ಗುತ್ತಕಾಡು ದೇಗುಲಕ್ಕೆ ನುಗ್ಗಿ ಕಳವು
Team Udayavani, Jul 10, 2017, 2:50 AM IST
ಕಿನ್ನಿಗೋಳಿ: ಗುತ್ತಕಾಡು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಶನಿವಾರ ರಾತ್ರಿ ಕಳ್ಳರು ದೇವಳದ ಮುಂದಿನ ಬಾಗಿಲು ಮುರಿದು ಒಳನುಗ್ಗಿ ಗರ್ಭಗುಡಿಯ ಬಾಗಿಲು ಬೀಗ ಮುರಿದು ದೇವರ ಮೇಲಿದ್ದ ಚಿನ್ನದ ಕರಿಮಣಿ ಸಹಿತ 1. 75 ಲಕ್ಷರೂ ವೆcಚ್ಚದ ಬೆಳ್ಳಿ ವಸ್ತುಗಳು ಕಳವು ನಡೆಸಲಾಗಿದೆ ಎಂದು ದೇವಸ್ಥಾನದ ಧರ್ಮದರ್ಶಿ ವಿವೇಕಾನಂದ ಅವರು ತಿಳಿಸಿದ್ದಾರೆ.
ಎಂದಿನಂತೆ ಶನಿವಾರ ರಾತ್ರಿ 10 ಗಂಟೆಗೆ ರಾತ್ರಿ ಪೂಜೆ ಮುಗಿಸಿದ ಬಳಿಕ ದೇವಸ್ಥಾನದ ಬಾಗಿಲು ಮುಚ್ಚಿ ಮನೆಗೆ ತೆರಳಿದ್ದರು. ರವಿವಾರ ಮುಂಜಾನೆ 5 ಗಂಟೆಯ ಹೊತ್ತಿಗೆ ಬರುವಾಗ ಹೊರಗಿನ ತೀರ್ಥ ಮಂಟಪದ ಬಾಗಿಲು ತೆರೆದಿರುವುದು ಕಂಡು ಬಂತು ಮತ್ತೆ ಒಳಗೆ ಹೋಗಿ ನೋಡುವಾಗ ಗರ್ಭಗುಡಿಯ ಬಾಗಿಲು ಮುರಿದು ತೆರೆದಿರುವುದು ಕಂಡುಬಂದು ಮೂಲ್ಕಿ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು.
ದೇವರ ಬೆಳ್ಳಿಯ ಪ್ರಭಾವಳಿ, ದೇವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ, ಬೆಳ್ಳಿಯಿಂದ ನಿರ್ಮಿತ ದೇವರ ಮುಖವಾಡ, ಕಿರೀಟ , ತ್ರಿಶೂಲ ಹಾಗೂ ತೀರ್ಥ ಮಂಟಪದಲ್ಲಿದ್ದ ದೇವರ ಕಾಣಿಕೆ ಹುಂಡಿ ಕಳವು ಮಾಡಲಾಗಿದೆ. ಕಾಣಿಕೆ ಹುಂಡಿಯು ದೇವಸ್ಥಾನದ ಪಕ್ಕದಲ್ಲಿನ ಸಮಾಧಿಯ ಸ್ಥಳದಲ್ಲಿ ಬಿಟ್ಟು ಹೋಗಿದ್ದು ಪತ್ತೆಯಾಗಿದೆ.
ಸ್ಥಳಕ್ಕೆ ಮೂಲ್ಕಿ ವಲಯ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಬೆರಳಚ್ಚು ತಂಡ, ಶ್ವಾನದಳ ಬಂದಿದ್ದು ಪ್ರಕರಣ ದಾಖಾಲು ಮಾಡಿ ತನಿಖೆ ನಡೆಸುತ್ತಿದ್ದಾರೆ. ಮೂಲ್ಕಿ sಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪಾಳಿಯ ಮಾದರಿ ಕಾವಲು ಉತ್ತಮ:
ಸಣ್ಣಪುಟ್ಟ ಮಂದಿರ, ದೇವಸ್ಥಾಗಳಲ್ಲಿ ರಾತ್ರಿ ಹೊತ್ತು ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಪಾಳಿಯ ತರಹ ತಂಡಗಳನ್ನು ಮಾಡಿ ಮಲಗುವುದು ಉತ್ತಮ. ದೇವಸ್ಥಾನ, ಮಂದಿರಗಳ ಭದ್ರತೆಯ ದೃಷ್ಟಿಯಿಂದ ಸಿಸಿ ಕೆಮರಾ ಆಳವಡಿಸಬೇಕಾಗಿದೆ ಅದರಿಂದ ಕಳ್ಳರ ಸುಳಿವು ಲಭ್ಯವಾಗಲಿದೆ ಎಂದು ಮೂಲ್ಕಿ ವಲಯ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.