ಕೊಳಂಬೆ: ರಸ್ತೆ ಮೋರಿ ಕುಸಿತ, ಸಂಚಾರ ಸಂಕಷ್ಟ
Team Udayavani, Jun 8, 2019, 5:50 AM IST
ಬಜಪೆ: ಕಂದಾವರ ಗ್ರಾ.ಪಂ. ವ್ಯಾಪ್ತಿಯ ಕೊಳಂಬೆ ಶಾಲೆಯ ಬಳಿ ರಸ್ತೆಯ ಮೋರಿ ಕುಸಿತಗೊಂಡು, ಅಪಾಯದ ಸ್ಥಿತಿಯಲ್ಲಿದೆ. ಗ್ರಾ.ಪಂ. ವ್ಯಾಪ್ತಿಯ ಕೈಕಂಬ ಹಾಗೂ ಸುಂಕದ ಕಟ್ಟೆಗೆ ಸಮೀಪದ ರಸ್ತೆಯಾಗಿದ್ದು, ಪಚ್ಚಲಮಾರ್, ಸುರಭೀಕಟ್ಟೆ, ಕಲ್ಲೋಳೆ ಗ್ರಾಮಗಳನ್ನು ಈ ರಸ್ತೆಯ ಮುಖಾಂತರ ಸಂಪರ್ಕಿಸಬಹುದಾಗಿದೆ. ಈ ಗ್ರಾಮಗಳ ಸಂಚಾರ ಸಾಗಾಟಕ್ಕೆ ಈ ರಸ್ತೆಯೇ ಆಧಾರಿತವಾಗಿದೆ. ಕೊಳಂಬೆ ಶಾಲೆಯ ಬಳಿ ತೋಡಿಗೆ ಮೋರಿಹಾಕಿ ನಿರ್ಮಿಸಿದ್ದ ರಸ್ತೆ ಕುಸಿತ ಗೊಂಡು 2 ವರ್ಷಗಳಾಗಿವೆ. ಕಳೆದ ಮಳೆಗಾಲದಲ್ಲಿಯೂ ಕೂಡ ಮೋರಿಯ ಬದಿಯ ಮಣ್ಣುಗಳು ಕೊಚ್ಚಿ ಹೋಗಿತ್ತು, ಈಗ ಮತ್ತಷ್ಟು ಕುಸಿತ ಗೊಂಡಿದೆ. ಮೋರಿಯ 2 ಕಡೆಗಳಲ್ಲಿ ಕಲ್ಲು ಇಟ್ಟು ಬದಿಯಿಂದ ವಾಹನ ಚಲಾಯಿಸದಂತೆ ಮಾಡಲಾಗಿದೆ.
ಸಮರ್ಪಕ ಕಿಂಡಿ ಅಣೆಕಟ್ಟು ಅಗತ್ಯ
ಅಯ್ಯರಗುಂಡಿಯಲ್ಲಿ ಕಟ್ಟಿರುವ ಕಿಂಡಿ ಆಣೆಕಟ್ಟೆ ಕೆಲವು ಕಾಮಗಾರಿಗಳು ಮಾಡಿ, ಸಮರ್ಪಕವಾಗಿ ಕಟ್ಟಿದಾಗ ನೀರಿನ ರಭಸ ಕಡಿಮೆಯಾಗುತ್ತದೆ. ಇಲ್ಲಿನ ಕೃಷಿಗೆ ಹೆಚ್ಚು ಅನುಕೂಲವಾಗಲಿದೆ. ನೀರಿನ ಅಂತರ್ಜಲ ಮಟ್ಟಕ್ಕೂ ಸಹಕಾರಿಯಾಗಲಿದೆ. ಕೊಳಂಬೆ ಶಾಲೆಯ ಬಳಿ ಮೋರಿ ಹಾಕಲಾದ ರಸ್ತೆ ಮಟ್ಟ ತಗ್ಗು ಇದ್ದು ರಸ್ತೆಯ ನೀರು, ಶಾಲೆಯ ನೀರು ಈ ಮೋರಿಯಲ್ಲಿ ಹರಿದು ಮಣ್ಣು ಕೊರೆಯುವುದರಿಂದ ರಸ್ತೆಯ ಮಟ್ಟ ಎತ್ತರಿಸಬೇಕು. ಜನರು 2 ವರ್ಷಗಳಿಂದ ಪಂ.ಗೆ ಮನವಿ ಮಾಡಿದ್ದಾರೆ. ಅನುದಾನ ಇಡಲಾಗಿದೆ ಎಂದು ಹೇಳಲಾಗಿದೆ. ಅದರೆ ಕಾಮಗಾರಿ ಆರಂಭವಾಗಿಲ್ಲ.
ಸೇತುವೆ ನಿರ್ಮಾಣ
ಕಂದಾವರ-ಬೇಡೆಮಾರ್-ಸುಂಕದಕಟ್ಟೆ ರಸ್ತೆ ಅಭಿವೃದ್ಧಿಗೆ ನಬಾರ್ಡ್ ಆರ್‌ಐಡಿಎಫ್ ಯೋಜನೆಯಡಿಯಲ್ಲಿ 1.50 ಕೋ.ರೂ. ಅನುದಾನಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊಳಂಬೆ ಶಾಲೆ ಬಳಿಯ ತೋಡಿಗೆ ಸೇತುವೆ ನಿರ್ಮಾಣಕ್ಕೆ 70 ಲಕ್ಷ ರೂ. ಅನುದಾನ ಇದರಲ್ಲಿ ಪ್ರಸ್ತಾವಿಸಲಾಗಿದೆ.
- ಡಾ| ಭರತ್ ಶೆಟ್ಟಿ ವೈ., ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.