ಹಳ್ಳಿ ಪ್ರದೇಶಗಳಲ್ಲಿ ಈಗಲೂ ಸರ್ವರ್ ಸಮಸ್ಯೆ
Team Udayavani, Dec 3, 2017, 4:26 PM IST
ವಿಟ್ಲ: ಬಾಪೂಜಿ ಸೇವಾ ಕೇಂದ್ರ ಪ್ರತಿ ಗ್ರಾ.ಪಂ.ನಲ್ಲಿ ತೆರೆಯಲಾದ ಯೋಜನೆಯಾಗಿದ್ದು ಇಲ್ಲಿ 100ಕ್ಕೂ ಅಧಿಕ ಸೌಲಭ್ಯಗಳು ನಾಗರಿಕರಿಗೆ ಸಿಗಬೇಕು ಎಂಬ ಯೋಚನೆ ಸರಕಾರದ್ದು. ಇದರ ಮೂಲಕ ಪ್ರತಿಯೊಬ್ಬ ಪಟ್ಟಾದಾರರಿಗೂ ಅವರ ಆರ್.ಟಿ.ಸಿ. (ಪಹಣಿ ಪತ್ರಿಕೆ) ಸಿಗಬೇಕು. ಆದರೆ ಅದು ಇಂದಿಗೂ ಸಿಗುತ್ತಿಲ್ಲ. ತೀರಾ ಹಳ್ಳಿ ಪ್ರದೇಶದಲ್ಲಿ ಸರ್ವರ್ ಸಮಸ್ಯೆ ಇನ್ನೂ ಕಾಡುತ್ತಿದೆ. ಅದೇ ಕಾರಣಕ್ಕೆ ನಾಗರಿಕರಿಗೆ ಆ ಸೌಲಭ್ಯ ಒದಗಿಸಲಾಗುತ್ತಿಲ್ಲ.
ಎಲ್ಲ ಗ್ರಾ.ಪಂ.ಗಳಲ್ಲಿಯೂ ಈ ಸಮಸ್ಯೆ
ಜಿಲ್ಲೆಯ ವಿವಿಧೆಡೆ ಈ ಸಮಸ್ಯೆಗಳಿಂದ ನಾಗರಿಕರು ಬಳಲುತ್ತಿದ್ದು,ಬಂಟ್ವಾಳ ತಾ|ನ ತುತ್ತತುದಿ ಮಾಣಿ, ಪೆರುವಾಯಿ, ಕನ್ಯಾನ, ಕರೋಪಾಡಿ, ವಿಟ್ಲಪಟ್ನೂರು ಮೊದಲಾದ ವಿಟ್ಲ ಆಸುಪಾಸಿನ ಎಲ್ಲ ಗ್ರಾಮಗಳಲ್ಲಿ ಆಗಾಗ ಸರ್ವರ್ ಸಮಸ್ಯೆಯನ್ನು ಎದುರಿಸಬೇಕಾಗಿದೆ.ಇಲ್ಲೆಲ್ಲ ಇರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಕಳೆದ ಎರಡು ತಿಂಗಳುಗಳಿಂದ ಪಹಣಿ ಪತ್ರಿಕೆ ನೀಡುವುದು ಸ್ಥಗಿತಗೊಂಡಿದೆ. ಕಾಗದದ ಅಳತೆ ಬದಲಾಯಿಸಲಾಗುತ್ತಿದೆ ಎಂಬ ಉತ್ತರ ಮೇಲಿನಿಂದ ನೀಡಲಾಗುತ್ತಿದೆ. ಆದರೆ ಕಾಗದ ಇನ್ನೂ ಬಂದಿಲ್ಲ. ಆಗಾಗ ಸರ್ವರ್ ಸಮಸ್ಯೆ ಇದ್ದೇ ಇರುತ್ತದೆ ಎಂದು ಎಲ್ಲ ಗ್ರಾಮಸ್ಥರೂ ದೂರಿದ್ದಾರೆ.
ಪರಿಸ್ಥಿತಿ ಹೇಗಾಗಿದೆ ?
ಹಿಂದೆ ಇವೆಲ್ಲವನ್ನೂ ಹಳ್ಳಿಗರು 40 ಕಿ.ಮೀ. ದೂರದ ತಾಲೂಕು ಕೇಂದ್ರಗಳಿಗೆ ತೆರಳಿ ಪಡೆಯಬೇಕಾಗಿತ್ತು. ಹಲವು ಬಾರಿ ಅಷ್ಟು ದೂರ ತೆರಳಿ, ಯಾವುದೋ ಸಮಸ್ಯೆಯಿಂದ ಅದು ಸಿಗದೇ, ಹಿಂದಿರುಗಬೇಕಾಗುತ್ತಿತ್ತು. ಈ ಸಮಸ್ಯೆ ಬಗೆಹರಿಸಲು ಆಯಾ ಹೋಬಳಿ ಕೇಂದ್ರದಲ್ಲಿ ನೆಮ್ಮದಿ ಕೇಂದ್ರ ತೆರೆಯಲಾಯಿತು. ಇಲ್ಲಿ ಪಹಣಿ ಪತ್ರಿಕೆ ನೀಡಲಾಗುತ್ತಿತ್ತು. ಇಲ್ಲಿ ಸರ್ವರ್ ಸಮಸ್ಯೆ. ಗ್ರಾ.ಪಂ.ಗಳಲ್ಲೇ ಇರುವ ಬಾಪೂಜಿ ಸೇವಾ ಕೇಂದ್ರಗಳಲ್ಲೇ ಆ ವ್ಯವಸ್ಥೆ ಕಲ್ಪಿಸುವುದು ಉತ್ತಮ ಆದರೂ ಇಲ್ಲಿಯೂ ಸರ್ವರ್ ಸಮಸ್ಯೆ ಇದೆ. ಹಳ್ಳಿಗರು ಇಲ್ಲಿ ಪಹಣಿ ಪತ್ರ ಸಿಗದಾಗ ಹೋಬಳಿ, ಅಲ್ಲಿಂದ ತಾಲೂಕು ಕೇಂದ್ರಕ್ಕೆ ತೆರಳಿ ದಿನಗಟ್ಟಲೆ ಅಲೆಯುವ ಪರಿಸ್ಥಿತಿ ಮುಂದುವರಿದಿದೆ. ಅಂದರೆ ವ್ಯವಸ್ಥೆಯ ಹೆಸರು ಬದಲಾಗಿವೆ. ಆದರೆ ಹಳ್ಳಿಯ ಕೇಂದ್ರದಿಂದ ತಾ|
ಕೇಂದ್ರದವರೆಗೂ ಸಮಸ್ಯೆ ಒಂದೇ! ಅದು ಸರ್ವರ್ ಸಮಸ್ಯೆ!
