ಪೆನ್ನು ಪಿನ್ನು ಕುಪ್ಪಿ ಟೊಪ್ಪಿಯ ಕತೆ !
Team Udayavani, Apr 9, 2018, 1:48 PM IST
ಪ್ರಜಾತಾಂತ್ರಿಕ ವ್ಯವಸ್ಥೆಯ ಚುನಾವಣೆಗಳಲ್ಲಿ ವಿವಿಧ ಪಕ್ಷಗಳ ಅಥವಾ ಪಕ್ಷೇತರ ಅಭ್ಯರ್ಥಿಗಳ ಚುನಾವಣಾ ಚಿನ್ಹೆಗಳಿಗೆ ಸಂಬಂಧಿಸಿ ಪ್ರತ್ಯೇಕವಾದ ಇತಿಹಾಸವೇ ಇದೆ. ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದ 1952ರಿಂದಲೂ ಚುನಾವಣೆ ಚಿನ್ಹೆಗಳ ಬಗ್ಗೆ ಅದು ಸ್ವಾರಸ್ಯಕರ ಮಾಹಿತಿಯೂ ಹೌದು. ನಿರ್ದಿಷ್ಟ ರಾಷ್ಟ್ರೀಯ ಪಕ್ಷಗಳ ಅತ್ಯಂತ ಜನಪ್ರಿಯ ಚಿನ್ಹೆಗಳ ವಿಘಟನೆ ಮುಂತಾದ ಕಾರಣಗಳಿಂದ ಅಮಾನ್ಯಗೊಂಡು ಪ್ರಸಕ್ತ ತಲೆಮಾರಿನ ಯುವಜನತೆಗೆ ಅದರ ಮಾಹಿತಿಯೂ ಅಲಭ್ಯವಾಗಿದೆ.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಈ ನಿಟ್ಟಿನಲ್ಲಿ ಪ್ರಖರವಾದ ದೃಷ್ಟಾಂತ. ಜೋಡೆತ್ತು, ದನಕರು, ಈಗ ಕೈ. ಸಂಸ್ಥ ಕಾಂಗ್ರೆಸ್ ನಲ್ಲಿ ಚರಕದಲ್ಲಿ ನೂಲುವ ಮಹಿಳೆ. ಇನ್ನೊಂದು ಬಣಕ್ಕೆ ನೇಗಿಲು ಹೊತ್ತ ರೈತ; ಮತ್ತೂಂದು ವಿಲೀನ ಬಣಕ್ಕೆ ಚರಕ. ಭಾರತೀಯ ಜನತಾ ಸಂಘಕ್ಕೆ ಮೊದಲಾಗಿ ದೀಪ. ಜನತಾ ಪಕ್ಷದಲ್ಲಿ ಬೆರೆತಾಗ ನೇಗಿಲು ಹೊತ್ತ ರೈತ. ಈಗ ತಾವರೆ. ಕತ್ತಿ ಮತ್ತು ತೆನೆ ಭಾರತೀಯ ಕಮ್ಯುನಿಸ್ಟ್ ಪಕ್ಷದ ಚಿನ್ಹೆ. ಕತ್ತಿ ಸುತ್ತಿಗೆ ನಕ್ಷತ್ರ ಭಾರತೀಯ ಮಾರ್ಕ್ಸ್ ವಾದೀ ಕಮ್ಯೂನಿಸ್ಟ್ ಪಕ್ಷದ ಚಿನ್ಹೆ. ಈಗ ಜಾತ್ಯತೀತ ಪಕ್ಷದ ಚಿನ್ಹೆ ತೆನೆ ಹೊತ್ತ ಮಹಿಳೆ. ಮೂಲ ಚಿನ್ಹೆ ನೇಗಿಲು ಹೊತ್ತ ರೈತ ಮೂಲ ಜನತಾ ಪಕ್ಷದಲ್ಲಿದೆ.
