ಕ‌ಸದ ಗುಂಡಿಯೇ ನಿಶಾಂತನಿಗೆ ಮುಳುವಾಯಿತು!


Team Udayavani, Jul 19, 2017, 2:50 AM IST

muluvayitu.jpg

ಹಳೆಯಂಗಡಿ: ಪಡುಪಣಂಬೂರು ಗ್ರಾಮ ಪಂಚಾಯ ತ್‌ನ ಬೆಳ್ಳಾಯರು ಗ್ರಾಮದ ಕೆರೆಕಾಡಿನ ಕೊರಗರ ಕಾಲನಿಯಲ್ಲಿ ಜು. 15ರಂದು ಬಾಲಕ ನಿಶಾಂತ್‌ ಬಿದ್ದು ಸಾವನ್ನಪ್ಪಿದ ಕೆರೆಯನ್ನು ಮುಚ್ಚುವಂತೆ ಆಗ್ರಹ ಕೇಳಿಬಂದಿದೆ. ಇದು ಕೆರೆಯಂತಿದ್ದರೂ, ಈ ಮೊದಲು ಕಸದ ಗುಂಡಿಯಾಗಿತ್ತು. ಮಳೆಗಾಲದಲ್ಲಿ ನೀರು ತುಂಬಿಕೊಂಡ ಪರಿಣಾಮ ಕೆರೆಯಾಗಿ ಪರಿವರ್ತನೆಯಾಯಿತು. ಇದನ್ನು ಅರಿಯದ ನಿಶಾಂತ್‌ ಬಿದ್ದು ಜೀವ ಕಳೆದುಕೊಂಡ. ಈ ದುರಂತದಿಂದ ಬಹಳ ನೊಂದಿರುವ ಸ್ಥಳೀಯರು, ಕೆರೆಯನ್ನು ಸಂಪೂರ್ಣವಾಗಿ ಮುಚ್ಚಬೇಕು ಎಂದು ಗ್ರಾ.ಪಂ.ಗೆ ಮನವಿ ಮಾಡಿದ್ದಾರೆ. ಇದರಿಂದ ಇನ್ನಷ್ಟು ಇಂಥ ಅನಾಹುತ ತಡೆಯಬಹುದೆಂಬ ಕಾಳಜಿ ಮತ್ತು ಮುಂಜಾಗ್ರತೆ ಸ್ಥಳೀಯರದ್ದು.

ಕೆರೆ ಯಾರದ್ದು ?
ಈ ಕೆರೆಯ ಪ್ರದೇಶವು ದಿ| ಮರ್ದ ಎಂಬವರಿಗೆ ಸೇರಿದೆ. ಸುಮಾರು 32 ಸೆಂಟ್ಸ್‌ ಜಮೀನು ಇದ್ದು, ಅದನ್ನು ಅವರ ಇಬ್ಬರು ಹೆಣ್ಣು ಮಕ್ಕಳಿಗೆ ಪರಭಾರೆ ಮಾಡಲಾಗಿದೆ. ಈ ಜಮೀನಿನಲ್ಲಿದ್ದ ಸಣ್ಣ ಗುಂಡಿಗೆ ಅಕ್ಕಪಕ್ಕದ ಕಸ ಕಡ್ಡಿಗಳನ್ನು ತಂದು ಹಾಕಲಾಗುತ್ತಿತ್ತು. ಗೊಬ್ಬರ ಗಿಡದ ಗೆಲ್ಲುಗಳು, ಪಕ್ಕದ ಜಮೀನೊಂದನ್ನು ಸಮತಟ್ಟುಮಾಡುವಾಗ ಸಿಕ್ಕ ಮರಗಳ ಬೇರು- ಕಾಂಡಗೆಳಲ್ಲವನ್ನೂ ಈ ಹೊಂಡಕ್ಕೆ ತುಂಬಿಸಲಾಗಿತ್ತು. 

