ಸರ್ವಧರ್ಮಗಳ ಭಕ್ತರು ಆರಾಧಿಸುವ ಪುಣ್ಯ ಕ್ಷೇತ್ರ
Team Udayavani, Jan 15, 2018, 11:25 AM IST
ಉಳ್ಳಾಲ : ಉಳ್ಳಾಲ ಸರ್ವಧರ್ಮದ ಪುಣ್ಯ ಕ್ಷೇತ್ರಗಳಿಂದ ಧಾರ್ಮಿಕ ಪ್ರವಾಸೋದ್ಯಮಕ್ಕೆ ಪ್ರಸಿದ್ಧಿ ಪಡೆದಿದೆ. ಇತಿಹಾಸ ಪ್ರಸಿದ್ಧ ಸೋಮೇಶ್ವರದ ಸೋಮನಾಥ ಕ್ಷೇತ್ರ, ಉಳ್ಳಾಲ ದರ್ಗಾದೊಂದಿಗೆ ಪೆರ್ಮನ್ನೂರಿನಲ್ಲಿರುವ ಕ್ರೈಸ್ತರ ಪುಣ್ಯ ಕ್ಷೇತ್ರವಾಗಿರುವ ಸಂತ ಸೆಬಾಸ್ಟಿಯನ್ನರ ಧರ್ಮಕೇಂದ್ರ 1918ರಲ್ಲಿ ಸ್ಥಾಪನೆಗೊಂಡು ಪ್ರಸ್ತುತ ವರ್ಷ ನೂರು ವರ್ಷಗಳನ್ನು ಪೂರೈಸಿದ್ದು ಶತಮಾನೋತ್ಸವದ ಸಂಭ್ರಮದಲ್ಲಿದೆ.
ಹತ್ತೂಂಬತ್ತನೇ ಶತಮಾನದಲ್ಲಿ ಪೆರ್ಮನ್ನೂರು-ತೊಕ್ಕೊಟ್ಟು-ಉಳ್ಳಾಲ ಪರಿಸರದ ಜನರು, ದೇರಳಕಟ್ಟೆ ಸಮೀಪದ ಪಾನೀರ್ ಇಗರ್ಜಿಯಲ್ಲಿ ದೇವರನ್ನು ಆರಾಧಿಸುತ್ತಿದ್ದರು. ಸುಮಾರು 300ಕ್ಕೂ ಅಧಿಕ ಕುಟುಂಬಗಳು ಈ ಪ್ರದೇಶದಿಂದ ಆರಾಧನೆಗೆ ತೆರಳುತ್ತಿದ್ದರು. 20ನೇ ಶತಮಾನದ ಆರಂಭದಲ್ಲಿ ಜನರ ಅನುಕೂಲಕ್ಕೋಸ್ಕರ ಬಬ್ಬುಕಟ್ಟೆಯಲ್ಲಿ ಒಂದು ಚಿಕ್ಕ ಪ್ರಾರ್ಥನ ಮಂದಿರ ಕಟ್ಟಲಾಯಿತು. ಹಲವು ವರ್ಷಗಳು ಬಬ್ಬುಕಟ್ಟೆಯ ಪ್ರಾರ್ಥನ ಮಂದಿರದಲ್ಲಿ ಆರಾಧನಾ ಕಾರ್ಯ ನಡೆಯುತ್ತಿದ್ದು, ಸುಸಜ್ಜಿತ ಪ್ರಾರ್ಥನ ಮಂದಿರ ಸ್ಥಾಪನೆಯ ಉದ್ದೇಶದಿಂದ ಈಗಿರುವ ಪೆರ್ಮನ್ನೂರು ಪ್ರದೇಶದಲ್ಲಿ ಚರ್ಚ್ ಸ್ಥಾಪಿಸುವ ಮಹತ್ಕಾರ್ಯಕ್ಕೆ ಸ್ಥಳೀಯ ಭಕ್ತರು ಆಸಕ್ತಿ ತೋರಿಸಿದರು.
