ಪರಿಹಾರ ಕಾಣದ ವಿದ್ಯಾರ್ಥಿಗಳ ಸಮಸ್ಯೆ
ದಿನಕ್ಕೆ 100 ರೂ. ಕನಿಷ್ಠ ಸಂಭಾವನೆ; ಬದಲಿ ಶಿಕ್ಷಕರಾಗಿ ಬರಲೊಪ್ಪದ ನಿವೃತ್ತರು !
Team Udayavani, Jan 29, 2020, 7:58 AM IST
ಮಂಗಳೂರು: ದೀರ್ಘ ರಜೆಯಲ್ಲಿ ತೆರಳುವ ಶಿಕ್ಷಕರ ಸ್ಥಾನವನ್ನು ನಿವೃತ್ತರ ಮೂಲಕ ತುಂಬುವ ಸರಕಾರದ ಯೋಜನೆಗೆ ಉತ್ಸಾಹ ಪೂರ್ಣ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಸರಕಾರ ದಿನಕ್ಕೆ 100 ರೂ.ಗಳ ತೀರಾ ಕನಿಷ್ಠ ಸಂಭಾವನೆ ನಿಗದಿಪಡಿಸಿ ರುವುದೇ ಇದಕ್ಕೆ ಕಾರಣ. ಇದರಿಂದ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರ ಕಾಣದಾಗಿದೆ.
ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರು ಹೆರಿಗೆ, ಅನಾರೋಗ್ಯ ಮತ್ತಿತರ ಕಾರಣಗಳಿಂದ ದೀರ್ಘ ರಜೆಯಲ್ಲಿ ತೆರಳಿದರೆ ಪಾಠಕ್ಕೆ ತೊಂದರೆಯಾಗದಿರಲೆಂದು ನಿವೃತ್ತ ಶಿಕ್ಷಕರನ್ನು ನೇಮಿಸಲು ಸರಕಾರ ಅವಕಾಶ ಕಲ್ಪಿಸಿದೆ. ಆದರೆ ಸಂಭಾವನೆ ತೀರಾ ಕಡಿಮೆ ಎಂಬ ಕಾರಣಕ್ಕೆ ನಿವೃತ್ತರು ಮನಸ್ಸು ಮಾಡುತ್ತಿಲ್ಲ. ಇದರಿಂದಾಗಿ ಬಿಡುಗಡೆಯಾದ ಅನುದಾನವೂ ಖರ್ಚಾಗದೆ ಬೊಕ್ಕಸಕ್ಕೆ ಮರಳುತ್ತಿದೆ.
3 ಲಕ್ಷ ರೂ. ಅನುದಾನ
ಯೋಜನೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಮುಖಾಂತರ ಸರಕಾರ ವಾರ್ಷಿಕ ಗರಿಷ್ಠ 3 ಲಕ್ಷ ರೂ. ಬಿಡುಗಡೆ ಮಾಡುತ್ತದೆ. ಸರಕಾರದ 100 ರೂ.ನೊಂದಿಗೆ ಎಸ್‌ಡಿಎಂಸಿ ಮತ್ತು ಮೇಲುಸ್ತುವಾರಿ ಸಮಿತಿಯವರು, ಊರ ದಾನಿಗಳು ಸೇರಿ ಹಣ ಒಟ್ಟು ಮಾಡಿ ದಿನಕ್ಕೆ 500 ರೂ. ವೇತನ ನೀಡಿರುವ ಉದಾಹರಣೆ ಕೆಲವೆಡೆ ಇದೆ. ಆದರೆ ಬಹುತೇಕ ಶಾಲೆಗಳಲ್ಲಿ ಹೀಗಿಲ್ಲ. ಹೀಗಾಗಿ ಕೆಲವು ಜಿಲ್ಲೆಗಳಲ್ಲಿ ಸರಕಾರದ ಅನುದಾನ ಅರ್ಧದಷ್ಟು ಖರ್ಚಾದರೆ, ಇನ್ನುಳಿದ ಕಡೆ ಸರಕಾರಕ್ಕೆ ವಾಪಸಾಗುತ್ತಿದೆ.
ದ.ಕ., ಉಡುಪಿಗೆ 5.45 ಲಕ್ಷ ರೂ. 2019-20ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಸುಮಾರು 5.45 ಲಕ್ಷ ರೂ. ಬಿಡುಗಡೆಯಾಗಿದೆ. ಇದರಲಿಲ್ಲ ದ.ಕ. ಜಿಲ್ಲೆಗೆ 2.45 ಲಕ್ಷ ರೂ., ಉಡುಪಿಗೆ ಸುಮಾರು 3 ಲಕ್ಷ ರೂ. ಇದರಲ್ಲಿ ಬಹುತೇಕ ಮೊತ್ತ ಬಳಕೆಯಾಗಿಲ್ಲವಾದ್ದರಿಂದ ಹಿಂದಿರುಗಿಸಲಾಗಿದೆ ಎಂದು ಉಭಯ ಜಿಲ್ಲೆಗಳ ಶಿಕ್ಷಣ ಇಲಾಖಾಧಿಕಾರಿಗಳು ಹೇಳಿದ್ದಾರೆ.
ನಿವೃತ್ತ ಶಿಕ್ಷಕರನ್ನು ನೇಮಿಸುವುದಕ್ಕೆ ಉಡುಪಿ ಜಿಲ್ಲೆಗೆ 3 ಲಕ್ಷ ರೂ. ಬಿಡುಗಡೆಯಾಗಿದೆ. ಕೆಲವು ಶಾಲೆಗಳಲ್ಲಿ ಎಸ್‌ಡಿಎಂಸಿ, ಊರವರು ಸೇರಿ ಹಣ ಹೊಂದಿಸಿ ನಿವೃತ್ತರನ್ನು ನೇಮಕ ಮಾಡಿಕೊಂಡಿದ್ದಾರೆ. ಈ ವರ್ಷ ಇಲ್ಲಿಯ ವರೆಗೆ 1.5 ಲಕ್ಷ ರೂ. ಖರ್ಚಾಗಿದೆ.
-ಶೇಷಶಯನ ಕಾರಿಂಜ, ಉಡುಪಿ ಡಿಡಿಪಿಐ
ದಿನಕ್ಕೆ 100 ರೂ. ಸಂಭಾವನೆ ಪಡೆದು ಕೆಲಸ ಮಾಡಲು ನಿವೃತ್ತ ಶಿಕ್ಷಕರು ಒಪ್ಪುತ್ತಿಲ್ಲ. ಆದರೆ ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕರನ್ನು ಅದೇ ಸಂಬಳದಲ್ಲಿ ಕೆಲವು ತಿಂಗಳ ಕಾಲ ಮುಂದುವರಿಸಲು ಅವಕಾಶವಿದೆ.
-ಮಲ್ಲೇಸ್ವಾಮಿ, ದ.ಕ. ಡಿಡಿಪಿಐ
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.