ಟ್ಯಾಂಕರ್ ಚಾಲಕನ ಕಾಲಿಗೆ ಸುತ್ತಿಕೊಂಡ ನಾಗರಹಾವು
Team Udayavani, Aug 19, 2017, 9:54 AM IST
ಉಪ್ಪಿನಂಗಡಿ: ಚಲಿಸುತ್ತಿದ್ದ ಟ್ಯಾಂಕರ್ ಚಾಲಕನ ಕಾಲಿಗೆ ನಾಗರಹಾವೊಂದು ಸುತ್ತಿಕೊಂಡ ಪರಿಣಾಮ ಚಾಲಕ ಕಂಗೆಟ್ಟರೂ ಸಮಯಪ್ರಜ್ಞೆ ಮೆರೆದು ಅಪಘಾತ ತಪ್ಪಿಸಿದ ಘಟನೆ ಉಪ್ಪಿನಂಗಡಿ ಸಮೀಪ ಸಂಭವಿಸಿದೆ.
ಗ್ಯಾಸ್ ಟ್ಯಾಂಕರ್ ಒಂದು ಮಂಗಳೂರಿನಿಂದ ಅಡುಗೆ ಅನಿಲವನ್ನು ತುಂಬಿಸಿಕೊಂಡು ಬೆಂಗಳೂರಿನತ್ತ ಸಂಚರಿಸುತ್ತಿತ್ತು. ಟ್ಯಾಂಕರ್ ರಾ. ಹೆ. 75ರಲ್ಲಿ ಉಪ್ಪಿನಂಗಡಿಯ ಕೂಟೇಲು ಸೇತುವೆ ದಾಟಿ ಮುಂದು ವರಿಯುತ್ತಿದ್ದಂತೆಯೇ ಟ್ಯಾಂಕರ್ ಚಾಲಕ ಪಳನಿವೇಲು ಅವರ ಕಾಲಿಗೆ ನಾಗರಹಾವು ಸುತ್ತಿಕೊಂಡಿತು. ಭೀತಿ ಗೊಂಡು ಅವರು, ಸ್ಟೇರಿಂಗ್ ಕೈ ಬಿಟ್ಟು ಕಾಲನ್ನು ಕೊಡವಿ ಚಾಲಕನ ಸೀಟಿನ ಮೇಲೇರಿ ಕುಳಿತರು. ಟ್ಯಾಂಕರ್ ಚಾಲಕನ ನಿಯಂತ್ರಣವಿಲ್ಲದೆ ಸಂಚರಿಸಿದ ಟ್ಯಾಂಕರ್ ಎದುರಿನಿಂದ ಬರುತ್ತಿದ್ದ ವಾಹನವೊಂದಕ್ಕೆ ಢಿಕ್ಕಿ ಹೊಡೆಯ ಬೇಕೆನ್ನುವಷ್ಟರಲ್ಲಿ ಪಳನಿವೇಲು ಸಮಯಪ್ರಜ್ಞೆ ಮೆರೆದು ಹ್ಯಾಂಡ್ ಬ್ರೇಕ್ ಮೂಲಕ ಟ್ಯಾಂಕರನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.
ಹೆದ್ದಾರಿಯ ನಡುವಿನಲ್ಲೇ ಟ್ಯಾಂಕರ್ ನಿಂತಿದ್ದರಿಂದ 1 ಗಂಟೆ ಸಂಚಾರಕ್ಕೂ ತಡೆಯುಂಟಾಗಿತ್ತು. ಟ್ಯಾಂಕರ್‌ನಲ್ಲಿದ್ದ ಕ್ಲೀನರ್ ದೊರೈಸ್ವಾಮಿ ಮತ್ತು ಚಾಲಕ ಪಳನಿವೇಲು ಟ್ಯಾಂಕರ್‌ನಿಂದ ಜಿಗಿದು ಜೀವ ರಕ್ಷಿಸಿ ಕೊಂಡರಾದರೂ ಲಾರಿಯಲ್ಲಿದ್ದ ಹಾವು ಲಾರಿಯೊಳಗೆ ಅಡಗಿಕೊಂಡ ಕಾರಣ ಲಾರಿಯನ್ನು ಹಿಂದಕ್ಕಾಗಲಿ ಮುಂದಕ್ಕಾಗಲಿ ಕೊಂಡೊಯ್ಯುವುದು ಹೇಗೆ ಎಂಬ ಪ್ರಶ್ನೆ ಕಾಡ ತೊಡಗಿತ್ತು. ಕೂಡಲೇ ಸ್ಥಳೀಯ ನಿವಾಸಿ ಝಕಾರಿಯಾ ಯಾನೆ ಸ್ನೇಕ್ ಝಕಾರಿಯಾ ಅವರನ್ನು ಕರೆಸಲಾಯಿತು. ಟ್ಯಾಂಕರಿನ ಬ್ಯಾಟರಿ ಬಾಕ್ಸ್ ನಲ್ಲಿ ಆಸರೆ ಪಡೆದಿದ್ದ ನಾಗರ ಹಾವನ್ನು ಅವರು ಸೆರೆ ಹಿಡಿದು ಒಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.