ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರ ಸಾವು
ಉಜಿರೆ ಸಿದ್ಧವನ ಸಮೀಪ ಶನಿವಾರ ಸಂಜೆ ದುರಂತ
Team Udayavani, May 5, 2019, 6:00 AM IST
ಬೆಳ್ತಂಗಡಿ: ಉಜಿರೆ ಸಿದ್ಧವನದ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಸಂಜೆ 4.40ಕ್ಕೆ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು, ಇಬ್ಬರು ಯುವಕರು ದಾರುಣ ವಾಗಿ ಸಾವಿಗೀಡಾ ಗಿದ್ದಾರೆ.
ಉಜಿರೆ ನಿನ್ನಿಕಲ್ಲು ನಿವಾಸಿ ವಿಘ್ನೇಶ್ (21) ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಮಡಂತ್ಯಾರು ನಿವಾಸಿ ಕ್ಷಿತಿಜ್ ಜೈನ್(24) ಆಸ್ಪತ್ರೆ ದಾರಿ ಮಧ್ಯೆ ಪುಂಜಾಲಕಟ್ಟೆ ತಲುಪುತ್ತಿದ್ದಂತೆ ಕೊನೆಯುಸಿರೆಳೆದರು.
ಕಾರು ಚಲಾಯಿಸುತ್ತಿದ್ದ ಕುರ್ಮಾಣಿ ನಿವಾಸಿ ಹರ್ಷಿತ್ ಹಾಗೂ ಜತೆಗಿದ್ದ ಬೆಳ್ತಂಗಡಿ ನಿವಾಸಿ ಸುಶಾಂತ್ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.
ಕಾರಿನಲ್ಲಿ ನಾಲ್ವರು ಧರ್ಮ ಸ್ಥಳದಿಂದ ಉಜಿರೆ ಕಡೆ ಪ್ರಯಾ ಣಿಸುತ್ತಿರುವಾಗ ಏಕಾಏಕಿ ಬೃಹದಾ ಕಾರದ ಮರವೊಂದು ಬುಡ ಸಮೇತ ಬಿದ್ದಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದು, ಏರಬ್ಯಾಗ್ ತೆರೆದು ಕೊಂಡ ಪರಿಣಾಮ ಮುಂಬದಿ ಸವಾರ ಹರ್ಷಿತ್, ಸುಶಾಂತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದ ರಭಸಕ್ಕೆ ಓರ್ವನ ತಲೆ ಒಡೆದು ಹೋಗಿದ್ದು, ಕಾರಿನಲ್ಲಿ ರಕ್ತ ಮಡುಗಟ್ಟಿತ್ತು.ದುರಂತ ಸಂಭವಿಸಿದ ಕೂಡಲೇ ಸ್ಥಳೀಯರಾದ ಸಂತೋಷ್ ಮತ್ತಿತರರು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲು ನೆರವಾದರು.
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹವನ್ನು ಮಹಜರು ನಡೆಸ ಲಾಯಿತು. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವಿಘ್ನೇಶ್(21) ಅವರು ಉಜಿರೆ ಬಳಿ ಮೊಬೈಲ್ ಅಂಗಡಿ ಯಲ್ಲಿ ಕೆಲಸ ದಲ್ಲಿದ್ದರು. ಕ್ಷಿತಿಜ್ ಜೈನ್(24) ಅವರು ಮಡಂತ್ಯಾರು ಮಾಲಾಡಿ ನಾವುಂಡ ನಿವಾಸಿ ಜಗದೀಶ್ ಜೈನ್ ಅವರ ಹಿರಿಯ ಪುತ್ರರಾಗಿದ್ದು, ಉಜಿರೆಯ ಖಾಸಗಿ ಕಾಲೇಜಿನಲ್ಲಿ ಡಿಪ್ಲೊಮಾ ಓದುತ್ತಿದ್ದರು.
ಸಂಚಾರ ವ್ಯತ್ಯಯ
ಅವಘಡ ಸಂಭವಿಸಿದ್ದರಿಂದ ಸುಮಾರು ಒಂದು ಗಂಟೆಗಳ ಕಾಲ ವಾಹನ ಸಂಚಾರ ವ್ಯತ್ಯಯವಾಗಿತ್ತು.ಎರಡೂ ಬದಿ ಗಳಲ್ಲಿ ವಾಹನಗಳು ಸಾಲು ಗಟ್ಟಿ ನಿಂತಿತ್ತು.ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿದ ಸಾರ್ವಜನಿಕರು ವಾಹನ ಸಂಚಾರ ಸುಗಮವಾಗಲು ಸಹ ಕರಿಸಿದರು.ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ಹಾಗೂ ಸಿಬಂದಿ ಸಂಚಾರ ಸುಗಮಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.