ತಾನೇ ತೋಡಿದ ಗುಂಡಿಗೆ ತಾನೇ ಬಿದ್ದ  ವ್ಯಕ್ತಿಯೊಬ್ಬನ ಕಥೆ


Team Udayavani, Jul 18, 2017, 3:20 AM IST

cri.gif

ಮಹಾನಗರ: ಕೋಮು ಗಲಭೆಯ ಸಂದರ್ಭಗಳಲ್ಲಿ  ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುವವರೇ ಜಾಸ್ತಿ. ಕೆಲವರಿಗೆ ವೈಯಕ್ತಿಕ/ಹಳೆಯ ದ್ವೇಷ ಸಾಧಿಸಲು ಅಥವಾ ಸ್ವಾರ್ಥ ಸಾಧನೆಗೆ ಉತ್ತಮ ಅವಕಾಶ. ಹಾಗೆಂದು ಕೋಮು ಗಲಭೆ ಸಂದರ್ಭಗಳಲ್ಲಿ ನಡೆದ ಎಲ್ಲಾ ಘಟನೆಗಳೂ ಪರಿಸ್ಥಿತಿಯ ಲಾಭ ಪಡೆಯಲು ನಡೆದ ಘಟನೆಗಳು ಎಂಬ ಅರ್ಥವಲ್ಲ.

ಬಂಟ್ವಾಳ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಗಲಭೆಯ ಪ್ರಯೋಜನ ಪಡೆಯಲು ಹವಣಿಸಿದ ಮಂಗಳೂರು ತಾಲೂಕು ಕುಪ್ಪೆಪದವಿನ ಅಬೂಬಕರ್‌ ಸಿದ್ದಿಕಿ ಪೊಲೀಸ್‌ ತನಿಖೆಯ ವೇಳೆ ನೈಜ ಸಂಗತಿ ಬಹಿರಂಗಗೊಂಡು ತಾನೇ ತೋಡಿದ ಗುಂಡಿಗೆ  ತಾವೇ ಬಿದ್ದಿದ್ದಾರೆ.

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಂಟ್ವಾಳ ತಾಲೂಕು ಸಜಿಪ ನಿವಾಸಿ ಶರತ್‌ ಮಡಿವಾಳ ಅವರ ಶವಯಾತ್ರೆಯ (ಜು.9) ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳ ಬಳಿಕ ಜಿಲ್ಲೆಯಲ್ಲಿ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿತ್ತು. ಈ ಸಮಯದ ಲಾಭ ಪಡೆಯಲು ಹವಣಿಸಿದ ಅಬೂಬಕರ್‌ ಸಿದ್ಧಿಕ್‌ ಜು.10 ರಂದು ಬಜಪೆ ಪೊಲೀಸ್‌ ಠಾಣೆಗೆ ತೆರಳಿ ಪ್ರಕರಣವೊಂದನ್ನು ದಾಖಲಿಸಿದ. ಎಡಪದವಿನಲ್ಲಿ ಅನ್ಯಕೋಮಿನ ಇಬ್ಬರು ಸಂಜೆ 7 ಗಂಟೆಗೆ ಬೈಕಿನಲ್ಲಿ ಬಂದು ತನ್ನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತನ್ನ ಅಣ್ಣನ ಮೂಲಕ ದೂರು ಸಲ್ಲಿಸಿದ್ದ. ಆಗ ಪೊಲೀಸರು ಅತನನ್ನು ಮಂಗಳೂರಿಗೆ ಕರೆದೊಯ್ದು  ಒಂದು ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಒದಗಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಅಬೂಬಕರ್‌ ಸಿದ್ದಿಕಿ ಮೇಲೆ ನಡೆದಿದೆ ಎನ್ನಲಾದ ಹಲ್ಲೆಯ ಬಗ್ಗೆ ಪೊಲೀಸರು ವಿಚಾರಣೆಯನ್ನು ನಡೆಸತೊಡಗಿದರು. ಆಗ ಆತ ಬೇರೆ ಬೇರೆ ಹೇಳಿಕೆಗಳನ್ನು ನೀಡಿದ ಕಾರಣ ಸಂಶಯಗೊಂಡ ಪೊಲೀಸರು ಉನ್ನತ ತನಿಖೆ ಕೈಗೊಂಡರು. ಆಗ ಆತನ ಬಾಯಿಯಿಂದ ನೈಜ ಪ್ರಕರಣ ಬೆಳಕಿಗೆ ಬಂದಿತು. ಘಟನಾ ಸ್ಥಳದ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ ಆತ, ದಾಳಿಕೋರರು ಬೈಕಿನಲ್ಲಿ ಬಂದವರು ಎಂದು ಒಮ್ಮೆ ಹೇಳಿದರೆ, ಇನ್ನೊಮ್ಮೆ ಗುಂಪೊಂದು ಬಂದು ದಾಳಿ ಮಾಡಿತು ಎಂದು ಹೇಳಿದ.

