ಕೋಸ್ಟಲ್‌ವುಡ್‌ನಲ್ಲಿ ನಿರ್ಮಾಪಕರ ಸಂಘದ ನಿಯಮಕ್ಕೆ ಕಿಮ್ಮತ್ತಿಲ್ಲ
Team Udayavani, Mar 11, 2018, 6:25 AM IST
ಮಂಗಳೂರು: ತುಳು ಚಲನಚಿತ್ರ ರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ “ಅಪ್ಪೆ ಟೀಚರ್’ ಮತ್ತು “ತೊಟ್ಟಿಲು’ ತುಳು ಚಲನಚಿತ್ರಗಳು ಮಾ.23ರಂದು ಒಂದೇ ದಿನ ಬಿಡುಗಡೆಗೆ ದಿನಾಂಕ ನಿಗದಿಪಡಿಸಿರುವುದು ಕೋಸ್ಟಲ್‌ವುಡ್‌ನಲ್ಲಿ ಮುಜುಗರಕ್ಕೆ ಒಳಪಟ್ಟಂತಾಗಿದೆ. ಅಲ್ಲದೆ, ತುಳು ಚಲನಚಿತ್ರ ನಿರ್ಮಾಪಕ ಸಂಘದ ಕೆಂಗಣ್ಣಿಗೆ ಗುರಿಯಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ತುಳು ಚಲನಚಿತ್ರ ನಿರ್ಮಾಪಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಈಗಾಗಲೇ ಅನೇಕ ಮಂದಿ ನಿರ್ದೇ ಶಕರು ಇದರ ಸದಸ್ಯರಾಗಿದ್ದಾರೆ. ಸಂಘದ ಅನೇಕ ಮಂದಿ ಹಿರಿಯರು ಈಗಾಗಲೇ ಕೆಲ ನಿಯಮಗಳನ್ನು ರೂಪಿಸಿದ್ದಾರೆ. ಇದರ ಪ್ರಕಾರ ತುಳು ಭಾಷೆಯಲ್ಲಿ ವಾರದಲ್ಲಿ ಒಂದೇ ಚಲನ ಚಿತ್ರಗಳು ಬಿಡುಗಡೆ ಮಾಡಬೇಕು. ಒಂದು ಚಲನಚಿತ್ರದಿಂದ ಮತ್ತೂಂದು ಚಲನಚಿತ್ರ ಬಿಡು ಗಡೆಗೆ ಕನಿಷ್ಠ ಮೂರು ವಾರಗಳ ಅಂತರ ವಿರಬೇಕು. ಯಾವ ಚಲನಚಿತ್ರ ಮೊದಲು ಸೆನ್ಸಾರ್ ಆಗಿದೆಯೋ ಆ ಚಿತ್ರ ಬಿಡುಗಡೆಗೆ ಪ್ರಾಶಸ್ತÂ ನೀಡಬೇಕು ಎಂಬ ನಿಯಮ ಮಾಡಿದೆ. ಆದರೆ ಈ ನಿಯಮವನ್ನು ಇತ್ತೀಚಿನ ಕೆಲ ನಿರ್ದೇಶಕರು ಗಾಳಿಗೆ ತೂರುತ್ತಿರುವುದು ನಿರ್ಮಾಪಕ ಸಂಘದ ವೈಮನಸ್ಸಿಗೆ ಕಾರಣವಾಗಿದೆ.
ಈ ಬಗ್ಗೆ ನಿರ್ಮಾಪಕರ ಸಂಘದ ಅದ್ಯಕ್ಷ ರಾಜೇಶ್ ಬ್ರಹ್ಮಾವರ್ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಅಪ್ಪೆ ಟೀಚರ್ ಚಲನಚಿತ್ರ ತಂಡದ ನಿರ್ದೇಶಕ ಕಿಶೋರ್ ಮೂಡಬಿದಿರೆ ಮತ್ತು ತೊಟ್ಟಿಲು ಚಲನಚಿತ್ರದ ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ಅವರು ನಿರ್ಮಾಪಕ ಸಂಘದ ಸದಸ್ಯರಲ್ಲ. ಆದ್ದರಿಂದ ಈ ಎರಡೂ ಚಿತ್ರತಂಡದವರನ್ನು ಕರೆದು ಸಮಸ್ಯೆ ಇತ್ಯರ್ಥಕ್ಕೆ ನಿರ್ಮಾಪಕರ ಸಂಘ ಕೂಡ ಮುಂದೆ ಬಂದಿಲ್ಲ. ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಎರಡೂ ಚಿತ್ರತಂಡಗಳು ಸಂಘದ ಬಳಿ ಬಂದರೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು’ ಎಂದು ತಿಳಿಸಿದ್ದಾರೆ.
