ಪಠ್ಯಪುಸ್ತಕದ ಭಾರ ತಗ್ಗಿಸಲು ವಿದ್ಯಾರ್ಥಿಯ ಉಪಕ್ರಮ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಿ.ಡಿ. ರವಾನೆ

Team Udayavani, May 18, 2019, 5:50 AM IST

33

ನಗರ: ಚಿಕ್ಕ ಮಕ್ಕಳ ಪುಸ್ತಕದ ಹೊರೆಯನ್ನು ಕಡಿಮೆಗೊಳಿಸಬೇಕೆಂಬ ಒತ್ತಡದ ಆಗ್ರಹ ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಸರಕಾರದ ಕಡೆಯಿಂದಲೂ ಇದಕ್ಕೆ ಒಂದಷ್ಟು ಪೂರಕ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ.

ಈ ಮಧ್ಯೆ ವಿದ್ಯಾರ್ಥಿಯೋರ್ವ ಬ್ಯಾಗ್‌ ಹಾಗೂ ಪುಸ್ತಕಗಳ ಹೊರೆಯನ್ನು ಕಡಿಮೆ ಮಾಡುವ ಉಪಕ್ರಮಗಳನ್ನು ತಾನೇ ಕಂಡುಕೊಂಡು ಅದನ್ನು ಸ್ವತಃ ಕಾರ್ಯರೂಪದ ಅನುಸರಣೆಗೂ ತಂದಿದ್ದಾನೆ. ಜತೆಗೆ ಈತ ಕಂಡುಕೊಂಡ ಉಪಕ್ರಮದ ಕುರಿತ ಸಿ.ಡಿ.ಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೂ ಕಳುಹಿಸಿಕೊಟ್ಟಿದ್ದಾನೆ.

ವಿವೇಕಾನಂದ ಆಂ.ಮಾ. ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭ ವಿದ್ಯಾರ್ಥಿ ಸಮಂತನಿಗೆ ಮನೆ ಉರಿಮಜಲು ಮುದಲೆಗುಂಡಿಯಿಂದ 1 ಕಿ.ಮೀ. ನಡೆದುಕೊಂಡು ಬಂದು ಅನಂತರ ಶಾಲಾ ವಾಹನವನ್ನು ಆಶ್ರಯಿಸಬೇಕಾಗಿತ್ತು. ಪುಸ್ತಕಗಳು ತುಂಬಿದ ಭಾರದ ಬ್ಯಾಗ್‌ ಅನ್ನು ಹೊತ್ತುಕೊಂಡು ಬರುವುದೇ ತ್ರಾಸದಾಯಕವಾಗುತ್ತಿರುವುದನ್ನು ಮನಗಂಡ ಈತ ಅಂದಿನ ಬೋಧನೆಗೆ ಬೇಕಾದ ಪಠ್ಯಗಳನ್ನು ಮಾತ್ರ ಕೊಂಡೊಯ್ಯುವ ಉದ್ದೇಶದಿಂದ ಅಗತ್ಯವಿರುವ ಪಠ್ಯ, ನೋಟ್ಸ್‌ ಅನ್ನು ಹರಿದು ಶಾಲೆಗೆ ಕೊಂಡೊಯ್ಯುವ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಾನೆ. ಇದು ಸರಿಯಾದ ಕ್ರಮವಲ್ಲ ಎಂದು ಅಜ್ಜ ಬಿ.ಜಿ. ನೂಜಿ ಹೇಳುತ್ತಾರೆ ಮತ್ತು ಅಜ್ಜ-ಮೊಮ್ಮಗ ಸೇರಿ ಉಪಕ್ರಮದ ದಾರಿ ಹುಡುಕಿಕೊಳ್ಳುತ್ತಾರೆ.

ಪ್ರಸ್ತುತ ವಿದ್ಯಾರ್ಥಿ ಸಮಂತ ಮುದಲೆ ಗುಂಡಿ ವಿವೇಕಾನಂದ ಆಂ.ಮಾ. ಶಾಲೆಯಲ್ಲಿ 7ನೇ ತರಗತಿ ಮುಗಿಸಿ 8ನೇ ತರಗತಿಗೆ ಅಳಿಕೆ ವಿದ್ಯಾಸಂಸ್ಥೆಗೆ ಸೇರಿಕೊಂಡಿದ್ದಾನೆ. ವಿವೇಕಾನಂದದಲ್ಲಿ ಕಲಿಕೆಯ ಒಂದು ವರ್ಷ ಅವಧಿಯಲ್ಲಿ ಈ ಉಪಕ್ರಮವನ್ನು ಅಳವಡಿಸಿ ಕೊಂಡು ವಿದ್ಯಾಭ್ಯಾಸ ಮಾಡಿದ್ದಾನೆ.

