ಕದ್ರಿ ಪಾರ್ಕ್‌ನಲ್ಲಿ ಓಡಲು ಸಿದ್ಧವಾಗಿದೆ ಪುಟಾಣಿ ರೈಲು
Team Udayavani, Jun 21, 2019, 6:10 AM IST
ಮಹಾನಗರ: ಕೆಲವು ತಿಂಗಳುಗಳಿಂದ ಕದ್ರಿ ಪಾರ್ಕ್‌ನ ‘ಬಾಲ ಮಂಗಳ ಎಕ್ಸ್‌ಪ್ರೆಸ್’ ಪುಟಾಣಿ ರೈಲು ತಾಂತ್ರಿಕ ಕಾರಣಗಳಿಗೆ ತನ್ನ ಸಂಚಾರವನ್ನು ರದ್ದುಗೊಳಿಸಿದ್ದು, ಇದೀಗ ಮತ್ತೂಮ್ಮೆ ತನ್ನ ಓಡಾಟ ಆರಂಭಿಸಲು ಸಿದ್ಧವಾಗಿದೆ.
ರೈಲಿನ ವಾಲ್ ಜತೆಗೆ ಹೈಡ್ರೋಲಿಂಕ್ ಎಂಜಿನ್‌ನಲ್ಲಿ ತೊಂದರೆಯಿಂದಾಗಿ ಇದರ ಬಿಡಿಭಾಗಗಳು ಬೆಂಗಳೂರಿನಿಂದ ಬರಬೇಕಿತ್ತು. ಇದೇ ಕಾರಣಕ್ಕೆ ಮಕ್ಕಳ ಮನೋರಂಜನೆಗೆ ಲಭ್ಯವಾಗಬೇಕಾಗಿದ್ದ ಈ ರೈಲು ಅನ್ನು ಕೆಲವು ತಿಂಗಳಿನಿಂದ ಕೋಣೆಯೊಳಗೆ ಇರಿಸಿ ಬೀಗ ಹಾಕಲಾಗಿತ್ತು.
ಇದೀಗ ತಾಂತ್ರಿಕ ಪರಿಣತರು ಬಂದು ರೈಲು ದುರಸ್ತಿಗೊಳಿಸಿದ್ದು, ಬುಧವಾರ ಸಂಜೆ ಪ್ರಾಯೋಗಿಕವಾಗಿ ಓಡಾಟ ನಡೆಸಲಾಯಿತು. ಆದರೆ, ಬಳಿಕ ಕೆಲವು ಸಣ್ಣ ಪುಟ್ಟ ತೊಂದರೆಗಳಿದ್ದ ಕಾರಣ ತಂತ್ರಜ್ಞರು ಗುರುವಾರ ಬೆಳಗ್ಗಿನಿಂದಲೇ ದುರಸ್ತಿ ಕಾರ್ಯದಲ್ಲಿ ತೊಡಗಿದ್ದು, ಸಂಜೆ ವೇಳೆಗೆ ಸರಿಯಾಗಿ ಓಡಾಟಕ್ಕೆ ಸಿದ್ಧವಾಗಿದೆ.
ವಾರಪೂರ್ತಿ ಸೇವೆ
ಸೋಮವಾರದಿಂದ ಶನಿವಾರದವರೆಗ ಸಂಜೆ 4 ಗಂಟೆಯಿಂದ 7 ಗಂಟೆಯವರೆಗೆ ಮತ್ತು ರವಿವಾರ ಪೂರ್ತಿದಿನ ರೈಲು ಓಡಲಿದೆ. ಮಕ್ಕಳಿಗೆ 10 ರೂ. ಮತ್ತು ವಯಸ್ಕರಿಗೆ 20 ರೂ.ದರ ನಿಗದಿ ಪಡಿಸಲಾಗಿದೆ.
ಈಗ 1.2 ಕಿ.ಮೀ. ಟ್ರ್ಯಾಕ್ ನಿರ್ಮಾಣಗೊಂಡಿದ್ದು, ಎರಡು ಅಡಿ ಅಗಲವನ್ನು ಹೊಂದಿದೆ. ಸುಮಾರು 75 ಮಂದಿ ಮಕ್ಕಳನ್ನು ಹೊತ್ತೂಯ್ಯುವ ಸಾಮರ್ಥ್ಯವನ್ನು ಈ ಪುಟಾಣಿ ರೈಲನ್ನು ಸುಮಾರು 1.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳಿಸಲಾಗಿದೆ. ಈ ರೈಲಿನಲ್ಲಿ ಮೂರು ಬೋಗಿಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.