‘ಜೀವ ರಕಣೆಯ ಹೊಣೆ ವಹಿಸಿಕೊಳ್ಳುವುದು ಶ್ಲಾಘನೀಯ’
Team Udayavani, Nov 20, 2017, 3:01 PM IST
ಕೊಂಬೆಟ್ಟು : ರಕ್ತದಾನ ಅತ್ಯಂತ ಮಹತ್ವದ ದಾನ. ಕಷ್ಟದಲ್ಲಿರುವವರ ಜೀವ ರಕ್ಷಣೆಯ ಹೊಣೆ ತೆಗೆದುಕೊಳ್ಳುವುದು ಅತ್ಯಂತ ಶ್ಲಾಘನೀಯ ಕೆಲಸ ಎಂದು ಮಂಗಳೂರು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ| ಕೆ. ರಾಜೇಶ್ವರ ಅವರು ಹೇಳಿದರು.
ಕೊಂಬೆಟ್ಟು ಮರಾಠಿ ಸಮಾಜ ಸೇವಾ ಸಂಘ, ಮರಾಠಿ ಯುವ ವೇದಿಕೆ, ಮರಾಠಿ ಮಹಿಳಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಿಡ್ ಬ್ಯಾಂಕ್ ಮತ್ತು ಮರಾಠಿ ವಿದ್ಯಾರ್ಥಿ ವೇದಿಕೆ ಹಾಗೂ ಮರಾಠಿ ಗ್ರಾಮ ಸಮಿತಿಗಳ ಸಹಕಾರದೊಂದಿಗೆ ರವಿವಾರ ಕೊಂಬೆಟ್ಟು ಸಮಾಜ ಮಂದಿರದಲ್ಲಿ ಆಯೋಜಿಸಿದ 3ನೇ ವರ್ಷದ ರಕ್ತದಾನ ಶಿಬಿರ ಮತ್ತು ಆರೋಗ್ಯ ಮಾಹಿತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿದರು.
ಜೀವ ರಕ್ಷಕರಾಗಿ
ಒಬ್ಬ ವ್ಯಕ್ತಿಯು ಜೀವನ್ಮರಣದ ನಡುವೆ ಹೋರಾಟ ಮಾಡಿದಾಗ ರಕ್ತದ ಆವಶ್ಯಕತೆ ಬಹಳಷ್ಟಿರುತ್ತದೆ. ಈ ಸಂದರ್ಭ ರಕ್ತದಾನ ಮಾಡುವ ಮೂಲಕ ಜೀವ ರಕ್ಷಕರಾಗಿ ಕೆಲಸ ಮಾಡಬೇಕಾಗಿದೆ ಎಂದರು. ಸಹಕಾರ ಮನೋಭಾವ ಇದ್ದಾಗ ಮಾತ್ರ ಮನುಷ್ಯ ಜೀವನಕ್ಕೆ ಅರ್ಥ ಬರುತ್ತದೆ ಎಂದರು.
ಸೂಕ್ಷ್ಮತೆ ಇರಬೇಕು
ಮನುಷ್ಯನನ್ನು ಹಲವಾರು ರೋಗಗಳು ಆವರಿಸುತ್ತವೆ. ಆದರೆ ನಾವು ಅದನ್ನು ತಿರಸ್ಕಾರ ಮಾಡುವ ಪ್ರಮೇಯವೇ ಹೆಚ್ಚು. ರೋಗದ ಸೂಕ್ಷ್ಮತೆ ನಮ್ಮಲ್ಲಿರಬೇಕು. ಆಗ ಆರಂಭಿಕ ಹಂತದಲ್ಲಿಯೇ ಯಾವ ಕಾಯಿಲೆಯನ್ನಾದರೂ ಗುಣಪಡಿಸಲು ಸಾಧ್ಯವಿದೆ. ಕಳೆದ 3 ವರ್ಷಗಳಿಂದ ಮರಾಠಿ ಸಮಾಜ ಸೇವಾ ಸಂಘದ ನೇತೃತ್ವವದಲ್ಲಿ ರಕ್ತದಾನ ಶಿಬಿರ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮ ಮಾಡುತ್ತಿರುವುದು ಅತ್ಯುತ್ತಮವಾಗಿದೆ ಎಂದರು.
ಸ್ತ್ರೀ ರೋಗ ತಜ್ಞೆ ಡಾ| ಜಯಶ್ರೀ ಆರ್. ಪೆರುವಾಜೆ ಆರೋಗ್ಯ ಮಾಹಿತಿ ನೀಡಿದರು. ರೋಟರಿ ಕ್ಯಾಂಪ್ಕೋ ಬ್ಲಿಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ| ರಾಮಚಂದ್ರ ಭಟ್, ಮರಾಠಿ ಮಹಿಳಾ ವೇದಿಕೆ ಉಪಾಧ್ಯಕ್ಷೆ ಲಕ್ಷ್ಮೀ, ಮರಾಠಿ ಯುವ ವೇದಿಕೆಯ ಅಧ್ಯಕ್ಷ ಅಶೋಕ ನಾಯ್ಕ ಸೊರಕೆ, ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷ ಅನಂತೇಶ್ವರ ಉಪಸ್ಥಿತರಿದ್ದರು.
ಮರಾಠಿ ಮಹಿಳಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಚೇತನಾ ಪರ್ಲಡ್ಕ ಸ್ವಾಗತಿಸಿದರು. ಮರಾಠಿ ಯುವ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಶ್ಯಾಮ್ ಶ್ರವಣ್ ಅವರು ಪ್ರಸ್ತಾವನೆಗೈದರು. ಯುವ ವೇದಿಕೆಯ ಮಾಜಿ ಅಧ್ಯಕ್ಷ ಗಿರೀಶ್ ನಾಯ್ಕ ಸೊರಕೆ ಅವರು ವಂದಿಸಿ, ದೀಪ್ತಿ ಅವರು ಕಾರ್ಯಕ್ರಮ ನಿರ್ವಹಿಸಿದರು.
ಒಗ್ಗಟ್ಟಿನಲ್ಲಿ ಬಲ
ಅಧ್ಯಕ್ಷತೆ ವಹಿಸಿದ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಯು.ಕೆ. ನಾಯ್ಕ ಮಾತನಾಡಿ, ಹಲವು ಕೈಗಳು ಸೇರಿದಾಗ ಮಾತ್ರ ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯ. ಒಗ್ಗಟ್ಟು, ಸಹೃದಯತೆಯಿಂದ ಸಂಘಟನೆ, ಸಮುದಾಯ ಹೆಚ್ಚು ಬಲಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.