ಮಕ್ಕಳ ಬ್ಯಾಗ್‌ ಹಾಗೂ ಪಠ್ಯದ ಹೊರೆ ಯನ್ನು ಉಳಿಸಬೇಕೆಂಬ ಒತ್ತಡ ವಿದ್ದರೂ ಸರಕಾರದ ಮಟ್ಟದಲ್ಲಿ ಸಮರ್ಪಕ ಪೂರಕ ಕ್ರಮಗಳು ಆಗಿಲ್ಲ. ಇವು ಮಕ್ಕಳ ದೈಹಿಕ ಆರೋಗ್ಯಕ್ಕೂ ತೊಂದರೆಯುಂಟು ಮಾಡುತ್ತವೆ. ಈ ನಿಟ್ಟಿನಲ್ಲಿ ಮೊಮ್ಮಗನ ಒತ್ತಾಸೆಗೆ ಬೆಂಬಲವಾಗಿ ನಿಂತು ಉಪಕ್ರಮ ವನ್ನು ಅಳವಡಿಸಿದ್ದೇವೆ. ಸರಕಾರದ ಕಡೆಯಿಂದಲೂ ಉಪ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರಧಾನಿಯವರಿಗೂ ಉಪಕ್ರಮದ ಸಿಡಿಯನ್ನು ಕಳುಹಿಸಿಕೊಟ್ಟಿದ್ದೇವೆ ಎನ್ನುತ್ತಾರೆ ಅಜ್ಜ ಜಿ.ಬಿ. ನೂಜಿ ಅವರು.

ಅನುಶೋಧನೆ ಹೀಗೆ
•ಶಾಲೆಯಲ್ಲಿ ಸಿದ್ಧಪಡಿಸಿದ ಟೈಮ್‌ ಟೇಬಲ್ (ಪಾಠದ ಕ್ರಮ ಪಟ್ಟಿ) ಅನ್ನು ಗಮನಿಸುವುದು
•ಪಾಠ ಪುಸ್ತಕಗಳನ್ನು ಹೊಲಿಯುವ ಬದಲು ಪಂಚ್ ಮಾಡಿ ಪಟ್ಟಿ ನೂಲು (ಟ್ಯಾಗ್‌) ಹಾಕುವುದು. •ನೋಟ್ ಮತ್ತು ರಫ್‌ ವರ್ಕಿಂಗ್‌ ಪುಸ್ತಕಗಳನ್ನು ಹೊಲಿಯುವ ಬದಲು ಪಂಚ್ ಮಾಡಿ ಟ್ಯಾಗ್‌ ಹಾಕಿಡುವುದು.
•ಮುನ್ನಾ ದಿನ, ಆ ದಿನ, ಮರುದಿನದ ಟೈಮ್‌ ಟೇಬಲ್ನಂತೆ ಪಾಠಗಳನ್ನು ಟ್ಯಾಗ್‌ ಹಾಕಿ ಪೈಲ್ ಮಾಡುವುದು.
•ಮೇಲಿನಂತೆ 3 ದಿನದ ಪರಿಶ್ರಮದ ಹಾಳೆಗಳನ್ನೂ ಟ್ಯಾಗ್‌ ಹಾಕಿ ಫೈಲ್ ಮಾಡುವುದು.
•ಶಾಲೆಗೆ ಒಯ್ಯುವಾಗ ಪಠ್ಯ ಮತ್ತು ಪರಿಶ್ರಮದ ಕ್ರಮ ಸಂಖ್ಯೆ 4 ಮತ್ತು 5ರಲ್ಲಿ ತಿಳಿಸಿದಂತೆ ಅಂದಾಜು 40 ಹಾಳೆಗಳ 2 ಫೈಲ್ಗಳು ಮಾತ್ರ.

ಗುಣಾಂಕ
• ಪುಸ್ತಕಗಳ ಭಾರ ಶೇ. 70 ರಿಂದ 80 (ಶತಾಂಶ) ಇಳಿಕೆ.
• ಹೊಲಿಗೆ ಬುಕ್‌ ಬೈಂಡಿಂಗ್‌ ಬೇಕಾಗಿಲ್ಲ.
• ವಿಧಾನ 1ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೂ ಹೊಂದಿಕೊಳ್ಳುತ್ತದೆ.

ಟಾಪ್ ನ್ಯೂಸ್

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

1

Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್‌

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.