ಪೋಡಿಮುಕ್ತ ಗ್ರಾಮ ಅಭಿಯಾನಕ್ಕೆ ಕೊಳವೂರು ಗ್ರಾಮ ಆಯ್ಕೆ


Team Udayavani, Aug 17, 2017, 7:30 AM IST

1108baj.jpg

ಮುತ್ತೂರು: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮುತ್ತೂರು ಗ್ರಾ. ಪಂ. ವ್ಯಾಪ್ತಿಯ ಕೊಳವೂರು ಗ್ರಾಮ ವಿಶೇಷ ಪೋಡಿಮುಕ್ತ ಗ್ರಾಮವಾಗಿ ಆಯ್ಕೆಯಾಗಿದೆ.

ಕಂದಾಯ ಇಲಾಖೆ ಹಾಗೂ ಭೂದಾಖಲೆಗಳ ಇಲಾಖೆ ವಿಶೇಷ ಪೋಡಿಮುಕ್ತ ಗ್ರಾಮ ಅಭಿಯಾನದಡಿ ಎಲ್ಲ ತಾಲೂಕಿನಲ್ಲಿ ಪೋಡಿಮುಕ್ತ ಗ್ರಾಮ ಅಭಿಯಾನವನ್ನು  ಆರಂಭಿಸಲು ಆದೇಶಿಸಿದೆ. ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ಕೊಳವೂರು ಗ್ರಾಮ ಈ ಬಾರಿ ಪೋಡಿಮುಕ್ತ ಗ್ರಾಮಕ್ಕಾಗಿ ಅಳತೆ ಮಾಡಲು ಆಯ್ಕೆಯಾಗಿದೆ. 

ಈ ಅಭಿಯಾನದಲ್ಲಿ ಸರಕಾರಿ ಜಾಗವನ್ನು  ಹೊರತು ಪಡಿಸಿ, ಉಳಿದ ಖಾಸಗಿ ಒಡೆತನದ ಸ್ಥಳದ ಪೈಕಿ ಮತ್ತು ಬಹುಮಾಲಕತ್ವ ಆರ್‌.ಟಿ.ಸಿ.ಗಳನ್ನು ಅಳತೆ ಮಾಡಿ ಸರಿಪಡಿಸುವ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಖಾಸಗಿ ಒಡೆತನದ ಪೈಕಿ ಮತ್ತು ಬಹುಮಾಲಕತ್ವ ಆರ್‌.ಟಿ.ಸಿ.ಯ ಹಿಡುವಳಿದಾರರು, ಭೂಮಾಪಕರು ಅಳತೆಗೆ ಬಂದಾಗ ತಮ್ಮ ಗಡಿ ಗುರುತುಗಳನ್ನು ತೋರಿಸಿ ಮತ್ತು ಅಗತ್ಯ ದಾಖಲೆಗಳನ್ನು ನೀಡಿದ್ದಲ್ಲಿ ಹೆಚ್ಚು ಸಹಕಾರಿಯಾಗಬಲ್ಲದು. ಈ ಕಾರ್ಯಕ್ರಮ ನಿಗದಿತ ಕಾಲಮಿತಿಯೊಳಗೆ ಮುಗಿಯಬೇಕಿದೆ. ಇದರ ಸದುಪಯೋಗವನ್ನು ಖಾಸಗಿ ಒಡೆತನದ ಆರ್‌.ಟಿ.ಸಿ. ಹೊಂದಿರುವ ಹಿಡುವಳಿದಾರರು ಪಡೆದುಕೊಳ್ಳಬೇಕಾಗಿದೆ.ಕೊಳವೂರು ಗ್ರಾಮದಲ್ಲಿ 2 ವಾರ್ಡ್‌ ಗಳು. ಒಂದನೇ ವಾರ್ಡ್‌ನಲ್ಲಿ 4 ಸದಸ್ಯರು, 2ನೇ ವಾರ್ಡ್‌ನಲ್ಲಿ 3 ಸದಸ್ಯರು. 

