ಕರಾವಳಿಯ ಎಂಟು ವಿಶೇಷಗಳಿಗೆ ಅಂಚೆ ಇಲಾಖೆಯ ಮೆರುಗು-ಮನ್ನಣೆ
ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ "ಕರ್ನಾಪೆಕ್ಸ್'
Team Udayavani, Oct 15, 2019, 5:02 AM IST
ಮಹಾನಗರ: ಭಾರತೀಯ ಅಂಚೆ ಇಲಾಖೆಯು ಕರಾವಳಿಯ ಎಂಟು ವಿಶೇಷಗಳಿಗೆ ಮನ್ನಣೆ ನೀಡಿ ಅವುಗಳ ಮಹಿಮೆಯನ್ನು ಅಂಚೆ ಲಕೋಟೆಗಳ ಮೂಲಕ ಅನಾವರಣಗೊಳಿಸಿದೆ.
ಭಾರತ ಹಾಗೂ ವಿಶ್ವದಲ್ಲಿ ಇನ್ನು ಮುಂದೆ ಜರಗುವ ಅಂಚೆಚೀಟಿ ಹಾಗೂ ಅಂಚೆ ಲಕೋಟೆಗಳ ಪ್ರದರ್ಶನಗಳಲ್ಲಿ ವಿಶೇಷ ಲಕೋಟೆಗಳು ಈ ಅನನ್ಯತೆಯನ್ನು ಬಿಚ್ಚಿಡಲಿವೆ. ಅಂಚೆ ಇಲಾಖೆ ಮಂಗಳೂರಿನಲ್ಲಿ ಆಯೋಜಿಸಿರುವ ಒಟ್ಟು 4 ದಿನಗಳ ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ “ಕರ್ನಾಪೆಕ್ಸ್’ನಲ್ಲಿ ನಮ್ಮ ಸಾಧಕರ ದಿನ, ಪರಿಸರ ದಿನ ಹಾಗೂ ಸಂಸ್ಕೃತಿ ದಿನ ಎಂಬ ಮೂರು ವಿಶೇಷ ಕಾರ್ಯಕ್ರಮಗಳಲ್ಲಿ ಕರಾವಳಿ ಮಹನೀಯರು, ಇಲ್ಲಿನ ಪರಿಸರಾತ್ಮಕ ಆನನ್ಯತೆಗಳು ಹಾಗೂ ಸಂಸ್ಕೃತಿ-ಪರಂಪರೆಯ ಬಗ್ಗೆ 9 ಅಂಚೆ ಲಕೋಟೆಗಳನ್ನು ಬಿಡುಗಡೆಗೊಳಿಸಲಾಗಿದೆ.
ನಮ್ಮ ಮಹನೀಯರಿಗೆ ಅಂಚೆ ಇಲಾಖೆ ಗೌರವ
ಮಂಗಳೂರಿನ ಮಣ್ಣಿನ ಮಗ, ರಾಜಕೀಯ ಮುತ್ಸದ್ಧಿ ಜಾರ್ಜ್ ಫೆರ್ನಾಂಡೀಸ್, ಕರಾವಳಿ ಮೂಲದ ಸಾಧಕರಾದ ಅನಂತ್ ಪೈ, ಗಿರೀಶ್ ಕಾರ್ನಾಡ್ ಅವರ ಬಗ್ಗೆ ವಿಶೇಷ ಅಂಚೆ ಲಕೋಟೆಗಳನ್ನು “ನಮ್ಮ ಮಹನೀಯರು’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಶನಿವಾರ ಬಿಡುಗಡೆಗೊಳಿಸಲಾಗಿದೆ. 1930ರಲ್ಲಿ ಮಂಗಳೂರಿನ ಬಿಜೈ-ಕಾಪಿಕಾಡ್‌ನಲ್ಲಿ ಜನಿಸಿದ್ದ ಜಾರ್ಜ್ ಫೆರ್ನಾಂಡೀಸ್ ಅವರು ಕಾರ್ಮಿಕ ನಾಯಕರಾಗಿ ಗುರುತಿಸಿಕೊಂಡು ಕೇಂದ್ರ ಸಚಿವರಾಗಿ ಕರಾವಳಿಯ ಹಿರಿಮೆ ಹೆಚ್ಚಿಸಿರುವವರು. ಕಾರ್ಕಳದಲ್ಲಿ 1929ರಲ್ಲಿ ಜನಿಸಿದ್ದ ಅನಂತ್ ಪೈ ಅವರು “ಅಂಕಲ್ ಪೈ’ ಎಂದೇ ಖ್ಯಾತರಾದವರು. ಕಾಮಿಕ್ ಪುಸ್ತಕ ಸರಣಿಗಳಾದ ಅಮರ್ ಚಿತ್ರಕಥಾ, ಟಿಂಕಲ್‌ಗಳ ಮೂಲಕ ದೇಶದಾದ್ಯಂತ ಗಮನಸೆಳೆದವರು.
ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ಪೂರ್ವಜರು ಮಂಗಳೂರು ಮೂಲದವರು. ಹೀಗಾಗಿ, ಕಾರ್ನಾಡ್ ಅವರ ಬಗೆಗಿನ ವಿಶೇಷ ಅಂಚೆ ಲಕೋಟೆ ಕೂಡ ಅನಾವರಣಗೊಂಡಿದೆ. ಈ ರೀತಿಯಾಗಿ ಮೂರು ಸಾಧಕರಿಗೆ ಅಂಚೆ ಇಲಾಖೆ ವಿಶೇಷ ಗೌರವಾರ್ಪಣೆ ಸಲ್ಲಿಸಿದೆ.
ಉಡುಪಿ ಜಿಲ್ಲೆ ಶಂಕರಪುರದಲ್ಲಿ ಬೆಳೆಯುವ ಮಲ್ಲಿಗೆ ಹೂವು ಹೆಚ್ಚು ಸುವಾಸನೆಯಿಂದ ಕೂಡಿದ್ದು, ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಿ ಇದಕ್ಕೆ ಹೆಚ್ಚು ಬೇಡಿಕೆಯಿದೆ. ಅಲ್ಲದೆ, ವಿದೇಶಕ್ಕೆ ರಫ್ತಾಗುತ್ತಿದೆ. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಪ್ರಾಣಿ ಶಾಸ್ತ್ರ ವಿಭಾಗದ ನಿವೃತ್ತ ಪ್ರೊಫೆಸರ್ ಡಾ|ಹರೀಶ್ ಜೋಶಿ ಅವರು ಜಪಾನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಸಹಕಾ ರದಿಂದ ಅಡ್ಯಾರ್‌ನಲ್ಲಿ 2009ರಲ್ಲಿ ಹೊಸ ಪ್ರಬೇಧದ ಕಪ್ಪೆಯನ್ನು ಕಂಡುಹಿಡಿದಿದ್ದು “ಯುಕ್ಲಿಪ್ಟಿಸ್ ಅಲೋಸಿ’ ಎಂಬುದಾಗಿ ಇದನ್ನು ಹೆಸರಿಸಲಾಗಿತ್ತು.
ಸೋಮವಾರ ನಡೆದ “ಸಂಸ್ಕೃತಿ ದಿನ ‘ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ, ಸಿದ್ಧಿ ಜನಾಂಗ ಹಾಗೂ ತುಳು ಸಿನೆಮಾದ ಬಗ್ಗೆ ವಿಶೇಷ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡಿದೆ. ರಾಷ್ಟ್ರಧ್ವಜದ ಖಾದಿ ಬಟ್ಟೆಯನ್ನು ಧಾರವಾಡ ಜಿಲ್ಲೆಯ ಗರಗ ಎಂಬ ಪುಟ್ಟ ಗ್ರಾಮದಲ್ಲಿ ಸಿದ್ಧಪ ಡಿಸಲಾಗುತ್ತಿದೆ. ಆಫ್ರಿಕ ಮೂಲದ ಸಿದ್ದಿ ಜನಾಂಗ ವಿಶಿಷ್ಟ ಸಮುದಾಯವಾಗಿದ್ದು, ಉತ್ತರ ಕರ್ನಾಟಕದ ಯಲ್ಲಾಪುರ, ಹಳಿಯಾಲ, ಅಂಕೋಲ, ಜೋಯ್ಡಾ, ಮುಂಡಗೋಡ ಹಾಗೂ ಶಿರಸಿ ತಾಲೂ ಕುಗಳಲ್ಲಿ ವಾಸಿಸುತ್ತಿದ್ದಾರೆ. ವಿಶೇಷ ಅಂಚೆ ಲಕೋಟೆಯ ಮೂಲಕ ಅತ್ಯಂತ ಹಿಂದುಳಿದ ಸಿದ್ಧಿ ಜನಾಂಗವನ್ನು ಗುರುತಿಸುವ ಕಾರ್ಯ ವಾಗಿದೆ. 1971ರ ಫೆ. 19 ರಂದು “ಎನ್ನ ತಂಗಡಿ’ ಚಲನಚಿತ್ರದ ಮೂಲಕ ಆರಂಭಗೊಂಡ ತುಳು ಚಲನಚಿತ್ರಗಳ ಪಯಣಕ್ಕೆ ಇದೀಗ 49 ವರ್ಷಗಳ ಇತಿಹಾಸವಿದೆ. “ಬಂಗಾರ್ ಪಟ್ಲೆರ್’ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡ ಮೊದಲ ತುಳು ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರ ವಾಗಿದೆ. ತುಳು ಚಲನಚಿತ್ರ ರಂಗದ ಸಾರ್ಥಕ ಪಯಣದ ಬಗ್ಗೆ ದೇಶ, ಜಗತ್ತಿನ ಗಮನಸೆಳೆಯುವ ಕಾರ್ಯವನ್ನು ಅಂಚೆ ಲಕೋಟೆಯ ಮೂಲಕ ಅಂಚೆ ಇಲಾಖೆ ಮಾಡಿದೆ. ಡಾ| ವಾಮನ್ ರಘನಾಥ್ ಮಿರಾಜRರ್ ಅವರ ತಾಯಿ ಶ್ರೀಮಂತಿ ಬಾಯಿ ನೆನೆಪಿಗಾಗಿ 1960 ರಲ್ಲಿ ಸ್ಥಾಪನೆ ಗೊಂಡ ಶ್ರೀಮಂತಿ ಸಾರ್ವಜನಿಕ ವಸ್ತು ಸಂಗ್ರಹಾಲಯದ ಬಗ್ಗೆ ವಿಶೇಷ ಅಂಚೆ ಲಕೋಟೆ ಹೊರತರಲಾಗಿದೆ.
