ಕಾಡಾನೆ ದಾಳಿಗೆ ಕಂಗೆಟ್ಟ  ಮಲವಂತಿಗೆ ಗ್ರಾಮಸ್ಥರು


Team Udayavani, Apr 23, 2018, 11:15 AM IST

23-April-5.jpg

ಬೆಳ್ತಂಗಡಿ: ಕಾಡುಪ್ರಾಣಿಗಳ ದಾಳಿ ಕಡಿಮೆಯಾಗಿ ನಿಟ್ಟುಸಿರು ಬಿಟ್ಟಿದ್ದ ತಾಲೂಕಿನ ಜನತೆ ಮತ್ತೆ ಭೀತಿಗೊಳಗಾಗುವಂತೆ ಆಗಿದೆ. ಮೂರು ದಿನಗಳ ಹಿಂದೆ ಕಾಡಾನೆಗಳ ಹಿಂಡು ಮಲವಂತಿಗೆ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದು, ಕೃಷಿಗೆ ಹಾನಿಯುಂಟು ಮಾಡಿ ಹಿಂದಿರುಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಬೇಕಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಹಾಗೂ ಅದರ ಅಂಚಿನಲ್ಲಿರುವ ಗ್ರಾಮಗಳಿಗೆ ಕಾಡುಪ್ರಾಣಿಗಳ ಉಪಟಳ ತಪ್ಪಿದ್ದಲ್ಲ. ಬೆಳೆ ಕೈತಲುಪುವ ವೇಳೆ ಕಾಡಾನೆ, ಕಾಡುಕೋಣ ಮೊದಲಾದ ಕಾಡುಪ್ರಾಣಿಗಳು ದಾಳಿ ಮಾಡುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ. ಕಾಡು ಪ್ರಾಣಿಗಳಿಗೆ ಆಟ, ಕೃಷಿಕರಿಗೆ ಪ್ರಾಣಸಂಕಟ ಎಂಬಂತಾಗಿದೆ.

ಆವರನಂದಿ ಕಾಡಿಗೆ ಕಾಡಾನೆ ಹಿಂಡು
ಎ. 19ರಂದು ರಾತ್ರಿ ಮಲವಂತಿಗೆ ಗ್ರಾ.ಪಂ. ವ್ಯಾಪ್ತಿಯ ಆವರನಂದಿ ಕಾಡಿನ ಬಳಿ ಇರುವ ಚಂದಪ್ಪ ಮಲೆಕುಡಿಯ ಅವರ ತೋಟಕ್ಕೆ ಕಾಡಾನೆ ಹಿಂಡು ನುಗ್ಗಿದ್ದು, ಅಡಿಕೆ ಮರ, ತೆಂಗಿನ ಮರ ಹಾಗೂ ಬಾಳೆ ಗಿಡಗಳನ್ನು ನಾಶಪಡಿಸಿವೆ. ರಾತ್ರಿ 10ರ ಸುಮಾರಿಗೆ ಆಗಮಿಸಿದ್ದ ವೇಳೆ ಮಳೆ ಸುರಿಯುತ್ತಿದ್ದುದರಿಂದ ಮನೆಯವರಿಗೂ ವಿಚಾರ ತಿಳಿದಿರಲಿಲ್ಲ. ಮನೆಗಿಂತ ಸುಮಾರು 100 ಮೀ. ದೂರದವರೆಗೂ ಬಂದು ಕಾಡಾನೆಗಳು ಪುಂಡಾಟ ತೋರಿವೆ. ಒಟ್ಟು ನಾಲ್ಕು ಕಾಡಾನೆಗಳು ಇದ್ದು, ಇದರಲ್ಲಿ 1 ವರ್ಷದೊಳಗಿನ ಮರಿ ಆನೆಯೂ ಇದೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

ಕಾಡಾನೆ ದಾಳಿ
ತಾಲೂಕಿನಲ್ಲಿ ಒಟ್ಟು 5 ಕಾಡಾನೆಗಳು ತಿರುಗಾಡುತ್ತಿವೆ. ಇದರಲ್ಲಿ ಹಿಂದೆ ಮೂರು ದೊಡ್ಡ ಆನೆಗಳಿದ್ದು, ವರ್ಷದಿಂದೀಚೆಗೆ ಮರಿ ಆನೆಯೂ ಇದೆ. ಈ ನಾಲ್ಕು ಕಾಡಾನೆಗಳು ಜತೆಯಾಗಿ ತಿರುಗಾಡುತ್ತಿವೆ. ಚಂದಪ್ಪ ಅವರ ತೋಟಕ್ಕೆ ಆಗಮಿಸಿದ್ದ ವೇಳೆ ಅಡಿಕೆ ಗಿಡಕ್ಕೆ ತೋಡಿದ್ದ ಗುಂಡಿಯಲ್ಲಿ ಮರಿ ಆನೆ ಸಿಲುಕಿದ್ದು, ಅದನ್ನು ಹೊರಗೆಳೆಯಲು ಇತರ ಆನೆಗಳು ಒದ್ದಾಟ ನಡೆಸಿರುವ ಕುರುಹುಗಳೂ ಇವೆ. ಗುಂಪು ಅಲ್ಲದೆ ಒಂಟಿ ಸಲಗವೂ ಇದ್ದು, ಆಗಾಗ ಗ್ರಾಮಗಳಿಗೆ ಆಗಮಿಸಿ ಹಾವಳಿ ನೀಡುತ್ತಿದೆ. 

