ಎಲ್ಲೆಡೆ ರಾರಾಜಿಸುತ್ತಿವೆ ಕೇಸರಿ ಧ್ವಜ
Team Udayavani, Nov 24, 2017, 9:54 AM IST
ಮಹಾನಗರ: ಉಡುಪಿಯಲ್ಲಿ ಶುಕ್ರವಾರ ಆರಂಭಗೊಳ್ಳಲಿರುವ ಧರ್ಮಸಂಸದ್‌ಗೆ ಮಂಗಳೂರು ನಗರವೂ ಸಜ್ಜುಗೊಂಡಿದ್ದು, ಧರ್ಮಸಂಸದ್ ಮತ್ತು ನ.26ರಂದು ನಡೆಯಲಿರುವ ಹಿಂದೂ ಸಮಾಜೋತ್ಸವಕ್ಕೆ ಶುಭಕೋರಿ ನಗರಾದಾದ್ಯಂತ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ.
ಧರ್ಮಸಂಸದ್‌ನ ಮಂಗಳೂರು ನಗರ ಕಚೇರಿಯು ಮಲ್ಲಿಕಟ್ಟೆಯಲ್ಲಿರುವ ಶ್ರೀಕೃಷ್ಣ ಕಲ್ಯಾಣಮಂಟಪದಲ್ಲಿ ಕಾರ್ಯಾಚರಿಸುತ್ತಿದ್ದು ಈಗಾಗಲೆ ವೈದ್ಯರು, ಬಿಲ್ಡರ್‌ಗಳು, ನ್ಯಾಯವಾದಿಗಳು , ವಾಣಿಜ್ಯ ಮತ್ತು ಉದ್ದಿಮೆ ಸಮುದಾಯ, ಶಿಕ್ಷಕ ಸಮುದಾಯ ಸಹಿತ ಸಮಾಜದ ವಿವಿಧ ಗಣ್ಯರ ಸಭೆಗಳನ್ನು ಆಯೋಜಿಸಲಾಗಿದೆ. ವಿಹಿಂಪ, ಬಜರಂಗದಳ ಸಹಿತ ಹಿಂದೂ ಸಂಘಟನೆಗಳ ನಾಯಕರು ಹಾಗೂ ಗಣ್ಯರು ಕೆಲವು ದಿನಗಳಿಂದ ಹಲವಾರು ಸಭೆಗಳನ್ನು ನಡೆಸಿದ್ದು, ಕಾರ್ಯಕ್ರಮಕ್ಕೆ ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕಳುಹಿಸಿಕೊಡಲು ಸಿದ್ಧತೆ ನಡೆಸಿದ್ದಾರೆ.
ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್ ವೃತ್ತ , ಪಿವಿಎಸ್, ಬಲ್ಲಾಳ್‌ಬಾಗ್, ಕದ್ರಿಹಿಲ್ಸ್, ನಂತೂರು, ಕಂಕನಾಡಿ, ಪಂಪ್‌ವೆಲ್, ಯೆಯ್ನಾಡಿ, ಬೋಂದೆಲ್, ಕೂಳೂರು, ಮಂಗಳಾದೇವಿ, ನವಭಾರತ ಸರ್ಕಲ್, ರಥಬೀದಿ, ಮಣ್ಣಗುಡ್ಡೆ , ಲೇಡಿಹಿಲ್ , ಕೊಟ್ಟಾರ, ಕೊಂಚಾಡಿ ಸಹಿತ ಪ್ರಮುಖ ವೃತ್ತಗಳಲ್ಲಿ ದೊಡ್ಡ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ನಗರದ ಪ್ರಮುಖ ರಸ್ತೆಗಳ ವಿಭಾಜಕಗಳಲ್ಲಿ ಸಣ್ಣ ಗಾತ್ರದ ಬ್ಯಾನರ್‌ಗಳನ್ನು ಹಾಕಲಾಗಿದೆ. ಕೆಲವು ಕಡೆ ಬಂಟಿಂಗ್ಸ್‌ಗಳಿಂದ ಅಲಂಕರಿಸಲಾಗಿದೆ.
ಸಂಘಪರಿವಾರದ ಪ್ರಮುಖರಿಗೆ ವಿವಿಧ ಹೊಣೆಗಾರಿಕೆಯನ್ನು ವಹಿಸಿಕೊಡಲಾಗಿದ್ದು, ಕಾರ್ಯಕರ್ತರು ಜಿಲ್ಲೆಯ ವಿವಿಧೆಡಗಳಿಂದ ತೆರಳಲಿದ್ದಾರೆ. ಸುಮಾರು 100 ಭಜನ ತಂಡಗಳು ಹಿಂದೂ ಸಮಾಜೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಲಿವೆ.