ಡೇಟ್ ಎನೌನ್ಸ್ ಮಾಡುವ ಹಾಗಿಲ್ಲ
ಡಿಜಿಟಲ್ ಸೇವಾ ಪೂರೈಕೆದಾರರಿಂದ ವಿಧಿಸಲಾಗಿರುವ ವರ್ಚುವಲ್ ಮುದ್ರಣ ಶುಲ್ಕ (ವಿಪಿಎಫ್) ವಿರೋಧಿಸಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದು, ಈ ಸಮಯದಲ್ಲಿ ದ.ಭಾರತದ ಯಾವುದೇ ಹೊಸ ಚಲನಚಿತ್ರಗಳು ಬಿಡುಗಡೆಗೆ ದಿನಾಂಕ ನಿಗದಿಪಡಿಸುವಂತಿಲ್ಲ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಸೂಚನೆ ನೀಡಿದೆ. ಆದರೆ ಈ ಸಮಯದಲ್ಲಿ ಅಪ್ಪೆ ಟೀಚರ್ ಮತ್ತು ತೊಟ್ಟಿಲು ಚಲನಚಿತ್ರಗಳು ಬಿಡುಗಡೆ ದಿನಾಂಕ ನಿಗದಿಪಡಿಸಿದ್ದು ಚರ್ಚೆಗೆ ಗ್ರಾಸವಾಗಿದೆ.
ಅಪ್ಪೆ ಟೀಚರ್ ಚಲನಚಿತ್ರವನ್ನು ಮಾ.23 ರಂದು ಸುಚಿತ್ರಾ ಚಿತ್ರಮಂದಿರದಲ್ಲಿ ಬಿಡುಗಡೆಗೊಳಿಸುವ ತಯಾರಿಯಲ್ಲಿತ್ತು. ಆದರೆ, ಸುಚಿತ್ರಾ ಚಿತ್ರಮಂದಿರ ನವೀಕರಣಗೊಳ್ಳು ತ್ತಿದ್ದು, ಈ ವೇಳೆಗೆ ಆರಂಭಗೊಳ್ಳುವುದು ಸಂಶಯ. ಆದ್ದರಿಂದ ಈ ಚಿತ್ರ ತಂಡ ಬಿಡು ಗಡೆಗೆ ಬೇರೆ ಸಿನಿಮಾ ಮಂದಿರ ಜತೆ ಮಾತುಕತೆ ನಡೆಸುತ್ತಿದೆ. ಇದೇ ಬೆನ್ನಲ್ಲಿ ಮಾ.23ರಂದೇ ತೊಟ್ಟಿಲು ಚಲನಚಿತ್ರ ಕೂಡ ನಗರದ ಜ್ಯೋತಿ ಚಿತ್ರಮಂದಿರದಲ್ಲಿ ಬಿಡುಗಡೆಗೆ ಮಾಡಲು ಎಲ್ಲ ರೀತಿಯ ಸಿದ್ಧತೆ ನಡೆಸಿದೆ.
ಯಾಕಿಷ್ಟು ಪೈಪೋಟಿ?
