ಮೋದಿಗೆ ಶಕ್ತಿ ತುಂಬುವ ಫಲಿತಾಂಶ: ಕೋಟ್ಯಾನ್
ಮೂಡುಬಿದಿರೆ: ಬಿಜೆಪಿಯಿಂದ ವಿಜಯೋತ್ಸವ
Team Udayavani, May 24, 2019, 6:00 AM IST
ಮೂಡುಬಿದಿರೆ: ದೇಶದ ಜನತೆ ಈ ಬಾರಿಯ ಲೋಕ ಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಭಾರತ ವಿಶ್ವಗುರುವಾಗಲು ಮೋದಿಯವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ,ಮೋದಿ ಅಲೆ ಎಂಬುದು ಸಮುದ್ರ ದಲೆಯಂತೆ ನಾಲೆ ಸೆಗಳಲ್ಲಿ ಪ್ರಭಾವ ಬೀರಿದಂತಾಗಿದೆ ಎಂದು ಶಾಸಕ ಉಮಾ ನಾಥ ಕೋಟ್ಯಾನ್ ಹೇಳಿದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ನಳಿನ್‌ಕುಮಾರ್ ಕಟೀಲು ಗೆಲುವು ಸಹಿತ ದೇಶಾದ್ಯಂತ ಬಿಜೆಪಿ ಸಾಧಿಸಿದ ಗೆಲುವಿಗೆ ಮೂಡುಬಿದಿರೆ ಬಸ್‌ನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ ನಡೆದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು. ನಮಗೆ ದೇಶ ಮುಖ್ಯ, ಅದಕ್ಕಾಗಿ ನರೇಂದ್ರ ಮೋದಿ ಬೇಕು ಎಂದು ಅವರ ಹೆಸರಿನಲ್ಲಿ ಮತ ಯಾಚಿ ಸಿದ್ದು ಹೌದು. ಅದನ್ನು ಈ ದೇಶದ ಜನ ಅನುಮೋದಿಸಿದ್ದಾರೆ. ನಾವು ಮತದಾನದ ಮೊದಲು ಮನೆ ಮನೆಗೆ ಹೋಗಿ ಮತಯಾಚನೆ ಮಾಡಿದ್ದೇವೆ. ಆದರೆ ಮನೆ ಮನೆಗಳೇ ನಮ್ಮ ಕಡೆಗೆ ಬಂದಿವೆ ಎಂದು ಈ ಫಲಿತಾಂಶ ತೋರಿಸಿಕೊಟ್ಟಿದೆ ಎಂದರು.
ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ನಿರೀಕ್ಷೆ ವ್ಯಕ್ತಪಡಿಸಿದಂತೆ 40,000 ದಷ್ಟು ಮತಗಳ ಬಹುಮತ ಒದಗಿ ಸು ವಲ್ಲಿ ಗೆದ್ದಿದ್ದೇವೆ, ಮತದಾರರಿಗೆಲ್ಲ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಅವರು ಹೇಳಿದರು.
ಪ್ರಮುಖರಾದ ಮೇಘನಾದ್ ಶೆಟ್ಟಿ, ಅಜಯ್ ರೈ, ಗಿರೀಶ್ ಕುಮಾರ್, ಲಕ್ಷ್ಮಣ ಪೂಜಾರಿ, ಹರೀಶ್ ಎಂ.ಕೆ., ರಾಜೇಶ್ ಶೆಟ್ಟಿ, ಅವಿನಾಶ್ ಮೊದಲಾದವರಿದ್ದರು. ಕಾರ್ಯ ಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.