ರಾಕೇಶ್‌ಕೃಷ್ಣಗೆ ರಾಷ್ಟ್ರಪತಿ ಅಭಿನಂದನೆ
Team Udayavani, Mar 26, 2017, 12:29 PM IST
ಪುತ್ತೂರು: ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ರಾಕೇಶ್‌ಕೃಷ್ಣ ಅವರನ್ನು ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಭಿನಂದಿಸಿದ್ದಾರೆ.
ನ್ಯಾಶನಲ್ ಫೌಂಡೇಶನ್ ಆಫ್ ಇಂಡಿಯಾ ಹಾಗೂ ಭಾರತ ಸರಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಮಂತ್ರಾಲಯ ಹೊಸದಿಲ್ಲಿಯಲ್ಲಿ ಜಂಟಿಯಾಗಿ ಆಯೋಜಿಸಿದ್ದ ಫೆಸ್ಟಿವಲ್ ಆಫ್ ಇನ್ನೋವೇಶನ್ ಕಾರ್ಯಕ್ರಮದಲ್ಲಿ ರಾಕೇಶ್ ಕೃಷ್ಣ ತನ್ನ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಿ ರಾಷ್ಟ್ರಪತಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಆರನೇ ರಾಷ್ಟ್ರಮಟ್ಟದ ಇನ್‌ಸ್ಪಯರ್ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ತಿರುವನಂತಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್‌ನಲ್ಲಿ ಎಂ.ಎಸ್. ವಿಭಾಗದ ವಿದ್ಯಾರ್ಥಿನಿ
ತನ್ನ ಸಹೋದರಿ ರಶ್ಮಿಪಾರ್ವತಿ ಮಾರ್ಗದರ್ಶನದಲ್ಲಿ ಸೀಡೋಗ್ರಾಫರ್: ಎ ನಾವೆಲ್ ಸೀಡರ್ ಫಾರ್ ಸಿಸ್ಟಮ್ಯಾಟಿಕ್ ಕಲ್ಟಿವೇಶನ್ ಎಂಬ ವಿಜ್ಞಾನ ಮಾದರಿಯನ್ನು ರಾಕೇಶ್ ಕೃಷ್ಣ ರೂಪುಗೊಳಿಸಿದ್ದರು.
ಈ ಸಂಶೋಧಿತ ಯಂತ್ರ ಬೀಜ ಬಿತ್ತನೆಗೆ ಬಳಸುವಂಥದ್ದು, ಎಲ್ಲ ತರದ ಪ್ರದೇಶಗಳಲ್ಲೂ ಇದನ್ನು ಬಳಸಬಹುದಾಗಿದೆ. ಯಂತ್ರದಲ್ಲಿ ಬೀಜದ ಗಾತ್ರಕ್ಕೆ ತಕ್ಕಂತೆ ತೂತುಗಳನ್ನು ಬದಲಾಯಿಸಲು ಅವಕಾಶವಿದೆ. ಹಲವು ಪ್ರಯೋಗಗಳಲ್ಲಿ ವೈಜ್ಞಾನಿಕವಾಗಿ ಈ ಯಂತ್ರ ಕಾರ್ಯಸಾಧು ವೆನಿಸಿದೆ. ಇವರು ವಿವೇಕಾನಂದ ಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥೆ ಡಾ| ದುರ್ಗಾರತ್ನ ಹಾಗೂ ರವಿಶಂಕರ ನೆಕ್ಕಿಲ ದಂಪತಿ ಪುತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.