ರಾಜ್ಯಕ್ಕೆ ಟಾಪರ್ ಸೃಜನಾಗೆ ಕಂಪ್ಯೂಟರ್ ಎಂಜಿನಿಯರ್ ಆಗುವಾಸೆ
Team Udayavani, May 12, 2017, 4:26 PM IST
ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸೃಜನಾ ಎನ್. ವಿಜ್ಞಾನ ವಿಷಯದಲ್ಲಿ ರಾಜ್ಯಕ್ಕೆ ಟಾಪರ್ ಆಗಿ ಮೂಡಿಬಂದಿದ್ದಾರೆ.
ಸೃಜನಾ 600 ಅಂಕಗಳಲ್ಲಿ 596 ಅಂಕ ಗಳಿಸಿದ್ದಾರೆ. ಭೌತಶಾಸ್ತ್ರ, ರಸಾಯನ ಧಿಶಾಸ್ತ್ರ, ಗಣಿತ, ಗಣಕ ವಿಜ್ಞಾನದಲ್ಲಿ ಶೇ. 100 ಅಂಕ ಗಳಿಸಿದ್ದಾರೆ. ಹಿಂದಿಯಲ್ಲಿ 99 ಹಾಗೂ ಇಂಗ್ಲಿಷ್ ಭಾಷೆಯಲ್ಲಿ 97 ಅಂಕ ಲಭಿಸಿದೆ. ತುಮಕೂರು ಮೂಲದ ಉದ್ಯಮಿ ನಿರಂಜನ್ ಕುಮಾರ್ ಹಾಗೂ ಬೆಂಗಳೂರಿನ ಯಲಹಂಕದ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ನ ಪ್ರೊಫೆಸರ್ ಡಾ| ನಳಿನಿ ಅವರ ಪುತ್ರಿಯಾಗಿರುವ ಸೃಜನಾ ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ.
ಉತ್ತಮ ಸಾಧನೆಯ ನಿರೀಕ್ಷೆ ಇತ್ತು
ಸಾಧನೆಯ ಸಂತಸವನ್ನು ಉದಯವಾಣಿಯೊಂದಿಗೆ ಹಂಚಿಕೊಂಡಿರುವ ಸೃಜನಾ ಅವರು “ಪರೀಕ್ಷೆಯಲ್ಲಿ ಚೆನ್ನಾಗಿ ನಿರ್ವಹಿಸಿದ ವಿಶ್ವಾಸ ನನ್ನಲ್ಲಿತ್ತು. ಉತ್ತಮ ಫಲಿತಾಂಶ ನಿರೀಕ್ಷಿಸುತ್ತಿದ್ದೆ. ಇದೀಗ ರಾಜ್ಯಕ್ಕೆ ಟಾಪರ್ ಆಗಿರುವುದು ತುಂಬಾ ಖುಷಿ ತಂದಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
“ಅಂದಿನ ಪಾಠಗಳನ್ನು ಅಂದೇ ನೀಟಾಗಿ ಓದುತ್ತಿದ್ದೆ. ಕೊನೆಯ ಕ್ಷಣಕ್ಕೆ ಯಾವುದನ್ನು ಇಡುತ್ತಿರಲಿಲ್ಲ. ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ತರಗತಿಗಳು ಇರುತ್ತಿದ್ದವು. ಅಲ್ಲಿನ ತರಗತಿ ಪಾಠಗಳೇ ವಿಷಯ ಮನನಕ್ಕೆ ಸಾಕಾಗುತ್ತಿತ್ತು. ವಸತಿ ನಿಲಯಕ್ಕೆ ಬಂದು ಗೆಳತಿಯರ ಜತೆ ಸೇರಿ ಅಂದಿನ ಪಾಠಗಳನ್ನು ಪುನರ್‌ಮನನ ಮಾಡುತ್ತಿದ್ದೆ. ಯಾವ ಕಾರಣಕ್ಕೂ ಒತ್ತಡ ತೆಗೆದುಕೊಳ್ಳುತ್ತಿರಲಿಲ್ಲ’ ಎಂದರು.
ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯಲ್ಲಿನ ಉತ್ತಮ ಶಿಕ್ಷಣ, ಶಿಕ್ಷಕ ವರ್ಗದ ಪೋತ್ಸಾಹ, ಉತ್ತಮ ಶೈಕ್ಷಣಿಕ ವಾತಾವರಣ, ತಂದೆ ಮತ್ತು ತಾಯಿಯ ನಿರಂತರ ಮಾರ್ಗದರ್ಶನ, ಪ್ರೇರಣೆ ಮತ್ತು ನನ್ನ ಪರಿಶ್ರಮ ಈ ಸಾಧನೆಯ ಹಿಂದಿದೆ ಎಂದಿದ್ದಾರೆ. ಸೃಜನಾ ಅವರು ಮುಂದೆ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುವ ಬಯಕೆ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.