ಕುಸಿಯುವ ಭೀತಿಯಲ್ಲಿ ಮೈಲದ ಕಿರು ಸೇತುವೆ
ಮೂರು ವರ್ಷಗಳಿಂದ ಮನವಿ ಸಲ್ಲಿಸಿದರೂ ದುರಸ್ತಿಯಾಗಿಲ್ಲ
Team Udayavani, May 8, 2019, 5:50 AM IST
ದೊಡ್ಡ ಕೊರಕಲು ಬಿದ್ದು ಕುಸಿತದ ಭೀತಿ ಎದುರಿಸುತ್ತಿರುವ ಮೈಲದ ಕಿರು ಸೇತುವೆ.
ಗುತ್ತಿಗಾರು: ಕೊಲ್ಲಮೊಗ್ರ ಗ್ರಾಮದ ಕಟ್ಟ ಸಮೀಪದ ಮೈಲ ಎನ್ನುವಲ್ಲಿ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿನ ಕಿರು ಸೇತುವೆ ಕಳೆದ ಮೂರು ವರ್ಷಗಳಿಂದ ದುರಸ್ತಿಯನ್ನೇ ಕಂಡಿಲ್ಲ. ಕೊಲ್ಲಮೊಗ್ರು- ಕರಂಗಲ್ಲು- ಕಂದ್ರಪ್ಪಾಡಿ ಸಂಪರ್ಕ ರಸ್ತೆಯಾಗಿರುವ ಇಲ್ಲಿ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು, ದುರಸ್ತಿ ಕಾಣದೆ ಇಂದೋ ನಾಳೆಯೋ ಕುಸಿದು ಬೀಳುವ ಪರಿಸ್ಥಿತಿಯಲ್ಲಿದೆ. ಮಡಪ್ಪಾಡಿ ಮೂಲಕ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯಿಂದ ಕರಂಗಲ್ಲು, ಮುಳಬಾಗಿಲು, ಕಟ್ಟ ಮಾರ್ಗವಾಗಿ ಕೊಲ್ಲಮೊಗ್ರವನ್ನು ನೇರವಾಗಿ ಸಂಪರ್ಕಿಸುವ ಈ ರಸ್ತೆಯಲ್ಲಿ ದಿನನಿತ್ಯ ನೂರಾರು ಮಂದಿ ಓಡಾಡುತ್ತಾರೆ. ಶಾಲಾ ವಾಹನಗಳು, ಸರ್ವೀಸ್ ಜೀಪ್‌ಗ್ಳು, ಖಾಸಗಿ ವಾಹನಗಳು ಸೇರಿದಂತೆ ನೂರಾರು ವಾಹನಗಳು ರಸ್ತೆಯಲ್ಲಿ ಓಡಾಡುತ್ತವೆ.
ನನೆಗುದಿಗೆ
ಕಟ್ಟ, ಮುಳುಬಾಗಿಲು ಗ್ರಾಮದ ಗ್ರಾಮಸ್ಥರು ಕಳೆದ ಮೂರು ವರ್ಷಗಳಿಂದ ಈ ಸೇತುವೆಯನ್ನು ದುರಸ್ತಿಪಡಿಸಲು ಮನವಿ ಸಲ್ಲಿಸುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ದುರಸ್ತಿಪಡಿಸುವ ಭರವಸೆ ನೀಡಿದ್ದರೂ, ಇದುವರೆಗೂ ಕಾಮಗಾರಿ ಆರಂಭಗೊಂಡಿಲ್ಲ. ಸೇತುವೆ ನನೆಗುದಿಗೆ ಬಿದ್ದಿದೆ.
ಸೇತುವೆ ನಿರ್ಮಾಣಗೊಳ್ಳಲಿ
ನೂರಾರು ಜನರ ಸಂಪರ್ಕ ಸೇತುವಾಗಿರುವ ಮೈಲ ಪ್ರದೇಶದಲ್ಲಿ ಸುಸಜ್ಜಿತ ಸೇತುವೆ ನಿರ್ಮಾಣವಾಗಲಿ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆ ದಾಟಲು ಅಸಾಧ್ಯವಾಗಿರುವ ಇಲ್ಲಿ ಸೇತುವೆ ರಚನೆ ಅಗತ್ಯವಾಗಿದೆ.
ವಾಹನ ಸಂಚಾರ ಕಷ್ಟ
ಕುಸಿಯುವ ಭೀತಿಯಲ್ಲಿರುವ ಮೈಲದ ಮೋರಿಯಿಂದ ಮಳೆಗಾಲದಲ್ಲಿ ಸಂಚಾರ ಕಷ್ಟವಾಗಲಿದೆ. ಸಂಪೂರ್ಣ ಶಿಥಿಲಗೊಂಡ ಸೇತುವೆಯಿಂದಾಗಿ ಘನ ವಾಹನಗಳು ಸಂಚರಿಸಲು ಪರದಾಟಪಡುತ್ತಿವೆ. ಸೇತುವೆಯ ಒಂದು ಭಾಗ ಸಂಪೂರ್ಣ ಕುಸಿದಿದೆ.
10 ಲಕ್ಷ ರೂ. ಅಗತ್ಯ
ಗ್ರಾ.ಪಂ. ವತಿಯಿಂದ ಎಂಜಿನಿಯರ್ ಮೂಲಕ ಎಸ್ಟಿಮೇಟ್ ಮಾಡಿಸಲಾಗಿದೆ. 10 ಲಕ್ಷ ರೂ. ಅನುದಾನ ಬೇಕು. ಅದಕ್ಕಾಗಿ ಜಿ.ಪಂ. ಸದಸ್ಯರಿಗೆ, ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಗ್ರಾಮಸಭೆಗಳಲ್ಲೂ ಈ ವಿಚಾರ ಚರ್ಚೆಗೆ ಬಂದಿದೆ.
– ಮಣಿಕಂಠ ಕಟ್ಟ, ಉಪಾಧ್ಯಕ್ಷರು, ಗ್ರಾ.ಪಂ. ಕೊಲ್ಲಮೊಗ್ರು.
ಮನವಿಗೂ ಸ್ಪಂದನೆ ಇಲ್ಲ
ಕಳೆದ ಮೂರು ವರ್ಷಗಳಿಂದ ಮೋರಿ ದುರಸ್ತಿಗೆ ಮನವಿ ಸಲ್ಲಿಸುತ್ತಿದ್ದೇವೆ. ಯಾವೊಂದು ಪ್ರಯೋಜನವೂ ಆಗಿಲ್ಲ. ಆದಷ್ಟು ಬೇಗ ಮೋರಿ ದುರಸ್ತಿಯಾಗಲಿ.
-ಮಿಥುನ್ ಕುಮಾರ್ ಸೋನ, ಸ್ಥಳೀಯರು
– ಕೃಷ್ಣಪ್ರಸಾದ್ ಕೋಲ್ಚಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.