ಸಂತ ಸೆಬಾಸ್ಟಿಯನ್ ಧರ್ಮಕೇಂದ್ರ ನಿರ್ಮಾಣ
ಪೆರ್ಮನ್ನೂರಿನಲ್ಲಿ 1913ರಲ್ಲಿ ಚರ್ಚ್ ಕಟ್ಟುವ ಈ ಕೆಲಸ ಆರಂಭವಾಯಿತು. ನಿರ್ಮಾಣ ಕಾರ್ಯ ಮುಗಿದು 1918
ಫೆ. 1ರಂದು ಮಂಗಳೂರು ಧರ್ಮ ಕ್ಷೇತ್ರದ ಬಿಷಪರಿಂದ್ ಈ ಚರ್ಚ್‌ಗೆ ಅಧಿಕೃತ ಮನ್ನಣೆ ನೀಡಿ ವಂ| ಫಾ| ಎಸ್. ವಿ. ರೆಬೆಲ್ಲೊ ಅವರನ್ನು ಚಾಪ್ಲೈನ್ ರಾಗಿ ನೇಮಿಸಲಾಯಿತು.
ಶಿಕ್ಷಣಕ್ಕೂ ಕೊಡುಗೆ
ಈ ಪರಿಸರದಲ್ಲಿ ಶಿಕ್ಷಣ ಸಂಸ್ಥೆಗಳು ಇಲ್ಲದೇ ಇದ್ದ ಸಂದರ್ಭದಲ್ಲಿ 1928ರಲ್ಲಿ ಹೋಲಿ ಏಂಜಲ್ಸ್ ಪ್ರಾಥಮಿಕ ಶಾಲೆ
ಪ್ರಾರಂಭಿಸಿ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ನೀಡಿದೆ. ಇಲ್ಲಿನ ಕನ್ನಡ ಮಾಧ್ಯಮ ಶಾಲೆಯಲ್ಲಿ ಇಂದಿಗೂ 500ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಪ್ರಸ್ತುತ ಈ ಚರ್ಚ್‌ನ ಅಧೀನದ ಶಿಕ್ಷಣ ಸಂಸ್ಥೆಗಳಲ್ಲಿ 3,000ಕ್ಕೂ ಅಧಿಕ ವಿದ್ಯಾರ್ಥಿಗಳ ಶಿಕ್ಷಣ ಪಡೆಯುತ್ತಿದ್ದು, ಚರ್ಚ್‌ನ ಮುಖ್ಯ ಧರ್ಮಗುರು ವಂ| ಡಾ| ಜೆ.ಬಿ. ಸಲ್ದಾನ್ಹಾ, ಸಹಾಯಕ ಧರ್ಮಗುರುಗಳಾದ ವಂ. ಫಾ| ಸ್ಟಾನಿ ಪಿಂಟೋ, ವಂ| ಫಾ| ಲೈಝಿಲ್ ಡಿ’ಸೋಜಾ, ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ವಂ. ಫಾ| ಎಡ್ವಿನ್ ಮಸ್ಕರೇನ್ಹಸ್, ನಿರ್ಮಲಾ ಕಾನ್ವೆಂಟ್‌ನ ಧರ್ಮಗುರು ವಂ| ಫಾ| ಫೆಲಿಕ್ಸ್ ನೊರೋನ್ಹ ಕಾರ್ಯನಿರ್ವಹಿಸುತ್ತಿದ್ದಾರೆ.
