ಸಮೃದ್ಧ ತರಕಾರಿ ಕಡ್ಪ ಕತ್ತಿ ಅವರೆ
Team Udayavani, May 6, 2018, 5:10 PM IST
ಕಡ್ಪ ಕತ್ತಿ ಅವರೆಯಲ್ಲಿ ‘ಎ’ ಜೀವಸತ್ವ ವಿಪುಲವಾಗಿದೆ. ಸಾಕಷ್ಟು ಪ್ರೊಟೀನ್ ಇದೆ. ಶರ್ಕರ, ಪಿಷ್ಟ, ಕಬ್ಬಿಣ, ರಂಜಕ ಅಂಶಗಳು ಬೀಜದಲ್ಲಿ ಅಧಿಕವಾಗಿವೆ. ಸಾಕಷ್ಟು ಬಿಸಿಲು ಮತ್ತು ಧಾರಾಳವಾಗಿ ನೀರಿದ್ದರೆ ಒಂದೇ ಒಂದು ಗಿಡ ನೆಟ್ಟರೂ ಒಂದು ಕುಟುಂಬಕ್ಕೆ ಸಾಕಾಗುವಷ್ಟು ಕಾಯಿಗಳು ದೊರೆಯುತ್ತವೆ.
ಕಡ್ಪ ಕತ್ತಿ ಅವರೆಯ ಒಂದೇ ಒಂದು ಗಿಡ ಇದ್ದರೆ ಸಾಕು. ಮೂರ್ನಾಲ್ಕು ತಿಂಗಳ ಕಾಲ ದಿನವೂ ಪಲ್ಯ, ಸಾಂಬಾರಿಗೆ ಬೇಕಾದಷ್ಟು ಅವರೆಕಾಯಿ ಕೊಯ್ಯಬಹುದು ಎನ್ನುತ್ತಾರೆ ತೆಂಕಕಾರಂದೂರಿನ ಪುಷ್ಪಾ ನಾಯ್ಕ. ಹಲವು ವರ್ಷಗಳಿಂದ
ಅವರ ಮನೆಯಂಗಳದಲ್ಲಿ ಬೆಳೆಯುವ ತರಕಾರಿಗಳಲ್ಲಿ ಕಡ್ಪ ಕತ್ತಿ ಕತ್ತಿ ಅವರೆಗೆ ಒಂದು ಸ್ಥಾನ ಇದೆ. ಕತ್ತಿಯ ಆಕಾರದಲ್ಲಿರುವ ಈ ಅವರೆ, ಒಂದು ಅಡಿ ಉದ್ದದ ವರೆಗೆ ಬೆಳೆಯುತ್ತದೆ. ಬಲಿಯದಿರುವ ಅವರೆಯನ್ನು ಚೆನ್ನಾಗಿ ಬೇಯಿಸಿ ನೀರು ಬಸಿದು ಒಗ್ಗರಣೆ ಹಾಕಿದರೆ ಬೆಳಗ್ಗೆಗೆ ರುಚಿಕರವಾದ ಉಪಾಹಾರವಾಗುತ್ತದೆ. ಬೇಯಿಸದ ನೀರನ್ನು ತೆಗೆಯದಿದ್ದರೆ ಪಿತ್ತ ಪ್ರಕೃತಿಯವರಿಗೆ ಅಷ್ಟೊಂದು ಒಗ್ಗುವುದಿಲ್ಲ ಎಂದು ಅವರು ವಿವರಿಸುತ್ತಾರೆ.
ಹಳ್ಳಿ, ತೋಟದ ಮನೆಗಳಲ್ಲಿ ಬಚ್ಚಲು ಮನೆಗಳಿರುತ್ತವಲ್ಲ, ಅಲ್ಲಿ ಸ್ವಲ್ಪ ಜಾಗವಿದ್ದರೂ ಬಿತ್ತನೆಗೆ ಯೋಗ್ಯವಂತೆ. ಬಳ್ಳಿ
ಪೊದೆಯಾಗಿ ವಿಶಾಲವಾಗಿ ಹರಡುತ್ತದೆ. ಮಳೆಗಾಲದಲ್ಲಿ ಇದರ ಕೃಷಿ ಮಾಡಲಾಗುವುದಿಲ್ಲ. ಅಕ್ಟೋಬರ್ ತಿಂಗಳಲ್ಲಿ ಬಿತ್ತಿದರೆ ನವೆಂಬನರ್‌ನಲ್ಲಿ.
ಕಾಯಿ ಕೊಯ್ಯಬಹುದು. ಬಳ್ಳಿ ಹರಡಿದಲೆಲ್ಲ ಕೊಂಬೆಗಳಾಗಿ, ಪ್ರತೀ ಕೊಂಬೆಯಲ್ಲೂ ಹೂ ಗೊಂಚಲುಗಳಾಗುತ್ತವೆ. ಒಂದು ಗೊಂಚಲಿನಲ್ಲಿ ಹತ್ತರಿಂದ ಹದಿನೈದರಷ್ಟು ಕಾಯಿಗಳಾಗುತ್ತವೆ. ಹತ್ತು ಕಾಯಿಗಳಿದ್ದರೆ ಒಂದು ಕಿ.ಲೋ ತೂಗುತ್ತವೆ. ದೊಡ್ಡ ಪ್ರಮಾಣದಲ್ಲಿ ಬೆಳೆದರೆ ಪೇಟೆಯಲ್ಲಿ ಉತ್ತಮ ಬೇಡಿಕೆಯೂ ಇದೆ. ಮೆಣಸಿನಕಾಯಿ, ಬದನೆಯಂತಹ ಇತರ ತರಕಾರಿ ಗಿಡಗಳ ಜತೆಗೂ ಇದನ್ನು ಮಿಶ್ರಕೃಷಿಯಾಗಿ ಬೆಳೆಯಬಹುದೆಂದು ಎನ್ನುತ್ತಾರೆ ಪುಷ್ಪಾ ನಾಯ್ಕ.
ಪ. ರಾಮಕೃಷ್ಣ ಶಾಸ್ತ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.