ಖುಷಿಯಿಂದಲೇ ಶಾಲೆಯತ್ತ ಹೆಜ್ಜೆ ಹಾಕಿದ ಚಿಣ್ಣರು
Team Udayavani, May 30, 2019, 6:00 AM IST
ಮಹಾನಗರ: ಎಲ್ಲ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಬುಧವಾರ 2019- 20ನೇ ಸಾಲಿನ ಶೈಕ್ಷಣಿಕ ವರ್ಷಾರಂಭಕ್ಕೆ ತೆರೆದುಕೊಂಡಿವೆ. ಬೇಸಗೆ ರಜೆಯ ಮಜಾವನ್ನು ಕಳೆದು ವಿದ್ಯಾರ್ಥಿಗಳೂ ಖುಷಿಯಲ್ಲಿ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ. ಅವರನ್ನು ಬರ ಮಾಡಿಕೊಳ್ಳಲು ನಗರದ ಎಲ್ಲ ಸರಕಾರಿ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಹಮ್ಮಿಕೊಳ್ಳಲಾಯಿತು.
ಎಪ್ರಿಲ್ ಹತ್ತರಿಂದ ಒಂದೂ ವರೆ ತಿಂಗಳಿಗೂ ಹೆಚ್ಚು ಕಾಲ ರಜಾ ಕಾಲದ ಸಂಭ್ರಮವನ್ನು ಅನುಭವಿಸಿದ್ದ ಮಕ್ಕಳಿಗೆ ಇನ್ನೇನಿದ್ದರೂ ಬ್ಯಾಗ್ ಹೆಗಲೇರಿಸಿಕೊಂಡು ಶಾಲೆಗೆ ತೆರಳುವ ಸಮಯ. ಆಟದಲ್ಲಿ ಮೈಮರೆತ ಮಕ್ಕಳಿಗೆ ಪಾಠ ಕಲಿಯುವ ದಿನಗಳು. ರಜಾ ಕಾಲದಲ್ಲಿ ಖುಷಿಯಲ್ಲಿದ್ದ ಮಕ್ಕಳಿಗೆ ರಜೆ ಕಳೆದು ಶಾಲೆಗೆ ಬರುವಾಗ ಬೇಸರವಾಗಬಾರದು ಎಂಬ ಕಾರಣಕ್ಕಾಗಿ ಕೆಲವು ವರ್ಷಗಳಿಂದ ಸರಕಾರವು ಶಾಲಾ ಪ್ರಾರಂಭೋತ್ಸವವನ್ನು ಹಮ್ಮಿಕೊಳ್ಳಲು ಸೂಚಿಸಿತ್ತು.
ಹೂ ನೀಡಿ ಸ್ವಾಗತ
ಎಲ್ಲ ಶಾಲೆಗಳಲ್ಲಿಯೂ ಮಕ್ಕಳನ್ನು ವಿಶಿಷ್ಟವಾಗಿ ಸ್ವಾಗತಿಸಲಾಯಿತು. ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಶಾಲೆ ಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಅತ್ತಾವರ, ಗಾಂಧಿ ನಗರ, ಕೊಂಚಾಡಿ ರಾಮಾಶ್ರಮ ಶಾಲೆಯಲ್ಲಿ ಶಾಲಾ ಗೇಟ್ ಬಳಿ ನಿಂತಿದ್ದ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳಿಗೆ ಹೂ ನೀಡಿ ಶಾಲೆಯೊಳಗೆ ಬರಮಾಡಿಕೊಂಡರು. ಶಿಕ್ಷಕರ ಪ್ರೀತಿಗೆ ಫಿದಾ ಆದ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸುತ್ತಲೇ ಶಾಲೆಯೊಳಗೆ ಪ್ರವೇಶಿಸಿದರು. ಒಂದೂವರೆ ತಿಂಗಳಿನಿಂದ ದೂರವಾಗಿದ್ದ ಸ್ನೇಹಿತರ ಒಡನಾಟ ಈಗ ಮರು ಬೆಸೆದುಕೊಂಡಿದ್ದರಿಂದ ಫುಲ್ ಖುಷಿಯಾದ ಮಕ್ಕಳು ಪರಸ್ಪರ ರಜೆಯ ದಿನಗಳನ್ನು ಮೆಲುಕು ಹಾಕತೊಡಗಿದರು.