ವಸತಿ, ವೈದ್ಯಕೀಯ ನೆರವು
ಚರ್ಚ್ ಶತಮಾನೋತ್ಸವ ಆಚರಣೆಯನ್ನು ವಿಶಿಷ್ಟವಾಗಿ ಆಚರಿಸುವ ಉದ್ದೇಶದಿಂದ ಸಮಾಜದಲ್ಲಿ ನೊಂದವರಿಗೆ ಆಸರೆಯಾಗುವ ನಿಟ್ಟಿನಲ್ಲಿ ಸುಮಾರು 1.25 ಕೋಟಿ ರೂ. ವೆಚ್ಚದಲ್ಲಿ ಬಡವರಿಗೋಸ್ಕರ 12 ಮನೆಗಳ ನಿರ್ಮಾಣ, ಸಮುದಾಯದ ಮನೆ ಮಠಗಳ ಜೀರ್ಣೋದ್ಧಾರ, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಮೆಡಿಕಲ್ ಫಂಡ್ ಹಾಗೂ ಶಿಕ್ಷಣ ನಿಧಿಯನ್ನು ವೃದ್ಧಿಸಿ ಇನ್ನೂ ಹೆಚ್ಚು ಜನರಿಗೆ ಸಹಾಯ, ವೃದ್ದ ಜೀವಗಳಿಗೆ ಮತ್ತು ರೋಗಿಗಳಿಗೆ ಅವರ ಮನೆಗೆ ತೆರಳಿ ವೈದ್ಯಕೀಯ ಸೇವೆ, ಈಗಿರುವ 13 ಸ್ವಸಹಾಯ ಸಂಘಟನೆಗಳನ್ನು 30ಕ್ಕೆ ಹೆಚ್ಚಿಸುವ ಯೋಚನೆ, ಶಿಕ್ಷಣ ಕ್ಷೇತ್ರದಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರಾಮುಖ್ಯತೆಯೊದಿಗೆ ಸ್ನಾತಕೋತ್ತರ ಪದವಿ ಪ್ರಾರಂಭ ಸೇರಿದಂತೆ ಅನೇಕ ಯೋಜನೆಯನ್ನು ಹಾಕಿಕೊಂಡಿದೆ.
ಸರ್ವಧರ್ಮ ಸಮ್ಮೇಳನದೊಂದಿಗೆ ಶತಮಾನೋತ್ಸವ
ಜನವರಿ ತಿಂಗಳ 19ರಿಂದ 21ರ ವರೆಗೆ ಪೆರ್ಮನ್ನೂರು ಚರ್ಚ್‌ನ ಶತಮಾನೋತ್ಸವ ನಡೆಯಲಿದ್ದು, ಜ.19ರಂದು ಚರ್ಚ್ ಅಧೀನದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಗುರುವಂದನೆ, ಜ.20ರಂದು ಸರ್ವ ಧರ್ಮ ಸಮ್ಮೇಳನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಸೇರಂಪೊರ್ ಯುನಿವರ್ಸಿಟಿಯ ಉಪಕುಲಪತಿ ಅತೀ ವಂದನೀಯ ಜಾನ್ ಎಸ್. ಸದಾನಂದ, ಬಶೀರ್ ಮದನಿ ಕೂಳೂರು ಸೌಹಾರ್ದ ಸಂದೇಶ ನೀಡಲಿದ್ದಾರೆ. ಮಂಗಳೂರು ಕೆಥೋಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜ. 21ರಂದು ಶತಮಾನೋತ್ಸವ ಸಮಾರೋಪದಲ್ಲಿ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.
ಪ್ರಮುಖರಿಗೆ ಆಹ್ವಾನ
ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳೊಂದಿಗೆ ಸರ್ವಧರ್ಮದವರೊಂದಿಗೆ ತೊಡಗಿಸಿಕೊಂಡಿರುವ ಈ ಪುಣ್ಯ ಕ್ಷೇತ್ರದ ಶತಮಾನೋತ್ಸವವನ್ನು ವಿಶಿಷ್ಟವಾಗಿ ಆಚರಿಸುವ ಉದ್ದೇಶದೊಂದಿಗೆ ಎಲ್ಲ ಧರ್ಮದ ಪ್ರಮುಖರಿಗೆ ಆಹ್ವಾನ ನೀಡಲಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಸಾವಿರಾರು ಸರ್ವಧರ್ಮದ ಭಕ್ತರು ಭಾಗವಹಿಸಲಿದ್ದು, ಶತಮಾನೋತ್ಸವದ ಸಿದ್ಧತೆ ಸಮರೋಪಾದಿಯಾಗಿ ನಡೆಯುತ್ತಿದೆ.
– ವಂ| ಡಾ| ಜೆ.ಬಿ.ಸಲ್ದಾನ
ಧರ್ಮಗುರುಗಳು ಸಂತ
ಸೆಬಾಸ್ಟಿಯನ್ ಧರ್ಮಕೇಂದ್ರ ಪೆರ್ಮನ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.