಮಾಂಸದಂಗಡಿಗಳಿಗೆ ಸೂಚನೆ ನೀಡಿತ್ತು.

ಮತ್ತೆ ಬೇಸಗೆ ಕಾಲಿಡುತ್ತಿದ್ದು, ನದಿ ನೀರಿನ ಮಟ್ಟ ದಿನೇ-ದಿನೇ ಇಳಿಮುಖಗೊಳ್ಳುತ್ತಿದೆ. ಡಿಸೆಂಬರ್‌ ಹೊತ್ತಿಗೆ ಪಯಸ್ವಿನಿಯೇ ನಗರದ ಹಾಗೂ ನದಿ ಹಾದು ಹೋಗಿರುವ ತೀರದ ಜನರ ದಾಹ ತೀರಿಸಬೇಕಿದೆ. ಶುಚಿತ್ವದ ಬಗ್ಗೆ ಗಮನ ಹರಿಸದಿದ್ದರೆ ಸಾಂಕ್ರಾಮಿಕ ರೋಗದ ಭೀತಿ ತಪ್ಪದು.

ಕಳೆದ ವರ್ಷ ಪಯಸ್ವಿನಿಯ ಅರಂಬೂರು, ಅಡ್ಯಾರು, ಪೆರಾಜೆ, ಸಂಪಾಜೆ ಮೊದಲಾದ ಭಾಗಗಳಲ್ಲಿ ಬೀದರ್‌, ರಾಯಚೂರು, ಬಳ್ಳಾರಿ ಕಡೆಯಿಂದ ಬಂದು, ರಾತ್ರಿ ವೇಳೆ ಕಯ ಪ್ರದೇಶಕ್ಕೆ ವಿಷ ಬೆರೆಸಿ ಮರುದಿನ ಮುಂಜಾನೆ ಮೀನು ಹಿಡಿದು ಮಾರಾಟ ಮಾಡಿದ ಪ್ರಕರಣ ಬಯಲಿಗೆ ಬಂದಿತ್ತು. ಈಗ ಒಳಚರಂಡಿ ನೀರು ನದಿಗೆ ಹರಿಯುತ್ತಿದೆ. ಅಂತಹ ಸಂದರ್ಭದಲ್ಲಿ ಖುದ್ದಾಗಿ ಆ ಪ್ರದೇಶಗಳಿಗೆ ನ.ಪಂ. ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಎಚ್ಚರಿಕೆ ನೀಡಿದ್ದರು. ಈ ಬಾರಿ ಜಾಗೃತಿ ಕಾರ್ಯ ಆರಂಭಗೊಂಡಿಲ್ಲ

ವೆಂಟೆಡ್‌ ಡ್ಯಾಂ
ಉಪ್ಪಿನಂಗಡಿಯಲ್ಲಿ ಹಾದು ಹೋಗುವ ಕುಮಾರಧಾರಾ ನದಿಗೆ ವೆಂಟೆಡ್‌ ಡ್ಯಾಂ ನಿರ್ಮಿಸಿ 12 ಕಿ.ಮೀ. ದೂರದಲ್ಲಿರುವ ಪುತ್ತೂರು ನಗರಕ್ಕೆ ನೀರು ಪೂರೈಸಲಾಗುತ್ತದೆ. ಆದರೆ ಸುಳ್ಯದ ಹೃದಯ ಭಾಗದಲ್ಲಿಯೇ ಹರಿಯುವ ನದಿಗೆ ಈ ತನಕ ಡ್ಯಾಂ ನಿರ್ಮಿಸಿಲ್ಲ. ಅದೇ ಬೇಸಗೆಯ ನೀರಿನ ಕೊರತೆಗೆ ಮೂಲ ಕಾರಣ. ಉದ್ದೇಶಿತ ಪ್ರಸ್ತಾವನೆಯಲ್ಲಿ ನಾಗಪಟ್ಟಣ ಬ್ರಿಡ್ಜ್ ಬಳಿ 13.4 ಕೋಟಿ ರೂ. ವೆಚ್ಚದಲ್ಲಿ ವೆಂಟೆಡ್‌ ಡ್ಯಾಂ, ಜಾಕ್‌ವೆಲ್‌, ಪಂಪ್‌ ಹೌಸ್‌ ನಿರ್ಮಾಣ, 200 ಎಚ್‌ಪಿಯ 2
ಪಂಪ್‌ ಅಳವಡಿಕೆ, ಕುರುಂಜಿಗುಡ್ಡೆಯಲ್ಲಿ ವಾಟರ್‌ ಟ್ರೀಟ್‌ ಪ್ಲಾಂಟ್‌ ರಚನೆ, 2.8 ಕೋಟಿ ರೂ. ವೆಚ್ಚದಲ್ಲಿ ಟ್ಯಾಂಕ್‌
ನಿರ್ಮಾಣ, ಜಯನಗರ, ಬೋರುಗುಡ್ಡೆ, ಕಲ್ಲುಮುಟ್ಲುವಿನಲ್ಲಿ 3.38 ಕೋಟಿ ರೂ. ವೆಚ್ಚದಲ್ಲಿ ಮೂರು ಟ್ಯಾಂಕ್‌ ನಿರ್ಮಾಣ ಕಾಮಗಾರಿ ನಡೆಸುವ ಬಗ್ಗೆ ಪ್ರಸ್ತಾವಿಸಲಾಗಿತ್ತು. ಅದ್ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.