ಗ್ರಾಮದ ಒಟ್ಟು ವಿಸ್ತೀರ್ಣ 1069.43 ಹೆಕ್ಟೇರ್‌, ಜನಸಂಖ್ಯೆ 2,491, ಮಹಿಳೆಯರು 1,277, ಪುರುಷರು 1214, ಪರಿಶಿಷ್ಟ ಜಾತಿ ಕುಟುಂಬಗಳು 58, ಪರಿಶಿಷ್ಟ ಪಂಗಡ ಕುಟುಂಬಗಳು 10, ಇತರ ಕುಟುಂಬಗಳು 531. ಒಟ್ಟು 599 ಕುಟುಂಬಗಳು. ಬಿಪಿಎಲ್‌ ಕುಟುಂಬಗಳು 322. ಪರಿಶಿಷ್ಟ ಪಂಗಡ ಕಾಲನಿಗಳು 3, ಪರಿಶಿಷ್ಟ ಜಾತಿ ಕಾಲನಿಗಳು 4 ಇಲ್ಲಿವೆ.

ಗ್ರಾಮದ ಹಳ್ಳಿಗಳ ಹೆಸರು
ದುರ್ಗಾಕೋಡಿ, ತೌಡಂಗೆ, ಕಡೆಂಜಬೆಟ್ಟು, ನೂದೊಟ್ಟು, ಪಂಜ, ನಾಂದಡಿ, ಕೊತ್ತಲಾಯಿ, ಕಲ್ಲನೆ, ಮೇಗಿನ ಬಾಳಿಕೆ, ತಟ್ರಬೆಟ್ಟು, ಪಂಜ, ಬಾರ್ಲ, ಹುಣ್ಸೆದಡಿ, ನೋಣಾಲ್‌, ತೇರೆಜಾಲು, ಕೊಳವೂರು ಗುತ್ತು, ಕದ್ರಡಿ, ಅಟ್ಟೆಪದವು. ನೇಲ್‌ಲಚ್ಚಿಲ್‌, ಪೊಟ್ಲಚ್ಚಿಲ್‌, ಕೊಪ್ಪಲ, ಐನ, ರತ್ನಗಿರಿ, ಬಳ್ಳಾಜೆ, ಗುಂಡಿಮಾರ್‌, ಕಂಗಿನಡಿ, ತಾವರೆಕೆರೆ, ನಡಿಗುಂಡ್ಯ, ಕಡೆಗುಂಡ್ಯ, ಬೊಳಿಯ, ಸನ್ನಿಕಾಯಿ, ಅಗರಿ, ಪಾಂಡಿಗುರಿ.ಈಗಾಗಲೇ 7 ಮಂದಿ ಭೂಮಾಪಕರು ಕೊಳವೂರು ಗ್ರಾಮಕ್ಕೆ ಬಂದು ನೋಟಿಸು ನೀಡತೊಡಗಿದ್ದಾರೆ. ಒಂದು ವಾರದ ನಂತರ ಭೂಮಾಪನ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಜಮೀನಿನ ಬಳಿ ಹಿಡುವಳಿದಾರರು ಜಮೀನಿನ ಒಡೆತನ, ಅದಕ್ಕೆ ಸಂಬಂಧಿಸಿದ ವಿವರ ಹಾಗೂ ದಾಖಲೆಗಳನ್ನು ಸಲ್ಲಿಸಬೇಕಿದೆ.

ವಿಶೇಷ ಪೋಡಿಮುಕ್ತ ಗ್ರಾಮ ಅಭಿಯಾನದಡಿ ಸರ್ವೆ ಉಚಿತ. ಅರ್ಜಿ ಹಾಗೂ ನೋಂದಣಿ ಮಾಡಿಕೊಳ್ಳಬೇಕಿಲ್ಲ. ಪ್ರತಿ ಖಾಸಗಿ ಜಮೀನು ಹೊಂದಿರುವವರ ಮನೆಬಾಗಿಲಿಗೆ ಭೂ ಮಾಪಕರು ಬರಲಿ ದ್ದಾರೆ. ಕೊಳವೂರು ಗ್ರಾ.ಪಂ. ಸದಸ್ಯರಲ್ಲಿ ಅಥವಾ ಗ್ರಾಮ ಕರಣಿಕರಲ್ಲಿ ಭೂಮಾಪಕರ ಬಗ್ಗೆ ಮಾಹಿತಿ ತಿಳಿಯಬಹುದು.