ಬಳಿಕ ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು, ಹೆತ್ತವರು ಮತ್ತು ಮಕ್ಕಳನ್ನೊಳಗೊಂಡ ಸಭೆ ನಡೆಸಿ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಬಳಿಕ ಪಠ್ಯಪುಸ್ತಕ ವಿತರಿಸಲಾಯಿತು. ವಿದ್ಯಾರ್ಥಿಗಳು, ಹೆತ್ತವರು ಮತ್ತು ಬಂದ ಎಲ್ಲ ಅತಿಥಿಗಳಿಗೆ ಸಿಹಿತಿಂಡಿ ವಿತರಣೆ ನಡೆಯಿತು.
ಗಾಂಧಿನಗರ ಶಾಲೆಯಲ್ಲಿ ಮಾಜಿ ಕಾರ್ಪೊರೇಟರ್ ಜಯಂತಿ ಆಚಾರ್, ಐಆರ್‌ಟಿ ಸಾಧನಾ, ಎಸ್‌ಡಿಎಂಸಿ ಸದಸ್ಯ ಕನಕಪ್ಪ, ಮುಖ್ಯೋಪಾಧ್ಯಾಯಿನಿ ಯಶೋದಾ ಬಿ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್ ಸುವರ್ಣ, ನಿವೃತ್ತ ಶಿಕ್ಷಕಿ ವೀಣಾ ಬಿ. ಮತ್ತಿತರರು ಉಪಸ್ಥಿತರಿದ್ದರು.
ಅತ್ತಾವರ ಹಿ.ಪ್ರಾ. ಶಾಲೆಯಲ್ಲಿ ಗೌರವ ಸಲಹೆಗಾರ ರತೀಂದ್ರನಾಥ್ ಎಚ್., ಎಸ್‌ಡಿಎಂಸಿ ಅಧ್ಯಕ್ಷೆ ಕವಿತಾ, ನಿವೃತ್ತ ಮುಖ್ಯೋಪಾಧ್ಯಾಯಿನಿ ಹೇಮಾವತಿ ಪಿ.ಎಸ್., ಪ್ರಭಾರ ಮುಖ್ಯೋಪಾಧ್ಯಾಯಿನಿ ಜಯಾ ಮತ್ತಿತರರು ಉಪಸ್ಥಿತರಿದ್ದರು.
ಬಿಸಿಯೂಟ ಸವಿದರು
ಬೆಳಗ್ಗೆ ಒಂಬತ್ತು ಗಂಟೆಗೆ ಶಾಲೆಗೆ ಆಗಮಿಸಿದ ಮಕ್ಕಳು ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿದರು. ಬಳಿಕ ತಮ್ಮ ತಮ್ಮ ತರಗತಿಗೆ ತೆರಳಿ ಹೊಸ ಪಠ್ಯಪುಸ್ತಕಗಳನ್ನು ನೋಡಿದರು. ಬಳಿಕ ಮಧ್ಯಾಹ್ನದ ಬಿಸಿಯೂಟ ಸವಿದರು. ಕೆಲವು ಶಾಲೆಗಳಲ್ಲಿ ಬಿಸಿಯೂಟಕ್ಕೆ ಪಾಯಸದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಟ್ಯಾಂಕರ್ ನೀರು ಪೂರೈಕೆ
ಶಾಲಾರಂಭದ ದಿನದಂದೇ ಕೆಲವು ಶಾಲೆಗಳಲ್ಲಿ ನೀರಿನ ಸಮಸ್ಯೆ ಉಂಟಾಯಿತು.
ವಿಶೇಷವೆಂದರೆ, ಈ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿ ಮಕ್ಕಳಿಗೆ ಸಂಪೂರ್ಣ ಇಂಗ್ಲಿಷ್‌ನಲ್ಲಿ ಕಲಿಯುವ ಸದವಕಾಶ ಲಭ್ಯವಾಗಲಿದೆ. ಕನ್ನಡ ಭಾಷಾ ಪಠ್ಯ ಹೊರತು ಪಡಿಸಿ ಇಂಗ್ಲಿಷ್, ಪರಿಸರ ಅಧ್ಯಯನ ಮತ್ತು ಗಣಿತ ಪಠ್ಯಗಳನ್ನು ಮಕ್ಕಳು ಇಂದಿನಿಂದಲೇ ಇಂಗ್ಲಿಷ್‌ನಲ್ಲಿ ಕಲಿಯಲಿದ್ದಾರೆ. ಆದರೆ, ಕನ್ನಡ ಮಾಧ್ಯಮ ಬೇಕಾದವರಿಗೆ ನಲಿಕಲಿ ಯೋಜನೆಯಡಿಯಲ್ಲಿ ಕನ್ನಡ ಮಾಧ್ಯಮ ಶಿಕ್ಷಣವೂ ಇರಲಿದೆ ಎಂದು ಶಾಲೆಗಳ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.