ಪ್ರಗತಿಯ ಹೆಜ್ಜೆಯಲ್ಲಿ
ಸರ್ವರ್ ಸಮಸ್ಯೆ ಇರದ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಇದೀಗ ಜಾತಿ, ಆದಾಯ , ವಾಸ್ತವ್ಯ, ಹುಟ್ಟು ಮತ್ತು ಸಾವಿನ ದೃಢೀಕರಣ, ವಿಧವಾ ದೃಢೀಕರಣ, ನಿರುದ್ಯೋಗಿ ದೃಢೀಕರಣ ಪತ್ರ ಮತ್ತು ಇತರ ಹಲವಾರು ಮಾಹಿತಿಪತ್ರಗಳನ್ನು ಗ್ರಾಮಸ್ಥರಿಗೆ ಒದಗಿಸಲಾಗುತ್ತಿದೆ. ಪ್ರಗತಿಯ ಹೆಜ್ಜೆಯಲ್ಲಿ ಕೆಲವೊಂದು ಅಂಶಗಳು ಇದೀಗ ನಾಗರಿಕರಿಗೆ ಒದಗಿಸಲಾಗುತ್ತದೆ. ಪಹಣಿ ಪತ್ರಿಕೆಗೆ ತಾಲೂಕು ಅಥವಾ ಜಿಲ್ಲೆಯ ಕೇಂದ್ರಗಳಿಂದ ಅವಶ್ಯವಿರುವ ಕಾಗದಗಳನ್ನು ಒದಗಿಸಲಾಗುತ್ತಿಲ್ಲ ಮತ್ತು ವೆಬ್‌ಸೈಟ್ ಕೂಡ ನಿಷ್ಕ್ರಿಯಗೊಂಡಿದೆ. ಇದರ ಅಭಿವೃದ್ಧಿ ಮಾಡಲಾಗುತ್ತಿದೆ ಎಂಬ ಉತ್ತರ ಬರುತ್ತಿದ್ದು ತಾಲೂಕು ಕೇಂದ್ರಗಳಲ್ಲಿಯೂ ಹಿಂದಿನ ರೀತಿಯ ಆರ್‌ಟಿಸಿ ಒದಗಿಸುತ್ತಿಲ್ಲವೆನ್ನಲಾಗುತ್ತಿದೆ.
ಸಾಫ್ಟ್ ವೇರ್ ಬದಲಾಗಿಲ್ಲ
ಹಿಂದೆ ಮುದ್ರಿತ ಕಾಗದವನ್ನು ಒದಗಿಸಲಾಗುತ್ತಿತ್ತು. ಅದರಲ್ಲೇ ವಿವರ ಮುದ್ರಿಸಿ, ಪಹಣಿ ಪತ್ರಿಕೆಯನ್ನು ನೀಡಲಾಗುತ್ತಿತ್ತು. ಇಂದು ಮುದ್ರಿತ ಕಾಗದ ಇಲ್ಲ. ಲೀಗಲ್ ಅಳತೆಯ ಕಾಗದದಲ್ಲೇ ಮುದ್ರಿಸಲು ಸಾಧ್ಯ. ಆದರೆ ಈ ವ್ಯವಸ್ಥೆ ಎಲ್ಲ ಅಟಲ್ ಜೀ ಸ್ನೇಹಿ ಕೇಂದ್ರದಲ್ಲಿ ಇದೆ. ಅಂದರೆ ಈ ಕೇಂದ್ರಗಳಲ್ಲಿ ಕಂಪ್ಯೂಟರ್‌ನಲ್ಲಿ ಸಾಫ್ಟ್‌ವೇರ್ ಅಪ್‌ಗ್ರೇಡ್ ಮಾಡಲಾಗಿದೆ. ಬಾಪೂಜಿ ಸೇವಾ ಕೇಂದ್ರಗಳಲ್ಲಿ ಇದು ಆಗಿಲ್ಲ. ಆದುದರಿಂದ ಸಮಸ್ಯೆಯಾಗಿದೆ. ಸರಕಾರಕ್ಕೆ ಅಪ್‌ಗ್ರೇಡ್ ಮಾಡಿಕೊಡಬೇಕು ಎಂದು ಪತ್ರ ಬರೆದಿದ್ದೇವೆ. ಆಗ ಈ ಸಮಸ್ಯೆ ಪರಿಹಾರವಾಗುತ್ತದೆ.
– ಅನಂತ್, ಜಿಲ್ಲಾ ಅಟಲ್‌ಜೀ ಸ್ನೇಹಿ
ಕೇಂದ್ರದ ಕನ್ಸಲ್ಟೆಂಟ್
ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.