ಕೋಮು ಗಲಭೆ ಸಂತ್ರಸ್ತ
ಕೋಮು ಗಲಭೆ ಸಂತ್ರಸ್ತ ಎಂದು ಲಾಭ ಪಡೆಯಲು ತಾನು ಈ ರೀತಿಯ ನಾಟಕ ಮಾಡಿದ್ದಾಗಿ ಆತ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಆತ ಕೈ, ಮುಖ ಹಾಗೂ ತಲೆಗೆ ಬ್ಲೇಡ್‌ನಿಂದ ಸ್ವತಃಕೊಯ್ದುಕೊಂಡು ಹಲ್ಲೆಗೊಳಗಾಗಿದ್ದೇನೆ ಎಂದು ಬಿಂಬಿಸಿಕೊಂಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಸಾಲ ಮರು ಪಾವತಿ ಮಾಡಿಲ್ಲ 
ಕೆಂಪು ಕಲ್ಲು ಸಾಗಿಸುವ ಲಾರಿಯಲ್ಲಿ  ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌ ಕೆಲಸ ಮಾಡುತ್ತಿರುವ ಆತ, ಸಲಾಂ ಎಂಬಾತನ ಬಳಿಯಿಂದ 36 ಸಾವಿರ ರೂ. ಸಾಲ ಪಡೆದಿದ್ದ. ಅದನ್ನು ಮರು ಪಾವತಿ ಮಾಡಲು ದಾರಿ ಕಾಣದೇ ಈ ರೀತಿ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಅಬೂಬಕರ್‌ ಸಿದ್ದಿಕ್‌ ಹಲ್ಲೆ ಪ್ರಕರಣದ ಬಳಿಕ ಪೊಲೀಸರು ಮತ್ತಷ್ಟು  ಒತ್ತಡಕ್ಕೆ ಸಿಲುಕಿದ್ದರು. ಆಡಳಿತ ಪಕ್ಷ ಮತ್ತು ಹಿರಿಯ ಅಧಿಕಾರಿಗಳು ಪ್ರತಿಪಕ್ಷ ಹಾಗೂ ಸಾರ್ವಜನಿಕರಿಂದ ತೀವ್ರ ಟೀಕೆಗೆ ಒಳಗಾಗಿದ್ದರು.
 
ಪೊಲೀಸ್‌ ತಂಡಕ್ಕೆ ಬಹುಮಾನ
ಡಿಜಿಪಿ ಆರ್‌.ಕೆ.ದತ್ತ ಅವರು ಈ ಪ್ರಕರಣವನ್ನು ಬೇಧಿಸಿದ ಬಜಪೆ ಠಾಣೆ ಇನ್‌ಸ್ಪೆಕ್ಟರ್‌ ಟಿ.ಡಿ ನಾಗರಾಜ್‌ ನೇತೃತ್ವದ ತಂಡಕ್ಕೆ ನಗದು ಬಹುಮಾನ ಘೋಷಿಸುವ ಮೂಲಕ ಅಭಿನಂದಿಸಿದ್ದಾರೆ. ಆದರೆ ಪೊಲೀಸರ ಕೆಲಸ ಇಲ್ಲಿಗೇ ಮುಗಿದಿಲ್ಲ. ಆದರೆ ಅಪರಿಚಿತರು ಹಲ್ಲೆ ನಡೆಸಿದ್ದಲ್ಲ, ತಾನೇ ಸ್ವತಃ ಗಾಯಗಳನ್ನು ಮಾಡಿಕೊಂಡಿದ್ದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ  ಅಬೂಬಕರ್‌ ಸಿದ್ದಿಕಿ ಮೇಲೆ ಕೇಸು ದಾಖಲಾಗ ಬೇಕಿದೆ. 

ನ್ಯಾಯಾಲಯಕ್ಕೆ ಮನವರಿಕೆ
ಆದರೆ ಅದಕ್ಕೆ ಕೆಲವು ಕಾನೂನು ಪ್ರಕ್ರಿಯೆಗಳಿವೆ. ಮೊದಲನೆಯದಾಗಿ ಪೊಲೀಸರು ಈ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸ ಬೇಕಾಗಿದೆ.  ಎರಡನೆಯದಾಗಿ ಪೊಲೀಸರು ಪುನಃ ವಿಚಾರಣೆ ನಡೆಸಿ ಅಬೂಬಕರ್‌ ಸಿದ್ದಿಕಿ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಬಗೆಗಿನ ದೂರು ಸುಳ್ಳು ಎಂಬುದಾಗಿ ಸರದಿ ಸಲ್ಲಿಸಿ ನ್ಯಾಯಾಲಯಕ್ಕೆ ಮನವರಿಕೆ ಮಾಡ ಬೇಕಾಗುತ್ತದೆ. ಅದಾದ ಬಳಿಕ, ಮನವರಿಕೆಯಾದರೆ ನ್ಯಾಯಾಲಯವು ಅಬೂಬಕರ್‌ ಸಿದ್ಧಿಕ್‌ ವಿರುದ್ಧ ಆತ್ಮಹತ್ಯೆಗೆ ಯತ್ನ ಪ್ರಕರಣ ದಾಖಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಆದೇಶಿಸ ಬಹುದು.  

ಹಿಂದೆ ಇಂತಹ ಪ್ರಕರಣ
ಇಂತಹುದೇ ಪ್ರಕರಣ ಈ ಹಿಂದೆ ಪುತ್ತೂರಿನಲ್ಲಿ  2013 ಸಪ್ಟೆಂಬರ್‌ ತಿಂಗಳಲ್ಲಿ ನಡೆದಿತ್ತು. ಆ ಪ್ರಕರಣದಲ್ಲಿ ಯುವತಿಯೊಬ್ಬಳು ತನ್ನನ್ನು ಅಪಹರಿಸಲಾಗಿದೆ ಎಂಬುದಾಗಿ ದೂರು ನೀಡಿದ್ದರು. ಅದರಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿದ್ದರು. ಈ ಪ್ರಕರಣದ ಬಗ್ಗೆ ಪೊಲೀಸರು ಕೂಲಂಕಷ ತನಿಖೆ ನಡೆಸಿದಾಗ ಯುವತಿ ನೀಡಿದ ದೂರು  ಸುಳ್ಳು ಎಂಬುದಾಗಿ ತಿಳಿದು ಬಂದಿತ್ತು. 

ಟಾಪ್ ನ್ಯೂಸ್

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.