ಸಂಘಟನೆ ಉಳಿಸಿ, ಬೆಳೆಸುವಲ್ಲಿ ಸಮಾಜದ ಮಹಿಳೆಯರ ಪಾತ್ರ ಹಿರಿದು: ಜನಾರ್ದನ ಪೂಜಾರಿ
Team Udayavani, Feb 17, 2020, 5:52 AM IST
ಮಹಾನಗರ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವಿಶ್ವಬಿಲ್ಲವ ಮಹಿಳಾ ಸಂಘದ ಉದ್ಘಾಟನೆ ಶ್ರೀ ಕ್ಷೇತ್ರದಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಮಾತನಾಡಿ, ಸಂಘಟನೆ ಮಾಡುವುದು ಸುಲಭ, ಆದರೆ ಅದನ್ನು ಉಳಿಸಿ ಬೆಳೆಸುವಲ್ಲಿ ಸಮಾಜದ ಮಹಿಳೆಯರ ಪಾತ್ರ ಹಿರಿದಾದುದು. ವಿಶ್ವ ಮಟ್ಟದಲ್ಲಿ ಬಿಲ್ಲವ ಮಹಿಳೆಯರನ್ನು ಒಟ್ಟು ಸೇರಿಸಿ ಈ ಸಂಘ ಅಭಿವೃದ್ಧಿ ಕಾಣಲಿ ಎಂದರು.
ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಬಿಲ್ಲವ ಸಂಘದ ಅಧ್ಯಕ್ಷ ವೇದಕುಮಾರ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಂಘದ ಮುಖೇನ ಪ್ರಾಬಲ್ಯವನ್ನು ಮೆರೆಯಲು ಸಹಕಾರಿಯಾಗಿ ಗುರುಗಳ ಮಾತಿನ ಆಶಯ ಈಡೇರಲಿ ಎಂದು ಶುಭ ಹಾರೈಸಿದರು.ಊರ್ಮಿಳಾ ರಮೇಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿದ್ದ ಮಾಲತಿ ಜೆ. ಪೂಜಾರಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಆರ್. ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್ ಆರ್., ಡಾ| ಅನಸೂಯಾ ಬಿ. ಸಾಲ್ಯಾನ್ ಮತ್ತು ಲೇಖಕಿ ಕೆ. ಎ. ರೋಹಿಣಿ ಅವರು ಮಾತನಾಡಿದರು.
ಸಂಘಟನೆಯಿಂದ ಬಲವಾಗಿ
ಪ್ರಾಸ್ತಾವಿಕ ಮಾತನಾಡಿದ ಜಯಲಕ್ಷ್ಮೀ ಬಿ.ಆರ್. ಸಂಘಟನೆಯಿಂದ ಬಲಯುತರಾಗಿರಿ ಎಂಬುವುದು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತಾÌದರ್ಶ. ಇದರ ಪಾಲನೆಯೊಂದಿಗೆ ಮಹಿಳೆಯರ ಮತ್ತು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ, ಸರ್ವಾಂಗೀಣ ಪ್ರಗತಿಗಾಗಿ ವಿವಿಧ ಚಟುವಟಿಕೆಗಳನ್ನು ಮಾಡಿ ಎಲ್ಲ ಕ್ಷೇತ್ರಗಳಲ್ಲೂ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ವಿಶ್ವ ಬಿಲ್ಲವ ಮಹಿ ಳಾ ಸಂಘ ರಚನೆಯಾಗಿದೆ ಎಂದರು.
ಸೌಮ್ಯಾ ಯತೀಶ್ ಸ್ವಾಗತಿಸಿ, ಶೋಭಾ ಕೆ. ವಂದಿಸಿದರು. ರಮ್ಯಾ ಹಾಗೂ ಕಾವ್ಯಾ ನಿರೂಪಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಅಧ್ಯಕ್ಷರಾಗಿ ಊರ್ಮಿಳಾ ರಮೇಶ್ ಕುಮಾರ್, ಉಪಾಧ್ಯಕ್ಷರಾಗಿ ವಿಜಯಾ ಅರುಣ್, ಪ್ರಧಾನ ಕಾರ್ಯದರ್ಶಿಯಾಗಿ ಸುಜಾತಾ ಸುವರ್ಣ, ಜತೆ ಕಾರ್ಯದರ್ಶಿಯಾಗಿ ಶೋಭಾ ಕೆ., ಕೋಶಾಧಿಕಾರಿಯಾಗಿ ಶ್ರೀಲತಾ ಗೋಪಾಲಕೃಷ್ಣ ಅವರು ಆಯ್ಕೆಯಾದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.