ಮಳೆ ಬಂದರೆ ಮನೆಗಳಿಗೆ‌ ಕಾದಿದೆ ಅಪಾಯ


Team Udayavani, Jun 3, 2018, 12:39 PM IST

3-june-9.jpg

ಬಜಪೆ: ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೊಳಂಬೆ ಗ್ರಾಮದ ವಿಟ್ಲಬೆಟ್ಟುನಲ್ಲಿ ಮಳೆ ಬಂದರೆ ಮೂರು ಮನೆಗಳಿಗೆ ಅಪಾಯವಾಗುವ ಸಾಧ್ಯತೆ ಇದೆ.

 ಮೇ 29ರಂದು ಬಿದ್ದ ಮಳೆಯಿಂದಾಗಿ ಮಂಗಳೂರು ವಿಮಾನ ನಿಲ್ದಾಣದ ರನ್‌ ವೇಯ ನೀರು ಒಂದೆಡೆ ಧುಮುಕಿ ಹರಿದ ಕಾರಣ ಮಣ್ಣು ಕೊರೆದು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಅಪಾರ ಹಾನಿ ಉಂಟಾಗಿದೆ. ಈ ಹಾನಿಯಿಂದ ಈ ಪ್ರದೇಶದ ಮನೆಗಳು ಇನ್ನೂ ಕೂಡ ಯಥಾಸ್ಥಿತಿಗೆ ಮರಳಲು ಸಾಧ್ಯವಾಗಿಲ್ಲ. ಈಗ ಮಳೆ ಬಂದರೆ ಮಳೆಯ ನೀರು ಈ ಮನೆಗಳಿಗೆ ಹರಿದು ಕೊಚ್ಚಿ ಹೋಗುವ ಸಾಧ್ಯತೆ ಇದೆ. ಇದರಿಂದ ಮನೆಯವರು ಈಗ ನಿದ್ದೆ ಗೆಟ್ಟು ದಿನರಾತ್ರಿ ಕಳೆಯುವ ಪರಿಸ್ಥಿತಿ ಇದೆ.

ವಿಮಾನ ನಿಲ್ದಾಣ ರನ್‌ ವೇಯ ಕೆಳಗೆ ತಗ್ಗು ಪ್ರದೇಶದಲ್ಲಿ ಕೊಳಂಬೆ ವಿಟ್ಲಬೆಟ್ಟು ಪ್ರದೇಶವಿದೆ. ರನ್ನವೇ ಕೆಳಗಿನ ಪ್ರದೇಶದಲ್ಲಿ ಬಜಪೆ ಉಣಿಲೆ- ಅದ್ಯಪಾಡಿ ರಸ್ತೆ ಹಾದು ಹೋಗುತ್ತಿದೆ. ಈ ಪ್ರದೇಶದಲ್ಲಿ ಸುಮಾರು 20 ಮನೆಗಳಿವೆ. ಎರಡು ವರ್ಷಗಳಿಂದ ಈ ರನ್‌ವೇ ನೀರು ಒಂದೆಡೆ ಹರಿಯುತ್ತಿದ್ದು , ಇದರ ರಭಸಕ್ಕೆ ಈ ರಸ್ತೆಯ ಚರಂಡಿಯಲ್ಲಿ ದೊಡ್ಡ ದೊಡ್ಡ ಕಂದಕಗಳು ಬಿದ್ದಿವೆ. ಕಳೆದ ವರ್ಷ ನೀರಿನ ರಭಸಕ್ಕೆ ರಸ್ತೆಯ ಡಾಮರೇ ಕಳಚಿಹೋಗಿತ್ತು. ಮೇ 29ರಂದು ಸುರಿದ ಮಳೆಗೆ ಚರಂಡಿ ತುಂಬಿ ಮೋರಿಯ ಇಬ್ಬದಿಯ ಮಣ್ಣು ಕೊರೆದು ತಗ್ಗು ಪ್ರದೇಶಕ್ಕೆ ನೀರು ಧುಮುಕಿತ್ತು. ಈ ನೀರಿನೊಂದಿಗೆ ದೊಡ್ಡ ದೊಡ್ಡ ಕಲ್ಲುಗಳು ಕೂಡ ಹೊರಲಾಡಿ ಕೆಳಗೆ ಇರುವ ಮನೆ, ಬಯಲು ಪ್ರದೇಶಗಳಲ್ಲಿ ತುಂಬಿಕೊಂಡಿದೆ. ರನ್‌ ವೇ ಯ ನೀರು ಈ ಹಿಂದೆ ಮಡಿ ಎಂಬಲ್ಲಿ ತೋಡಿನಲ್ಲಿ ಹರಿಯುತ್ತಿತ್ತು. 

