ಹಾಡಹಗಲೇ ಭೀತಿ ಹುಟ್ಟಿಸಿದ ಕಾಡಾನೆ
Team Udayavani, Dec 28, 2017, 12:05 PM IST
ಸುಬ್ರಹ್ಮಣ್ಯ: ದೇವಚಳ್ಳ ಸಮೀಪದ ಕರಂಗಲ್ಲಿನಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ ಕಾಡಾನೆಯೊಂದು ಕಾಣಿಸಿಕೊಂಡು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಕರಂಗಲ್ಲು ನಿವಾಸಿ ಜಯಪ್ರಕಾಶ ಅವರ ಪತ್ನಿ ದಿವ್ಯಾ ಅವರು ತೋಟದ ದಾರಿಯಲ್ಲಿ ಸಾಗುತ್ತಿದ್ದಾಗ ಏಕಾಏಕಿ ಬೃಹತ್ ಗಾತ್ರದ ದಂತ ಹೊಂದಿರುವ ಆನೆ ಕಾಣಿಸಿಕೊಂಡಿತು. ಬೆದರಿದ ಅವರು ಗಾಬರಿಯಿಂದ ಮನೆಯತ್ತ ಓಡಿ ಹೋದರು. ಇದೇ ವೇಳೆ ಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಪ್ರೇಮಾ ಮಾಣಿಬೆಟ್ಟು ಅವರಿಗೂ ಕಾಡಾನೆ ಕಾಣಿಸಿಕೊಂಡಿದೆ. ಇಬ್ಬರೂ ಕೂದಲೆಳೆಯ ಅಂತರದಲ್ಲಿ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ.
ಮನೆಯಂಗಳಕ್ಕೂ ಬಂತು !
ಆನೆಯು ಕರಂಗಲ್ಲು ಪ್ರಕಾಶ, ನರಸಿಂಹ ಮಾಣಿಬೆಟ್ಟು, ಸುಂದರ ಮಾಣಿ ಬೆಟ್ಟು ಮೊದಲಾದವರ ತೋಟಗಳಲ್ಲಿ ಅಡ್ಡಾಡಿ ಹಾನಿ ಮಾಡಿದೆ. ಪುಂಡರೀಕ ಅವರ ಮನೆ ಅಂಗಳದಲ್ಲಿ 10 ನಿಮಿಷ ಕಳೆ ದಿದೆ. ಅಲ್ಲಿಂದ ನೆಡಿcಲ್ ಚೆನ್ನಪ್ಪ ಹಾಗೂ ಬೊಳಿಯಪ್ಪ ಮಾವಜಿ ಅವರಿಬ್ಬರ ತೋಟ ಹಾಗೂ ಮನೆಪಕ್ಕದಲ್ಲಿ ಸಂಚರಿಸಿದೆ. ಇತರ ಹಲವು ಮಂದಿ ತೋಟಗಳಿಗ ದಾಳಿ ನಡೆಸಿದೆ. ಶಾಲೆ ಬಳಿಗೆ ಬಂದ ಕಾಡಾನೆ ಬೈಲಿನ ತೋಟದ ಉದ್ದಕ್ಕೂ ಸಂಚಾರ ಬೆಳೆಸಿದ ಕಾಡಾನೆ ಬಳಿಕ ಕರಂಗಲ್ಲು ಶಾಲೆ ಬಳಿ ಬಂದು ನಿಂತಿತು. ಮಧ್ಯಾಹ್ನ ಊಟ ಮಾಡಿ ಕೈತೊಳೆಯು ತ್ತಿದ್ದ ಮಕ್ಕಳ ಸನಿಹಕ್ಕೇ ಆನೆ ಬಂದು ಭಯದ ವಾತಾವರಣ ಸೃಷ್ಟಿಸಿತು. ಸ್ಥಳೀಯರು ಶಂಖ ಊದಿ, ಸಿಡಿಮದ್ದು ಸಿಡಿಸಿ ಓಡಿಸುವ ಪ್ರಯತ್ನ ನಡೆಸಿದರು. ಬಹು ಹೊತ್ತಿನ ಬಳಿಕ ಕಾಡಾನೆ ಕಾಡಿನತ್ತ ಮರಳಿದೆ. ದಾಳಿ ವೇಳೆ ಹಲವು ಕೃಷಿಕರ ಫಸಲು, ಕೃಷಿ ಸಲಕರಣೆಗಳಿಗೆ ನಾಶ ಮಾಡಿದೆ. ಹಟ್ಟಿ, ಪಂಪ್ ಶೆಡ್‌ಗಳಿಗೂ ಹಾನಿಯಾಗಿದೆ ಎಂದು ಕೃಷಿಕರು ತಿಳಿಸಿದ್ದಾರೆ.
ಗಜ ಯಾತ್ರೆ ವೇಳೆ ಅಲ್ಪಸ್ವಲ್ಪ ಹಾನಿ ಯಾಗಿದ್ದು ಬಿಟ್ಟರೆ ನಾಗರಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಪ್ರತ್ಯಕ್ಷ ದರ್ಶಿ ಪದ್ಮನಾಭ ಕರಂಗಲ್ಲು ಉದಯವಾಣಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ
ಗದಗ: ನೀರು ಸೋರಿಕೆ- ನದಿಯಲ್ಲಿ ನೀರಿದ್ದರೂ ತಪ್ಪದ ಹಾಹಾಕಾರ!
ನೇತ್ರಾವತಿ ನದಿಯಲ್ಲಿ ಗೋಮಾಂಸ ಪತ್ತೆ ಮತಾಂಧತೆ ತೋರಿಸುತ್ತದೆ: ಸಿ.ಟಿ. ರವಿ ಕಿಡಿ
Healthy Recipe: ಹಳೇ ಕಾಲದ ರುಚಿ; ಈ ರೆಸಿಪಿ ಮಾಡದಿದ್ದರೆ ಒಮ್ಮೆಯಾದ್ರು ಮಾಡಿ ನೋಡಿ…
BGT Finale: ಪಂದ್ಯಕ್ಕಿಲ್ಲ ರೋಹಿತ್ ಶರ್ಮ? ಬುಮ್ರಾ ನಾಯಕತ್ವಕ್ಕೆ ಸಿದ್ಧ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.