ಒಂದೇ ದಿನದಲ್ಲಿ 2 ತುಳು ಚಲನಚಿತ್ರ ಬಿಡುಗಡೆಯಾಗಲೂ ಕಾರಣವಿದೆ. ಏಕೆಂದರೆ, ಮುಂದಿನ ದಿನಗಳಲ್ಲಿ ಹೈಬಜೆಟ್
ಕನ್ನಡ ಚಲನಚಿತ್ರಗಳು ಬಿಡುಗಡೆ ಯಾಗಲಿವೆ. ಆ ವೇಳೆಯಲ್ಲಿ ಚಿತ್ರಮಂದಿರಗಳ ಸಮಸ್ಯೆ ಕಂಡು ಬರಬಹುದು. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಐಪಿಎಲ್, ಸಿಪಿಎಲ್ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು, ಬಳಿಕ ಚುನಾ ವಣೆ ನಡೆಯಲಿದೆ. ಈ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮಾ. 23 ರಂದು 2 ಚಿತ್ರ ಬಿಡುಗಡೆಗೆ ಪಟ್ಟುಹಿಡಿಯಲಾಗುತ್ತಿದೆ.
“ಅಪ್ಪೆ ಟೀಚರ್ ಚಲನಚಿತ್ರ ಕಳೆದ ಗುರುವಾರ ಸೆನ್ಸಾರ್ ಆಗಿ ಯು/ಎ ಪ್ರಮಾಣ ಪತ್ರ ದೊರೆತಿದೆ. ಸೋಮವಾರದಂದು ಸೆನ್ಸಾರ್ ಪ್ರಮಾಣಪತ್ರ ಸಿಗಲಿದೆ. “ತೊಟ್ಟಿಲು’ ಚಲನಚಿತ್ರ ಸೆನ್ಸಾರ್ ಆಗಿ 4 ತಿಂಗಳುಗಳು ಕಳೆದಿದ್ದು, ನಮ್ಮ ಚಲನಚಿತ್ರ ಬಿಡುಗಡೆ ಸಮಯದಲ್ಲಿಯೇ ದಿನಾಂಕ ನಿಗದಿ ಪಡಿಸಿದ್ದು ಸರಿಯಲ್ಲ.’
– ಕಿಶೋರ್ ಮೂಡಬಿದಿರೆ,
ಅಪ್ಪೆ ಟೀಚರ್ ಚಲನಚಿತ್ರ ನಿರ್ದೇಶಕ
“ನಮ್ಮ ಚಿತ್ರ 4 ತಿಂಗಳ ಹಿಂದೆಯೇ ಸೆನ್ಸಾರ್ ಆಗಿದೆ. ಆದ್ದರಿಂದ ಮಾ.23ರಂದು ಬಿಡುಗಡೆ ಮಾಡಲಿದ್ದೇವೆ. ಈ ಬಗ್ಗೆ ಸಂಘದ ಗಮನಕ್ಕೆ ತಂದಿದ್ದೇವೆ.’
– ಪ್ರಜ್ವಲ್ ಕುಮಾರ್ ಅತ್ತಾವರ,
ತೊಟ್ಟಿಲು ಚಲನಚಿತ್ರದ ನಿರ್ದೇಶಕ
“ಎರಡೂ ಚಿತ್ರತಂಡದವರು ಸಮಸ್ಯೆ ಬಗೆಹರಿಸುವಂತೆ ನಿರ್ಮಾಪಕರ ಸಂಘಕ್ಕೆ ಯಾವುದೇ ಲಿಖೀತ ಮನವಿ ನೀಡಲಿಲ್ಲ. ಮನವಿ ನೀಡಿದರೆ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುತ್ತೇವೆ. ವಿಪಿಎಫ್ ವಿರೋಧಿಸಿ ಈಗಾಗಲೇ ಪ್ರತಿಭಟನೆ ನಡೆಯುತ್ತಿದ್ದು, ಈ ವೇಳೆ ದಿನಾಂಕ ನಿಗದಿ ಮಾಡಿದ್ದು ತಪ್ಪು. ತುಳು ಚಲನಚಿತ್ರ ರಂಗವನ್ನು ಮುಜುಗರಕ್ಕೆ ಒಳಪಡಿಸದಿದ್ದರೆ ಸಾಕು.’
– ರಾಜೇಶ್ ಬ್ರಹ್ಮಾವರ,
ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.