ಸರಕಾರದ ಹಂತದಲ್ಲಿದೆ
ಸುಳ್ಯ ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವರ ಪರಿಹಾರ ಕಂಡಕೊಳ್ಳುವ ನಿಟ್ಟಿನಲ್ಲಿ 65.5 ಕೋಟಿ ರೂ. ಯೋಜನೆಯ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಇದು ಸರಕಾರದ ಹಂತದಲ್ಲಿದ್ದು, ಅಲ್ಲಿಂದ ಅನುಮೊದನೆ ಸಿಗಬೇಕಿದೆ. ಅನಂತರ ಅನುದಾನ ಬಿಡುಗಡೆಗೊಂಡು ಯೋಜನೆಗೆ ಚಾಲನೆ ದೊರೆಯಬೇಕಿದೆ.
ಎಸ್‌. ಅಂಗಾರ, ಶಾಸಕರು, ಸುಳ್ಯ

ಪ್ರಯತ್ನದ ಕೊರತೆ
ಇಲಾಖೆ ಪ್ರಸ್ತಾವನೆ ಸಲ್ಲಿಸುವ ಕೆಲಸ ಮಾಡುತ್ತದೆ. ಆದರೆ ಅದರ ಬೆನ್ನ ಹಿಂದೆ ಹೋಗಿ ಯೋಜನೆ ಜಾರಿ ಮಾಡುವ
ಕೆಲಸ ಸ್ಥಳೀಯಾಡಳಿತ, ಶಾಸಕರದ್ದು. ಅದರಲ್ಲಿ ಸಫಲರಾಗದಿರುವುದೇ ಬಹು ನಿರೀಕ್ಷಿತ ಯೋಜನೆಯ ಹಿನ್ನಡೆಗೆ ಕಾರಣ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ತೋರದೆ, ಸಂಬಂಧಪಟ್ಟವರು ಬಯಸಿದರೆ ಯೋಜನೆ ಜಾರಿಗೆ ನಮ್ಮ ಸಹಕಾರವನ್ನು ನೀಡುತ್ತೇವೆ.
ವೆಂಕಪ್ಪ ಗೌಡ
ಮಾಜಿ ಅಧ್ಯಕ್ಷ, ನ.ಪಂ., ಸುಳ್ಯ

 ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10(1

Mannagudda: ಗುಜರಿ ಕಾರುಗಳ ಪಾರ್ಕಿಂಗ್‌; ಸಾರ್ವಜನಿಕರಿಗೆ ಸಮಸ್ಯೆ

9(1

Mangaluru: ರಸ್ತೆ, ಸರ್ಕಲ್‌ಗೆ ಸ್ಥಳೀಯ ನಾಮಕರಣ ಪ್ರಸ್ತಾವ

6

Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ

5

Mangaluru: ವೆನ್ಲಾಕ್‌ನಲ್ಲಿ  ದೊರೆಯಲಿದೆ ಕಿಮೋಥೆರಪಿ

4(1

Ullal: ತೊಕ್ಕೊಟ್ಟು ಜಂಕ್ಷನ್‌ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.