ಪೇಟೆ ಬೀದಿಗಳಲ್ಲಿ ಕುಣಿಯುವ ಹುಲಿಗಳ ಅಬ್ಬರ!
Team Udayavani, Sep 23, 2017, 5:53 PM IST
ಆಲಂಕಾರು : ತಾಸೆದ ಪೆಟ್ಟಿಗೆ ಢೋಲಿನ ಸಾಥ್‌ನೊಂದಿಗೆ ನಾಡಿನ ಹುಲಿಗಳು ಪೇಟೆಗೆ ಧಾವಿಸುತ್ತಿವೆ.ಹುಲಿ, ಕರಡಿ, ಸಿಂಹ ಸಹಿತ ಹಲವು ವೇಷಗಳು ನವರಾತ್ರಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಲಿವೆ. ಈ ಮೂಲಕ ಪರಂಪರೆಯನ್ನು ಜೀವಂತವಾಗಿ ಇರಿಸಿಕೊಳ್ಳುವ ಪ್ರಯತ್ನವೂ ನಡೆದಿದೆ.
ವಿನಾಶದ ಅಂಚಿನಲ್ಲಿರುವ ಕಾಡು ಪ್ರಾಣಿಗಳ ವೇಷವನ್ನು ಧರಿಸಿ ಜನರಲ್ಲಿ ಜಾಗೃತಿ ಮೂಡಿಸುವುದಲ್ಲದೆ, ಯಕ್ಷಗಾನ, ಯಮ, ನಾರದ, ಋಷಿ, ನಪ್ಪು ಬಾಲೆ ಮುಂತಾದ ವೇಷಗಳನ್ನೂ ಧರಿಸಿ ಒತ್ತಡದಲ್ಲಿರುವವರಿಗೆ ಒಂದಿಷ್ಟು ಖುಷಿ ನೀಡುವುದು ಈ ಕಲಾವಿದರ ಉದ್ದೇಶ.
ಗ್ರಾಮೀಣ ಕಲಾವಿದರು
ಗ್ರಾಮೀಣ ಪ್ರತಿಭೆಗಳಿಗೆ ಇದೊಂದು ಸೂಕ್ತ ವೇದಿಕೆಯಾಗಿ ಮಾರ್ಪಟ್ಟಿದೆ. ಕೆಲವರು ಇದನ್ನು ಧಾರ್ಮಿಕ ಕಟ್ಟು ಪಾಡಿನ ಆಚರಣೆಯಾಗಿ ಬಳಸಿದರೆ, ಮತ್ತೆ ಕೆಲವರು ಹರಕೆಯ ರೂಪದಲ್ಲಿ ತಮ್ಮ ಸೇವೆ ಮಾಡುತ್ತಾರೆ.
ವಿವಿಧ ವೇಷಗಳು
ಹುಲಿ, ಕರಡಿ, ಸಿಂಹ ಪ್ರಮುಖ ಗುಂಪು ವೇಷಗಳಾದರೆ, ಬೇಟೆಗಾರ, ಪೈಂಟರ್, ಬೇಲಿ ಹಾಕುವವರು, ಗಾರೆ ಕೆಲಸಗಾರರಾಗಿ, ನಪ್ಪುಬಾಲೆ, ಯಕ್ಷಗಾನ, ಯಮ, ನಾರದ, ಋಷಿ- ಹೀಗೆ ಹತ್ತು ಹಲವು ಒಂಟಿ ವೇಷ ಧರಿಸಿ ದುರ್ಗೆಯ ಆರಾಧನೆ ಮಾಡುವ ವಾಡಿಕೆಯಿದೆ.
