“ಆದರ್ಶ ಗುಣಗಳಿಂದ ಬದುಕಿನ ಸುಭಗತೆ’


Team Udayavani, Jul 11, 2017, 2:30 AM IST

1007mail1.jpg

ಉಪ್ಪಿನಂಗಡಿ: ಬದುಕಿನ ಸುಭಗತೆಗೆ ಆದರ್ಶ ಗುಣಗಳು ಹೊಳಪನ್ನು ನೀಡುತ್ತವೆ. ಪುರಾಣಗಳು, ಇತಿಹಾಸಗಳು ಹಾಗೂ ಹಿರಿಯರಿಂದ ಪಾರಂಪರಿಕವಾಗಿ ಬಂದ ಗುಣಗಳು ಬದುಕಿನ ಔನ್ನತ್ಯಕ್ಕೆ ಬೌದ್ಧಿಕತೆಯನ್ನು ನೀಡುತ್ತವೆ. ಬದಲಾದ ಕಾಲಘಟ್ಟದಲ್ಲಿ ಇಂತಹ ಗುಣಗಳ ಗಾಢತೆಯು ಮಸುಕಾಗಿವೆ.

ಹಿಂದಿನ ಆದರ್ಶ ಗುಣಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಆಗಬೇಕಾಗಿದೆ  ಎಂದು ಪುತ್ತೂರಿನ ಪ್ರಗತಿ ಆಸ್ಪತ್ರೆಯ ಡಾ| ಎಸ್‌.ಸುಧಾ ರಾವ್‌ ಅವರು ಹೇಳಿದರು.ಅವರು ಉಪ್ಪಿನಂಗಡಿಯ ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ  ಸೌಹಾರ್ದ ಯಕ್ಷಗಾನ ಸಮಿತಿ ಮತ್ತು ಶ್ರೀಶಾರದೋತ್ಸವ ಸಮಿತಿ ಮತ್ತು  ಬಾರ್ಯ ವಿಷ್ಣುಮೂರ್ತಿ ನೂರಿ ತ್ತಾಯ ಪ್ರತಿಷ್ಠಾನವು ಆಯೊಜಿಸಿದ ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯರ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. 

ಪ್ರಶಸ್ತಿ ಪ್ರದಾನ
ಕೀರ್ತಿಶೇಷ ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯರ ಸಂಸ್ಮರಣೆಯನ್ನು ಅಂಕಣಕಾರ, ಕಲಾವಿದ ನಾ| ಕಾರಂತ ಪೆರಾಜೆ ಮಾಡಿದರು. ಪ್ರತಿಷ್ಠಾನದ ಹತ್ತೂಂಭನೇ ವರುಷದ ಪ್ರಶಸ್ತಿ ಯನ್ನು ನಿವೃತ್ತ  ಶಿಕ್ಷಕಿ  ಫಿಲೋಮಿನಾ ಇ. ಬ್ರೆಗ್ಸ್‌ ಅವರಿಗೆ ಪ್ರದಾನಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಭಾಸ್ಕರ ಬಾರ್ಯ ಅವರು ಅಭಿನಂದನಾ ಭಾಷಣ ಮಾಡಿದರು. ರಂಗನಾಥ ಟಿ. ರಾವ್‌ ಅವರು ಗುಣಕಥನ ಫಲಕವನ್ನು ವಾಚಿಸಿದರು. ಫಿಲೋಮಿನಾ ಅವರು ಶಿಕ್ಷಣ ಕ್ಷೇತ್ರದಲ್ಲಿ ತಾನು ನಡೆದು ಬಂದ ಹಾದಿಯನ್ನು ಈ ಸಂದರ್ಭದಲ್ಲಿ  ಪ್ರಸ್ತುತಪಡಿಸಿದರು. ಸೌಹಾರ್ದ ಯಕ್ಷಗಾನ ಸಮಿತಿಯ ಹದಿನಾಲ್ಕನೇ ವರುಷದ ಪ್ರಶಸ್ತಿಯನ್ನು ಉಪನ್ಯಾಸಕ, ಕಲಾವಿದ ಪೊ›| ದಂಬೆ ಈಶ್ವರ ಶಾಸ್ತ್ರಿಯವರಿಗೆ ಪ್ರದಾನಿಸಲಾಯಿತು. 

ಉಪ್ಪಿನಂಗಡಿ ಜಿ.ಪಂ. ಮಾಜಿ ಸದಸ್ಯ ಕೇಶವ ಗೌಡ ಬಜತ್ತೂರು ಅವರ ಅಧ್ಯಕ್ಷತೆಯಲ್ಲಿ ಸಮಾರಂಭ ಸಂಪನ್ನಗೊಂಡಿತು. ಸೌಹಾರ್ದ ಯಕ್ಷಗಾನ ಸಮಿತಿಯ ಅಧ್ಯಕ್ಷ ಎನ್‌.ಉಮೇಶ ಶೆಣೈ ಸಮಾರಂಭವನ್ನು ಸಂಘಟಿಸಿದ್ದರು. ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸಂಘ, ಗೇರುಕಟ್ಟೆಯ ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನವು ಸಹಕಾರ ನೀಡಿತ್ತು. ಪಿ. ಹರಿಶ್ಚಂದ್ರ ಆಚಾರ್ಯ, ಗುಡ್ಡಪ್ಪ ಬಲ್ಯ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಹರೀಶ ಆಚಾರ್ಯ ನಿರೂಪಣೆ ಮಾಡಿದರು.ಕಾರ್ಯಕ್ರಮದ ಕೊನೆಯಲ್ಲಿ  ರಾಮಾಂಜ ನೇಯ ಮತ್ತು ಗಂಗಾ ಸಾರಥ್ಯ ಪ್ರಸಂಗಗಳ ತಾಳಮದ್ದಳೆ ಜರುಗಿತು.

ನುಡಿನಮನ 
ಈ ಸಂದರ್ಭ ಉಪ್ಪಿನಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ದಿ| ಖ. ಪುಷ್ಪಾವತಿ ಅವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಕಾಲೇಜಿನ ಉಪ ಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ ನುಡಿನಮನ ಸಲ್ಲಿಸಿದರು.

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

10

Puttur: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು

1

Puttur: ವಿದ್ಯುತ್‌ ಉಪಕರಣದಲ್ಲಿ ಬೆಂಕಿ

Ninthikallu-ಬೆಳ್ಳಾರೆ-ಸುಳ್ಯ ರಸ್ತೆಯಲ್ಲಿ ಹೊಂಡ-ಗುಂಡಿಗಳದ್ದೇ ಸಾಮ್ರಾಜ್ಯ

Ninthikallu-ಬೆಳ್ಳಾರೆ-ಸುಳ್ಯ ರಸ್ತೆಯಲ್ಲಿ ಹೊಂಡ-ಗುಂಡಿಗಳದ್ದೇ ಸಾಮ್ರಾಜ್ಯ

High Court ನಿರ್ದೇಶನ: ಕೊಂಬಾರಿನ ರಸ್ತೆ, ಬಿರ್ಮೆರೆಗುಂಡಿ ಸೇತುವೆಗೆ 1.31 ಕೋಟಿ ರೂ.

High Court ನಿರ್ದೇಶನ: ಕೊಂಬಾರಿನ ರಸ್ತೆ, ಬಿರ್ಮೆರೆಗುಂಡಿ ಸೇತುವೆಗೆ 1.31 ಕೋಟಿ ರೂ.

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.