ಇನ್ನೊಂದೆಡೆ ನೀರ್ಪರಿ  ಎಂಬಲ್ಲಿಂದ ತೋಡಿನಲ್ಲಿ ನೀರು ಹರಿಯುತ್ತಿತ್ತು. ಇದರಿಂದ ಯಾವುದೇ ಸಮಸ್ಯೆ ಇರಲಿಲ್ಲವಾಗಿತ್ತು. ಕಳೆದ ಬಾರಿಯಿಂದ ಈ ನೀರು ಒಂದೆಡೆಯಿಂದ ಕೆಳಕ್ಕೆ ಧುಮುಕುವ ಕಾರಣ ಈ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಮೂರು ಮನೆ ಅಪಾಯದಲ್ಲಿ
ವಿಟ್ಲಬೆಟ್ಟು ನಿವಾಸಿ ಶಿವರಾಮ್‌ ಕುಲಾಲ್‌, ವಾಸು ಮೂಲ್ಯ ಹಾಗೂ ದೇವಪ್ಪ ಮೂಲ್ಯ ಎಂಬವರ ಮನೆಗಳು ಈಗ ಅಪಾಯದಲ್ಲಿದೆ. ಈಗಾಗಲೇ ಈ ಮನೆಗಳು ಹಾನಿಗೀಡಾಗಿದೆ. ಈಗ ಮಳೆ ಬಂದರೆ ವಿಮಾನ ನಿಲ್ದಾಣದನೀರು ಕೆಳಕ್ಕೆ ಧುಮುಕಿ ಹರಿದು ಕೆಳಗಡೆ ಇರುವ ಅವರ ಮನೆಗಳಿಗೆ ಹರಿಯುವ ಸಾಧ್ಯತೆಗಳಿವೆ. ಮೊನ್ನೆಯ ಮಳೆನೀರು ಹೋಗಿ ಈ ಪ್ರದೇಶದಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿವೆ. ಇದನ್ನು ದುರಸ್ತಿಗೊಳಿಸಿದಿದ್ದರೆ ಈ ಪ್ರದೇಶದಲ್ಲಿ
ಮಳೆನೀರು ಹರಿದು ಮುಂದೆ ಇರುವ ಈ ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.

ಜೀವ ಉಳಿದದ್ದೆ ದೊಡ್ಡದು
ಪಕ್ಕದ ತೋಡಿನಲ್ಲಿ ಮಳೆಗಾಲದಲ್ಲಿ ನೀರು ಹರಿಯುತ್ತದೆ. ಆದರೆ ಹೀಗೆ ಮಳೆಯ ನೀರು ಹರಿದದ್ದು ನಾನೆಂದು ಕಂಡಿಲ್ಲ. ದೊಡ್ಡದೊಡ್ಡ ಕಲ್ಲುಗಳು ಉರುಳಿ ಮನೆಯ ಅಂಗಳಕ್ಕೆ ಬಂತು. ನೀರು ಹೊಳೆಯಾಗಿ ಹರಿಯಿತು. ಗೋಡೆಗಳಲ್ಲಿ ಬಿರುಕು ಬಿದ್ದಿವೆ. ಯಾವಾಗ ಬೀಳುತ್ತದೋ ಎಂಬ ಹೆದರಿಕೆ ಇದೆ. ನಿದ್ದೆಯೇ ಬರುವುದಿಲ್ಲ. ಮಳೆ ಬಂದರೆ ಇನ್ನೂ ಅಪಾಯ, ಮನೆಯ ಅಡಿಪಾಯಕ್ಕೆ ಹಾನಿಯಾಗಿದೆ. ಮರ ಬಿದ್ದು ಮನೆ ಛಾವಣಿಗೆ ಹಾನಿಯಾಗಿದೆ. ಮಳೆ ಬೆಳ ಗ್ಗೆ ಬಂದದ್ದು ದೊಡ್ಡ ಪುಣ್ಯ, ನಮ್ಮ ಜೀವ ಉಳಿದದ್ದೇ ದೊಡ್ಡದು ಎಂದು 75 ಹರೆಯದ ಜಾನಕಿ ಹೇಳಿದ್ದಾರೆ.

ಈಗ ಬಾವಿಯ ನೀರು ಕುಡಿಯುವಂತಿಲ್ಲ. ಮಳೆಯ ನೀರು, ಮಣ್ಣು, ಕಲ್ಲುಗಳು ಬಿದ್ದು ಬಾವಿ ತುಂಬಿದೆ. ಇದರಿಂದ 300 ಮೀಟರ್‌ ದೂರದಿಂದ ಕುಡಿಯಲು ನೀರು ತರಬೇಕಾಗಿದೆ. ಪೇಟೆ ಹೋಗಲು ಸುತ್ತ ದಾರಿ ಬಳಸಿ ಹೋಗಬೇಕಾಗಿದೆ. ದೇವರೇ ನಮ್ಮನ್ನು ಕಾಪಾಡಿದರು ಎಂದು ಶಿವರಾಮ ಕುಲಾಲ್‌ ಅವರ ಪತ್ನಿ ಪಾರ್ವತಿ ತಿಳಿಸಿದ್ದಾರೆ.