“ನಾವು 7 ಮಂದಿ ಭೂಮಾಪಕರು ಖಾಸಗಿ ಜಾಗ ಇರುವ ಒಟ್ಟು 68 ಸರ್ವೆ ನಂಬ್ರಗಳಲ್ಲಿ ಭೂಮಾಪನ ಮಾಡಲಿದ್ದೇವೆ. ಕರಾರು ರಹಿತ ಜಾಗದ ಭೂಮಾಪನ ಮಾಡಲಿದ್ದೇವೆ. ಖಾಸಗಿ ಒಡೆತನ ಪೈಕಿ ಮತ್ತು ಬಹುಮಾಲಕತ್ವ ಆರ್‌.ಟಿ.ಸಿ.ಯ ಹಿಡುವಳಿದಾರರ ಭೂಮಾಪನ ಮಾಡಿ, ಪೋಡಿ ನಕ್ಷೆ ಮಾಡಲಿದ್ದೇವೆ ಎನ್ನುತ್ತಾರೆ ಭೂಮಾಪನ ಮಾಡುವ ಲಕ್ಷ್ಮೀಶ್‌. ಬಹುಮಾಲಕತ್ವ ಆರ್‌.ಟಿ.ಸಿ. ಹಿಡು ವಳಿದಾರರಿಗೆ ದಾಖಲೆ ತೋರಿಸಿ ಪ್ರತಿ ಯೊಬ್ಬರಿಗೆ ಬೇರೆ ಬೇರೆ ಆರ್‌.ಟಿ.ಸಿ. ಮಾಡಬಹುದಾಗಿದೆ. ಉಚಿತವಾಗಿ ಭೂಮಾಪನ ಮಾಡಲಾಗುವುದು. ಇಲ್ಲದಿ ದ್ದಲ್ಲಿ ಅರ್ಜಿ ನೀಡಿ ಹಣ ಕಟ್ಟಬೇಕು. ತಮ್ಮ ದಾಖಲೆಯಲ್ಲಿರುವ ಜಾಗವನ್ನು ಗಡಿನಕ್ಷೆಯ ಮೂಲಕ ಸರಿಪಡಿಸಲು ಇದು ಅವಕಾಶ ಎನ್ನುತ್ತಾರೆ ಮುತ್ತೂರು ಗ್ರಾ.ಪಂ. ಸದಸ್ಯ ಸತೀಶ್‌ ಪೂಜಾರಿ ಬಳ್ಳಾಜೆ.

ಒಟ್ಟು 101 ಸರ್ವೆ ನಂಬರ್‌
ಕೊಳವೂರು ಗ್ರಾಮದ ವ್ಯಾಪ್ತಿಯಲ್ಲಿ ಒಟ್ಟು 101 ಸರ್ವೆ ನಂಬ್ರಗಳಿವೆ. ಇದರಲ್ಲಿ 68 ಸರ್ವೆ ನಂಬ್ರಗಳು ಖಾಸಗಿ ಒಡೆತನದ ಪೈಕಿ ಮತ್ತು ಬಹುಮಾಲೀಕತ್ವ ಆರ್‌.ಟಿ.ಸಿ.ಯ ಹಿಡುವಳಿದಾರರು. ಉಳಿದ 33 ಸರ್ವೆ ನಂಬ್ರಗಳು ಸರಕಾರಿ ಜಾಗಕ್ಕೆ ಸಂಬಂಧಿಸಿದ್ದು. ಹಾಗಾಗಿ ಉಚಿತವಾಗಿ ನಡೆಯುವ ಈ ಮಾಪನ ಕಾರ್ಯ ಗಡಿನಕ್ಷೆ ಹಾಗೂ ದಾಖಲೆಯನ್ನು ಸೂಕ್ತವಾಗಿ ಇಡಲು ಸಾಧ್ಯವಾಗುತ್ತದೆ. ಇದರಿಂದ ಖಾತೆ ಬದಲಾವಣೆಗೆ ಹಾಗೂ ಬ್ಯಾಂಕ್‌ಗಳಿಗೆ ಬೇಕಾಗುವ ದಾಖಲೆಗೆ ಇದು ಅನುಕೂಲವಾಗುತ್ತದೆ.

ಟಾಪ್ ನ್ಯೂಸ್

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.