ಮಳೆಗಾಲದಲ್ಲಿ ಅದಕ್ಕೆ ನೀರು ತುಂಬಿಕೊಂಡದ್ದು ಮತ್ತು ರಸ್ತೆಯ ಅಂಚಿನಲ್ಲಿ ಯಾವುದೇ ಅಡೆತಡೆಗಳಿಲ್ಲದೇ ಇರುವುದರಿಂದ ನಿಶಾಂತ್‌ ಸಹ ತಿಳಿಯದೇ ಕಾಲಿಟ್ಟು ಬಿದ್ದಿದ್ದ. ಅವನು ಮೇಲಕ್ಕೆ ಬಾರದಂತೆ ತಡೆದದ್ದು ಈ ಗೆಲ್ಲುಗಳು ಮತ್ತು ಕಸದ ರಾಶಿ. ಹಾಗಾಗಿ ನಿಶಾಂತನ ಶವವನ್ನು ಮೇಲೆತ್ತಲು ಮುಳುಗು ತಜ್ಞರು ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿದ್ದರು.

ಈ ಪ್ರದೇಶದಲ್ಲಿ ಸುಮಾರು 26 ಕೊರಗ ಸಮುದಾಯದ ಕುಟುಂಬಗಳು ವಾಸಿಸುತ್ತಿವೆ. ಎಪ್ರಿಲ್‌ನಲ್ಲಿ ರಾಜ್ಯ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ  ಅವರು ಗ್ರಾಮ ವಾಸ್ತವ್ಯ ನಡೆಸಿದ ಪ್ರದೇಶ ಇದಾಗಿದ್ದು, ಅವರ ಭೇಟಿಯ ಅನಂತರ ಒಂದಷ್ಟು ಬದಲಾವಣೆ ಆಗಿತ್ತು. ಸಭಾಂಗಣವೊಂದು ನಿರ್ಮಾಣ ವಾಗುತ್ತಿದೆ. ಬಹುದೊಡ್ಡ ಸಮಸ್ಯೆಯಾಗಿದ್ದ ಜಮೀನು ಪರಭಾರೆಯೂ ಕಂದಾಯ ಇಲಾಖೆಯ ಮೂಲಕ ನಡೆಸಲಾಗಿದೆ. ಕಾಂಕ್ರೀಟ್‌ ರಸ್ತೆಯೂ ಆಗಿದೆ. ಪ್ರತಿ ಮನೆಗೂ ಶೌಚಾಲಯದ ವ್ಯವಸ್ಥೆಯನ್ನು ಗ್ರಾ.ಪಂ. ಕಲ್ಪಿಸಿದೆ.

ಸ್ಥಳೀಯ ಬೇಡಿಕೆಗೆ ಸ್ಪಂದನೆ
ಬಾಲಕನೊಬ್ಬನ ದಾರುಣ ಸಾವು ಸ್ಥಳೀಯರನ್ನು ಕಂಗೆಡೆಸಿದೆ. ಗುಂಡಿಯನ್ನು ಮುಚ್ಚಲು ಸ್ಥಳೀಯರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಮುಂದಿನ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಗುಂಡಿಯನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು.
– ಮೋಹನ್‌ ದಾಸ್‌, ಅಧ್ಯಕ್ಷರು, ಪಡುಪಣಂಬೂರು ಗ್ರಾ.ಪಂ.

ಸೂಕ್ತ ಪರಿಹಾರ ಸಾಧ್ಯತೆ
ನಿಶಾಂತ್‌ನ ಶವ ಪರೀಕ್ಷೆಯ ವರದಿಯು ಇಲಾಖೆಯ ಕೈ ಸೇರಿದ ಮೇಲೆ ಅವನ ಪೋಷಕರಿಗೆ ಸರಕಾರದಿಂದ ಸೂಕ್ತ ಪರಿಹಾರ ಸಿಗುವ ಸಾಧ್ಯತೆ ಇದೆ. ಹಳ್ಳದಂತೆ ಇರುವ ಪ್ರದೇಶವು ಖಾಸಗಿಯವರಿಗೆ ಸೇರಿದ್ದರಿಂದ ಅವರ ಅಭಿಪ್ರಾಯ ಸಂಗ್ರಹಿಸಿ ಪಂಚಾಯತ್‌ಗೆ ತಿಳಿಸಲಾಗುವುದು. ಗುಂಡಿ ಮುಚ್ಚಿದಲ್ಲಿ ಸ್ಥಳೀಯರಿಗೂ ನೆಮ್ಮದಿ ಸಿಗಬಹುದು.
– ಮೋಹನ್‌, ಗ್ರಾಮ ಕರಣಿಕ,  ಪಡುಪಣಂಬೂರು ಗ್ರಾ.ಪಂ.

ಟಾಪ್ ನ್ಯೂಸ್

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.