ತೆಲುಗು ದೇಶಂ, ಎಐಡಿಎಂಕೆ, ಸಮಾಜವಾದಿ ಪಾರ್ಟಿ ಮುಂತಾದ ಪಕ್ಷಗಳಲ್ಲಿನ ವಿಭಜನೆಗಳೂ ಮೂಲ ಚಿನ್ಹೆಯನ್ನು ಪ್ರಭಾವಿಸಿವೆ. ಈ ನಡುವೆ ಆಮ್ ಆದ್ಮಿ ಪಾರ್ಟಿಯಂತ ಹೊಸ ಪಕ್ಷಗಳೂ ಅಧಿಕಾರದಲ್ಲಿವೆ. ಪಕ್ಷ ಒಡೆದಾಗ ಮೂಲ ಚಿನ್ಹೆಯಾರಿಗೆ ಸೇರಬೇಕೆಂಬ ಪ್ರಕರಣ ನ್ಯಾಯಾಲಯದ ಕಟಕಟೆ ಏರಿದ ಸಾಕಷ್ಟು ಪ್ರಸಂಗಗಳಿವೆ. ಚಿನ್ಹೆಗಳು ಯಾರಿಗೂ ದೊರೆಯದ ಅಥವಾ ಕನಿಷ್ಠ ಚುನಾವಣೆ ಸಂದರ್ಭಕ್ಕೆ ಸರಿಯಾಗಿ ದೊರೆಯದ ವಿಪರ್ಯಾಸಕಾರೀ ಘಟನೆಗಳೂ ನಡೆದಿವೆ.
14 ರಾಷ್ಟ್ರೀಯ ಪಕ್ಷ
1952ರ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರ ಚುನಾವಣಾ ಆಯೋಗವು 14 ರಾಷ್ಟ್ರೀಯ ಪಕ್ಷಗಳನ್ನು ಮತ್ತು 60 ರಾಜ್ಯ ಪಕ್ಷಗಳನ್ನು ಮಾನ್ಯ ಮಾಡಿತ್ತು. ವಿವಿಧ ರಾಜಕೀಯ ಪಕ್ಷಗಳ ಕೇಳಿಕೆಯ ಆಧಾರದಲ್ಲಿ ಈ ಮಾನ್ಯತೆಯನ್ನು ನೀಡಲಾಗಿತ್ತೇ ಹೊರತು ಯಾವುದೇ ನಿರ್ದಿಷ್ಟ ಮಾನದಂಡಗಳಿರಲಿಲ್ಲ.
ಅಂದ ಹಾಗೆ …
ಭಾರತೀಯ ಚುನಾವಣಾ ಇತಿಹಾಸದ ಕೆಲವು ಚಿನ್ಹೆಗಳು: ಜೋಡೆತ್ತು, ದೀಪ, ಕುಡುಗೋಲು ತೆನೆ, ಕುಡುಗೋಲು ಸುತ್ತಿಗೆ ನಕ್ಷತ್ರ, ದನಕರು, ನೂಲುವ ಮಹಿಳೆ, ನೇಗಿಲು ಹೊತ್ತ ರೈತ, ಹಸ್ತ, ಚರಕ, ಕಮಲ, ಉಳುವ ರೈತ, ತೆನೆ ಹೊತ್ತ ಮಹಿಳೆ, ಬಿಲ್ಲು ಬಾಣ, ಸೈಕಲ್, ಜೋಡಿ ಎಲೆ, ಉದಯ ಸೂರ್ಯ, ಆನೆ, ಲಾಟಾನು, ನಕ್ಷತ್ರ, ಸಿಂಹ, ಮನೆ, ತಕ್ಕಡಿ, ಗುಲಾಬಿ, ಹುಂಜ, ಕೈಗಾಡಿ, ಏಣಿ, ದೋಣಿ, ವೃಷಭ, ರೈಲು, ಒಂಟೆ, ಕುದುರೆ, ಸ್ವಸ್ತಿಕ, ತೆಂಗಿನಮರ, ಮಡಿಕೆ, ಹಾರೆ ಇತ್ಯಾದಿ… (ಪಶು ಪಕ್ಷಿಗಳ ಚಿನ್ಹೆ ಈಗಿಲ್ಲ) ಕೆಲವೆಡೆ ನೂರಿನ್ನೂರು ಸ್ಪರ್ಧಿಗಳಿದ್ದ ಕ್ಷೇತ್ರಗಳಲ್ಲಿ ಮೇಜು, ಕುರ್ಚಿ, ಪೆನ್ನು, ಪಿನ್ನು, ಬ್ಯಾಟು, ಚೆಂಡು, ಕುಪ್ಪಿ, ಟೊಪ್ಪಿ ಇತ್ಯಾದಿ ಚಿನ್ಹೆ ನೀಡುವ ಪರಿಸ್ಥಿತಿ ಉಂಟಾಗಿತ್ತು.
ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.