ಈ ಪ್ರದೇಶದ ಮನೆಗಳಿಗೆ ಇನ್ನೂ ಅಪಾಯ ತಪ್ಪಿಲ್ಲ. ಲೋಕೋಪಯೋಗಿ ಇಲಾಖೆ ರಸ್ತೆಯ ಚರಂಡಿಯ ಮಣ್ಣು ಜೇಸಿಬಿಯ ಮೂಲಕ ತೆಗೆದು ಇನ್ನೂ ಅಳಮಾಡುತ್ತಿದೆ. ಮೋರಿಯ ಬದಿಯಲ್ಲಿ ಬಿದ್ದ ದೊಡ್ಡ ಹೊಂಡಗಳನ್ನು ತುಂಬುತ್ತಿದೆ. ಆದರೆ ಅದರ ಜತೆಗೆ ವಿಟ್ಲಬೆಟ್ಟು ಮನೆಗಳಿಗೆ ಹೋಗುವ ರಸ್ತೆ ಹಾಗೂ ಮೋರಿಯಲ್ಲಿ ಹರಿಯುವ ನೀರಿಗೆ ಏನೂ ಪರಿಹಾರ ಕಂಡುಕೊಳ್ಳುತ್ತದೆ ಎಂಬುವುದು ಮುಖ್ಯ

ರಸ್ತೆ ತೋಡಾಯಿತು
ವಿಟ್ಲಬೆಟ್ಟು ನಲ್ಲಿರುವ ಈ ಪ್ರದೇಶದ ಮನೆಗಳಿಗೆ ಹೋಗಲು ರಸ್ತೆ ಇತ್ತು. ಇದು ಬಜಪೆ, ಉಣಿಲೆ, ಆದ್ಯಪಾಡಿಗೆ ಕೂಡ ರಸ್ತೆಯಾಗಿತ್ತು. ಮೊನ್ನೆಯ ಮಳೆಯ ನೀರಿನ ರಭಸಕ್ಕೆ ತೋಡಿನಲ್ಲಿ ಹರಿಯುವ ನೀರು ಈ ರಸ್ತೆಯ ಮಣ್ಣುನ್ನು ಕೊರೆದು ಕೆಳಗಡೆ ಇರುವ ಈ ಮನೆಗಳ ಸಮೀಪವಾಗಿ ಬಯಲು ಪ್ರದೇಶಕ್ಕೆ ಹೋಗಿತ್ತು. ಇದರಿಂದ ಈ ಪ್ರದೇಶಕ್ಕೆ ಈಗ ಸಂಪರ್ಕ ರಸ್ತೆ ಇಲ್ಲವಾಗಿದೆ. ನಿತ್ಯ ನೀರು ಹರಿಯುವ ತೋಡಿನಲ್ಲಿ ನೀರು ಹರಿಯುದಿಲ್ಲ. ರಸ್ತೆ ಇದ್ದಲ್ಲಿ ಹೊಂಡಗಳು ಬಿದ್ದಿವೆ.

ರಸ್ತೆ ಇಲ್ಲದೇ ಕಂಗೆಟ್ಟ ಕುಟುಂಬ
ಶಿವರಾಮ ಕುಲಾಲ್‌ ಮತ್ತು ಪಾರ್ವತಿ ದಂಪತಿ ಮಗಳಿಗೆ ಜೂ. 25ರಂದು ಮದುವೆ ಸಮಾರಂಭವಿದೆ. ಅ ಮನೆಗೆ ಬರಲು ಹೋಗಲು ರಸ್ತೆಯೇ ಇಲ್ಲವಾಗಿದೆ. ಕುಟುಂಬ ಈಗ ಕಂಗೆಟ್ಟಿದೆ. ಸಮಾರಂಭಕ್ಕೆ ಬರುವವರು, ಹೋಗುವವರು ಹೇಗೆ ಕೆರೆತರುವುದು ಎಂಬ ಚಿಂತೆಯಲ್ಲಿದ್ದಾರೆ. ಬೇರೆಡೆಯಿಂದ
ಬಂದ ಅತಿಥಿಗಳಿಗೆ ಈ ಮನೆಗೆ ಬರಲು ದಾರಿಯೇ ಕಾಣದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಪ್ರದೇಶ ಇತರರು ಇದ್ದಾರೆ.

ಟಾಪ್ ನ್ಯೂಸ್

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

CID

CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.