ಇಂದು ವ್ಯಾಪಾರಿಗಳ ಸ್ಥಳಾಂತರ ಸಾಧ್ಯತೆ
ಕದ್ರಿ ತಾತ್ಕಾಲಿಕ ಮಾರುಕಟ್ಟೆ ಸಿದ್ಧ
Team Udayavani, Jul 15, 2019, 5:05 AM IST
ಮಹಾನಗರ: ಕದ್ರಿಯ ಶಿಥಿಲಾವಸ್ಥೆಯಲ್ಲಿದ್ದ ಹಳೆ ಮಾರುಕಟ್ಟೆ ಕಟ್ಟಡವನ್ನು ಕೆಡವಿ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಮಾಡುವ ಉದ್ದೇಶದಿಂದ ವ್ಯಾಪಾರಿಗಳಿಗೆ ತಾತ್ಕಾಲಿಕ ಮಳಿಗೆ ನಿರ್ಮಾಣ ಕಾಮಗಾರಿ ಹಳೆ ಮಾರುಕಟ್ಟೆ ಮುಂಭಾಗದಲ್ಲಿ ಮುಕ್ತಾಯಗೊಂಡಿದ್ದು, ಸೋಮವಾರ ವ್ಯಾಪಾರಿಗಳು ಸ್ಥಳಾಂತರಗೊಳ್ಳಲಿದ್ದಾರೆ.
ಪಾಲಿಕೆ ಅಧೀನದಲ್ಲಿರುವ ಕದ್ರಿ ಮಾರುಕಟ್ಟೆಯಲ್ಲಿ ಒಟ್ಟು 45 ಮಳಿಗೆ ಗಳು ವ್ಯಾಪಾರ ನಡೆಸುತ್ತಿದ್ದು, ಈಗ ಕಾರ್ಯಾಚರಿಸುತ್ತಿರುವ ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದರಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿದೆ. ಕಾಮಗಾರಿ ಆರಂಭಗೊಂಡು ಮುಗಿಯು ವವರೆಗೆ ವ್ಯಾಪಾರಿಗಳಿಗೆ ವ್ಯವಹಾರ ನಡೆ ಸಲು ಅನುಕೂಲ ವಾಗುವಂತೆ ತಾತ್ಕಾಲಿಕ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ.
34 ವ್ಯಾಪಾರಿಗಳು ಶಿಫ್ಟ್!
ತಾತ್ಕಾಲಿಕ ವ್ಯವಸ್ಥೆಯಲ್ಲಿ 34 ಮಳಿಗೆ ಗಳಿಗೆ ಅವಕಾಶವಿದ್ದು, ಶೌಚಾಲಯ ಸಹಿತ ಎಲ್ಲ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. 12 ತಿಂಗಳೊಳಗೆ ಈ ಕಾಮಗಾರಿ ಮುಗಿಸಬೇಕಾಗಿರುವುದರಿಂದ, ಕಾಮಗಾರಿ ಆರಂಭವಾದ ದಿನದಿಂದ 1 ವರ್ಷದವರೆಗೆ ತಾತ್ಕಾಲಿಕವಾಗಿ ಈಗಿನ ಮಾರುಕಟ್ಟೆಯ ಮುಂಭಾಗಕ್ಕೆ ವ್ಯಾಪಾರಿಗಳನ್ನು ಸ್ಥಳಾಂತರಗೊಳಿಸಲು ಯೋಚಿಸಲಾಗಿದೆ. ಸೋಮವಾರ 34 ವ್ಯಾಪಾರಿಗಳು ಸ್ಥಳಾಂತರಗೊಳ್ಳುವ ಸಾಧ್ಯತೆ ಇದ್ದು, ಈಗಾಗಲೇ ನೂತನ ಮಳಿಗೆಗೆ ನಾಮಫಲಕ ಅಳವಡಿಸಿ ಪೂಜೆ ಮಾಡಲಾಗಿದೆ.
ಹೊಸ ಮಾರುಕಟ್ಟೆಯೊಳಗೆ
ಹೊಸದಾಗಿ ನಿರ್ಮಾಣವಾಗಲಿರುವ ಮಾರುಕಟ್ಟೆ ಒಟ್ಟು 6,920 ಚದರ ಮೀಟರ್ ವಿಸ್ತೀರ್ಣದಲ್ಲಿ ಮೂರು ಅಂತಸ್ತುಗಳಲ್ಲಿ ತಲೆ ಎತ್ತಲಿದೆ. ಕೆಳಮಟ್ಟದ ತಳ ಅಂತಸ್ತು 1,090 ಚ.ಮೀ. ಹಾಗೂ ಮೇಲ್ಮಟ್ಟದ ತಳ ಅಂತಸ್ತು 924.29 ಚ.ಮೀ. ವಿಸ್ತೀರ್ಣವಿರಲಿದ್ದು, ಇದರಲ್ಲಿ ವಾಹನ ನಿಲುಗಡೆ, ಸರ್ವಿಸ್‌ಗೆಅವಕಾಶವಿದೆ. ಉಳಿದಂತೆ 957.17 ಚ.ಮೀ. ವಿಸ್ತೀರ್ಣದ ಕೆಳ ಮಟ್ಟದ ನೆಲ ಅಂತಸ್ತುವಿನಲ್ಲಿ ನಾನ್‌ವೆಜ್ ಮಳಿಗೆಗಳು/ಶಾಪ್‌ಗ್ಳು, 989.54 ಚ.ಮೀ. ಮೇಲ್ಮಟ್ಟದ ನೆಲ ಅಂತಸ್ತಿನಲ್ಲಿ ವೆಜಿಟೆಬಲ್ ಮಳಿಗೆಗಳು/ಶಾಪ್‌ಗ್ಳಿಗೆ ಅವಕಾಶವಿದೆ. 985.97 ಚ.ಮೀ. ವಿಸ್ತೀರ್ಣದ ಮೊದಲನೇ ಅಂತಸ್ತು, 986 ಚ.ಮೀ.ನ ಎರಡನೇ ಅಂತಸ್ತು ಹಾಗೂ 987.23 ಚ.ಮೀ.ನ ಮೂರನೇ ಅಂತಸ್ತಿನಲ್ಲಿ ಆಫೀಸ್ ಕಚೇರಿಗಳು ಇರಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
MUST WATCH
ಹೊಸ ಸೇರ್ಪಡೆ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.