ರಾಷ್ಟ್ರಧ್ವಜದ ಅಂಚೆ ಲಕೋಟೆ ಕರ್ನಾಟಕದಲ್ಲಿ ಪ್ರಥಮ
ಧ್ವಜ ತಯಾರಿಕೆಗೆ ಕಾನೂನು ಪ್ರಕಾರ ಖಾದಿ ಬಟ್ಟೆಯನ್ನು ಬಳಸಬೇಕಾಗುತ್ತದೆ. ರಾಷ್ಟ್ರಧ್ವಜಕ್ಕಾಗಿ ಕೈಯಲ್ಲಿ ನೇಯ್ದ ಖಾದಿ ಯನ್ನು ಧಾರವಾಡ ಜಿಲ್ಲೆಯ ಪುಟ್ಟ ಗ್ರಾಮ ಗರಗದಲ್ಲಿ ಸಿದ್ಧಪಡಿಸಲಾಗುತ್ತಿತ್ತು. ಹುಬ್ಬಳ್ಳಿ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘವು ಭಾರತದ ರಾಷ್ಟ್ರಧ್ವಜ ತಯಾರಿ ಹಾಗೂ ಪೂರೈಕೆಗೆ ಪರ ವಾನಿಗೆ ಪಡೆದ ಸಂಸ್ಥೆಯಾಗಿದೆ.
ಧ್ವಜಕ್ಕಾಗಿ ಖಾದಿ ಬಟ್ಟೆಯನ್ನು ಗರಗ ಕ್ಷೇತ್ರೀಯ ಸೇವಾ ಸಂಘ ತಯಾರಿಸುತ್ತಿದೆ. ರಾಷ್ಟ್ರ ಧ್ವಜದ ಬಗ್ಗೆ ಕರ್ನಾಟಕದಲ್ಲಿ ವಿಶೇಷ ಅಂಚೆ ಲಕೋಟೆ ಹೊರ ತಂದಿರುವುದು ಇದೇ ಪ್ರಥಮವಾಗಿದೆ ಎಂದು ಅಂಚೆ ಇಲಾಖೆ ತಿಳಿಸಿದೆ.
ಪರಿಸರ ಅನನ್ಯತೆಗೆ ಮಾನ್ಯತೆ
“ಪರಿಸರ ದಿನ’ ಕಾರ್ಯಕ್ರಮದಲ್ಲಿ ರವಿವಾರ ಮಟ್ಟು ಗುಳ್ಳ , ಶಂಕರಪುರ ಮಲ್ಲಿಗೆ ಹೂವು ಹಾಗೂ ಹೊಸ ಪ್ರಬೇಧದ ಕಪ್ಪೆ “ಯುಕ್ಲಿಪ್ಟಿಸ್ ಅಲೋಸಿ’ ಬಗ್ಗೆ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಗಿದೆ.
ಉಡುಪಿ ಜಿಲ್ಲೆಯ ಕಟಪಾಡಿ ಬಳಿಯ ಮಟ್ಟು ಗ್ರಾಮ ಮತ್ತು ಅದರ ಸುತ್ತ ಮುತ್ತಲ ಪ್ರದೇಶದಲ್ಲಿ ಬೆಳೆಯುವ ಹಸಿರು ಬಣ್ಣದ ಗುಂಡನೆಯ ಬದನೆ ಕಾಯಿ ಮಟ್ಟುಗುಳ್ಳಕ್ಕೆ 2011ರಲ್ಲಿ ಇದಕ್ಕೆ ಭೌಗೋಳಿಕ ಸೂಚಕ ಟ್ಯಾಗ್ ನೀಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ
Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.