ಪೊಲೀಸ್ ಬಂದೋಬಸ್ತ್
ದೇಶದ ವಿವಿಧೆಡೆಗಳಿಂದ ಹಿರಿಯ ಸಾಧುಸಂತರು, ವಿಶ್ವ ಹಿಂದೂ ಪರಿಷತ್, ಆರೆಸ್ಸೆಸ್‌ನ ರಾಷ್ಟ್ರೀಯ ನಾಯಕರು, ಹಿಂದೂ ಸಂಘಟನೆಗಳ ಪ್ರಮುಖರು ಆಗಮಿಸುತ್ತಿದ್ದಾರೆ. ಹೆಚ್ಚಿನವರು ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ರಸ್ತೆ ಮಾರ್ಗ ಮೂಲಕ ಉಡುಪಿಗೆ ತೆರಳುತ್ತಾರೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಹಾಗೂ ಮಂಗಳೂರು- ಉಡುಪಿ ರಸ್ತೆ ಮಧ್ಯೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಮೂಡಬಿದಿರೆ
ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಸಹಿತ ಸಂಘ ಪರಿವಾರದಿಂದ ಈಗಾಗಲೇ 20 ಮಂದಿ ಪ್ರಬಂಧಕರಾಗಿ ಸೇವೆ ಸಲ್ಲಿಸಲು ಉಡುಪಿಗೆ ತೆರಳಿದ್ದಾರೆ. ರವಿವಾರ ನಡೆಯಲಿರುವ ಹಿಂದೂ ಸಮಾಜೋತ್ಸವಕ್ಕೆ ಮೂಡಬಿದಿರೆ ಪ್ರಖಂಡದಿಂದ ಸುಮಾರು 4,000 ಮಂದಿ ಭಾಗವಹಿಸಲಿದ್ದಾರೆ ಎಂದು ಪ್ರಮುಖರು ತಿಳಿಸಿದ್ದಾರೆ.
ಮೂಲ್ಕಿ
ನಗರದಲ್ಲೂ ಕೇಸರಿ ಧ್ವಜಗಳು ಕಂಡು ಬರುತ್ತಿದ್ದು, ಕೆಲವೆಡೆ ಬಂಟಿಂಗ್ಸ್ ಅಲಂಕಾರ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾರ್ಯಕರ್ತರಿಗೆ ನಾಯಕರು ಉತ್ಸಾಹ ತುಂಬುವ ಕೆಲಸ ಮಾಡುತ್ತಿದ್ದಾರೆ.
ಸುರತ್ಕಲ್
ಸಾಧು ಸಂತರಿಗೆ ಸ್ವಾಗತ ಕೋರುವ ಮತ್ತು ಕಾರ್ಯಕ್ರಮಕ್ಕೆ ಶುಭ ಕೋರುವ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಧರ್ಮಸಂಸದ್ ಅ ಧಿವೇಶನದಲ್ಲಿ ಹಿಂದೂ ರಾಷ್ಟ್ರ ರಕ್ಷಣೆಯ ಮುಖ್ಯ ನಿರ್ಣಯಗಳು ಹೊರ ಬರಲಿ ಎನ್ನುವ ಹಾರೈಕೆಯ ಬರಹಗಳು ರಾರಾಜಿಸುತ್ತಿವೆ.
ಉಳ್ಳಾಲ
ಉಳ್ಳಾಲ, ತೊಕ್ಕೊಟ್ಟು, ಮುಡಿಪು, ಕೈರಂಗಳ, ಬೋಳಿಯಾರ್, ದೇರಳಕಟ್ಟೆ, ಗ್ರಾಮಚಾವಡಿ, ತಲಪಾಡಿ, ಕೋಟೆಕಾರು ಸಹಿತ ಸುತ್ತಮುತ್ತಲಿನಲ್ಲಿ ಹಿಂದೂ ಸಂಘಟನೆಗಳು ಬ್ಯಾನರ್, ಫ್ಲೆಕ್ಸ್, ಬಂಟಿಂಗ್ಸ್‌ಗಳನ್ನು ಅಳವಡಿಸಿವೆ. ಗ್ರಾಮಚಾವಡಿ, ಅಸೈಗೋಳಿ ಮತ್ತು ತೊಕ್ಕೊಟ್ಟು ಒಳಪೇಟೆಯಲ್ಲಿ ಬಂಟಿಂಗ್ಸ್‌ಗಳನ್ನು ಹಾಕಲಾಗಿದ್ದು, ಉಳಿದೆಡೆ ಫ್ಲೆಕ್ಸ್‌ಗಳು ಮತ್ತು ಬ್ಯಾನರ್‌ಗಳ ಮೂಲಕ ಶುಭಕೋರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.