ಹೆಚ್ಚಿನ ತಂಡಗಳು ಈಗಿಲ್ಲ
ಹಲವು ವರ್ಷದ ಹಿಂದೆ ನವರಾತ್ರಿ ವೇಷಗಳಿಗೆ ವಿಶೇಷವಾದ ಗೌರವವಿತ್ತು. ಆದರೆ ಇಂದು ಮಹತ್ವ ಕಡಿಮೆಯಾಗಿದೆ. ಟಿ.ವಿ, ಮೊಬೈಲ್‌ಗಳ ಪ್ರಭಾವದಿಂದಾಗಿ ಜನರೂ ಒಲವು ಕಳೆದುಕೊಂಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ವೇಷಧಾರಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಇಂದು ವೇಷಧಾರಿಗಳು ದಿನಕ್ಕೆ 2000 ರೂ.ಗಳಿಗೂ ಹೆಚ್ಚು ಸಂಬಳದ ಬೇಡಿಕೆ ಯಿಡುತ್ತಿದ್ದಾರೆ.
ಒಂದು ಹುಲಿ ಅಥವಾ ಕರಡಿ ವೇಷದ ತಂಡದಲ್ಲಿ 7ಮಂದಿ ಅಗತ್ಯವಿದ್ದು, ದಿನಕ್ಕೆ 14 ಸಾವಿರ ರೂ. ಸಂಬಳ ಭರಿಸಬೇಕು. ಊಟ-ತಿಂಡಿ ಖರ್ಚು, ಪ್ರಯಾಣ ವೆಚ್ಚ ಸೇರಿಸಿದರೆ 20 ಸಾವಿರ ರೂ.ಗಳಿಗೂ ಅಧಿಕ ಖರ್ಚು ಇದೆ. ಇಷ್ಟು ಖರ್ಚು ಭರಿಸುವ ಸಾಮರ್ಥ್ಯವಿಲ್ಲದೆ ಹಾಗೂ ದೇಣಿಗೆಯೂ ಸಂಗ್ರಹವಾಗದೆ ತಂಡಗಳು ಕಡಿಮೆಯಾಗುತ್ತಿವೆ ಎಂಬ ಅಭಿಪ್ರಾಯವಿದೆ.
ಹರಕೆ ಸಂದಾಯ
ತಮ್ಮ ಕೃಷಿಗೆ ಕಾಡು ಪ್ರಾಣಿಗಳ ವಿಪರೀತ ಉಪಟಳ, ಆರೋಗ್ಯ ಸಹಿತ ಹಲವು ದೈನಂದಿನ ಹಾಗೂ ವ್ಯಾವಹಾರಿಕ ಸಮಸ್ಯೆಗಳ ಪರಿಹಾರಕ್ಕೆ ಜನರು ದೇವರ ಮೊರೆ ಹೋಗುತ್ತಾರೆ. ನವರಾತ್ರಿಯ ಸಮಯದಲ್ಲಿ ವಿಶೇಷ ವೇಷ ಧರಿಸಿ ತಮ್ಮ ಸಮಸ್ಯೆ ಬಗೆಹರಿಸಿದ ದುರ್ಗೆಗೆ ಹರಕೆ ಸಂದಾಯ ಮಾಡುತ್ತಾರೆ. ವೇಷಧಾರಿಗಳು ಮೊದಲ ದಿವಸ ಬಣ್ಣ ಬಳಿದ ಬಳಿಕ ಕೊನೆಯ ದಿನ ದೇವಸ್ಥಾನದಲ್ಲಿ ಸೇವೆ ನಡೆಸಿಯೇ ಬಣ್ಣ ತೆಗೆಯುತ್ತಾರೆ. ರಾತ್ರಿ ತೆಂಗಿನ ಗರಿಯ ಚಾಪೆ ಮೇಲೆ ಮಲಗಿ, ಮಾಂಸಾಹಾರ-ಮದ್ಯಪಾನವನ್ನೂ ತ್ಯಜಿಸಿ ವ್ರತಾಚರಣೆ ಮಾಡುತ್ತಾರೆ.
ಸದಾನಂದ ಆಲಂಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.