ಬೇಂಗಮಲೆ ಕಾಡಿನ ರಸ್ತೆ ಬದಿ ದುರ್ನಾತ!
ಎಲ್ಲೆಡೆ ಹರಡಿರುವ ಕೋಳಿ ಮಾಂಸ, ಗರಿ ಮತ್ತಿತರ ತ್ಯಾಜ್ಯ
Team Udayavani, Apr 25, 2019, 5:50 AM IST
ಬೆಳ್ಳಾರೆ-ಸೋಣಂಗೇರಿ ರಸ್ತೆಯ ಬೆಂಗಮಲೆ ಕಾಡಿನ ಬಳಿ ತ್ಯಾಜ್ಯ ರಾಶಿ ಬಿದ್ದಿರುವುದು.
ಸುಳ್ಯ: ಐವರ್ನಾಡು ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿರುವ ಬೆಳ್ಳಾರೆ- ಸೋಣಂಗೇರಿ ರಸ್ತೆಯ ಬೆಂಗಮಲೆ ಕಾಡಿನ ಎರಡೂ ಬದಿಗಳಲ್ಲಿ ತ್ಯಾಜ್ಯ ರಾಶಿ ಬಿದ್ದು, ಪಾದಚಾರಿಗಳು, ವಾಹನ ಸವಾರರು ಮೂಗು ಮುಚ್ಚಿಕೊಂಡು ಸಂಚರಿಸುತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದು, ಕಿಡಿಗೇಡಿಗಳು ಕೋಳಿತ್ಯಾಜ್ಯ, ಕಸದ ರಾಶಿ, ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆದ ಪರಿಣಾಮ ದುರ್ನಾತ ಹಬ್ಬಿದೆ. ಸ್ಥಳೀಯಾಡಳಿತ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಫಲ ಕಂಡಿಲ್ಲ. ಸಂಘ ಸಂಸ್ಥೆಗಳ ಸ್ವತ್ಛತಾ ಕಾರ್ಯ ನಡೆಸುವ ಬೆನ್ನಲ್ಲೇ ಕಿಡಿಗೇಡಿಗಳು ತ್ಯಾಜ್ಯ ಎಸೆದು ಮತ್ತೆ ಗಲೀಜು ಉಂಟು ಮಾಡುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಸ್ವತ್ಛ ಪರಿಸರದ ಅಂಗವಾಗಿ ಐವರ್ನಾಡು ಗ್ರಾಮದ ನಾಗರಿಕರು ಗ್ರಾ.ಪಂಚಾಯತ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿ ಇಡೀ ಬೇಂಗಮಲೆ ರಸ್ತೆ ಬದಿಯನ್ನು ಶುಚಿಗೊಳಿಸಿದ್ದರು. ಇಂತಹ ಹತ್ತಾರು ಸ್ವತ್ಛತಾ ಕಾರ್ಯ ಇಲ್ಲಿ ನಡೆದಿದೆ. ಆದರೆ ಮತ್ತೆ-ಮತ್ತೆ ತ್ಯಾಜ್ಯ ಎಸೆಯಲಾಗುತ್ತಿದೆ.
ನಡು ರಸ್ತೆಯಲ್ಲೇ ಕೋಳಿ ತ್ಯಾಜ್ಯ
ಆಹಾರ ತಿಂದುಂಡ ಪ್ಲಾಸ್ಟಿಕ್ ಪರಿಕರಗಳ ಜತೆಗೆ ಕೋಳಿ ತ್ಯಾಜ್ಯವನ್ನು ನಡು ರಸ್ತೆಯಲ್ಲೇ ಎಸೆದಿದ್ದಾರೆ. ಹೀಗಾಗಿ ಹಲವು ಮೀಟರ್ ದೂರ ವಾಸನೆ ಹಬ್ಬಿದೆ. ಸ್ಥಳೀಯಾಡಳಿತ ಸಿಸಿ ಕೆಮರಾ ಅಳವಡಿಸಿ ಕಿಡಿಗೇಡಿಗಳನ್ನು ಪತ್ತೆ ಹಚ್ಚುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gangolli: ಪಂಚಾಯತ್ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.