ಹಿಂದೆಯೂ ಬಂದಿದ್ದವು
ಮೂರರಿಂದ ನಾಲ್ಕು ತಿಂಗಳ ಹಿಂದೆಯೂ ಕಾಡಾನೆ ಹಿಂಡು ಗ್ರಾಮಕ್ಕೆ ಬಂದಿದ್ದು, ಫಸಲಿಗೆ ಬಂದಿದ್ದ ಭತ್ತದ ಬೆಳೆ(ನೇಜಿ)ಯನ್ನು ತಿಂದು ನಾಶಗೊಳಿಸಿದ್ದವು.  ಈ ವೇಳೆಯೂ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು. ಇಲಾಖೆಗಳಿಂದ ಪರಿಹಾರವೂ ಲಭಿಸಿತ್ತು.

ಬೆಳೆಗಳಿಗೆ ಹಾನಿ
ಫಸಲಿಗೆ ಬಂದ 70ಕ್ಕೂ ಹೆಚ್ಚು ಅಡಿಕೆ ಮರ, 5 ತೆಂಗಿನ ಮರ ಹಾಗೂ ಬಾಳೆ ಗಿಡಗಳು ನಾಶವಾಗಿವೆ. ಇನ್ನು ನೀರಿಗಾಗಿ ಹಾಕಿದ್ದ ಪೈಪ್‌ ಹಾಗೂ ಇತರ ಕೃಷಿಗಳಿಗೂ ಹಾನಿ ಮಾಡಿವೆ. ತೆಂಗಿನ ಮರ, ಅಡಿಕೆ ಮರಗಳನ್ನೂ ಛಿದ್ರಗೊಳಿಸಿವೆ. ಸಿಕ್ಕ ಸಿಕ್ಕ ಗಿಡಗಳನ್ನೂ ನಾಶಪಡಿಸಿ ಕೃಷಿಕರಿಗೆ ಅಪಾರ ನಷ್ಟ ಉಂಟು ಮಾಡುತ್ತಿವೆ. ಚಾರ್ಮಾಡಿ, ಭೈರತ್ತಿ, ಕುದುರೆಮುಖ ಮೊದಲಾದ ರಕ್ಷಿತಾರಣ್ಯ ಪ್ರದೇಶಗಳಲ್ಲಿ ಆನೆಗಳು ಓಡಾಡುತ್ತಿದ್ದು, ಇತ್ತೀಚಿನ ಕೆಲವು ವರ್ಷಗಳಲ್ಲಿ ವರ್ಷಕ್ಕೆ ಕನಿಷ್ಠ 4 ಬಾರಿಯಾದರೂ ದಾಳಿ ಮಾಡುತ್ತಿವೆ. ತಾಲೂಕಿನ ಮುಂಡಾಜೆ, ಕಡಿರುದ್ಯಾವರ, ಮಿತ್ತಬಾಗಿಲು, ನಂದಿಕಾಡು, ಸಿಂಗನಾರು, ಕುಡಾಲು, ಮಲ್ಲ, ಕುಮೇರು, ತುಳುಪುಳೆ, ಕಜಕ್ಕೆ, ತಿಮ್ಮಾರುಕಂಡ ಮೊದಲಾದೆಡೆ ಆಗಮಿಸಿ ಕೃಷಿಗೆ ಹಾನಿಯುಂಟು ಮಾಡಿದ ಪ್ರಕರಣಗಳು ನಡೆದಿವೆ. ಆಗಾಗ ಕಡಿರುದ್ಯಾವರ, ಎಳನೀರು ಮೊದಲಾದೆಡೆ ದಾಳಿ ಮಾಡುತ್ತಿವೆ.

ಕೆಲವು ವರ್ಷಗಳ ಹಿಂದೆ ಚಾರ್ಮಾಡಿಯಲ್ಲಿ ಕಾಂಕ್ರೀಟ್‌ ಕಾಮಗಾರಿ ಮಾಡಲಾಗಿದ್ದು, ಬಳಿಕ ಉಪಟಳ ಹೆಚ್ಚಾಗಿದೆ. ಹಿಂದೆ ವರ್ಷಕ್ಕೆ ಒಂದು ಬಾರಿ ಬರುತ್ತಿದ್ದ ಕಾಡಾನೆಗಳು, ಈಗ ವರ್ಷಕ್ಕೆ ನಾಲ್ಕು ಬಾರಿಯೂ ಬರುವಂತಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.

ಕಾಡಾನೆ ಹಿಂಡು ಸದ್ಯ ಸಮೀಪದ ಕಾಡಿಗೆ ಹಿಂದಿರುಗಿದ್ದು, ಮತ್ತೆ ಆಗಮಿಸುವ ಭಯದಲ್ಲಿ ಸಾರ್ವಜನಿಕರು ದಿನ ಕಳೆಯುತ್ತಿದ್ದಾರೆ.

ಅರಣ್ಯ ಇಲಾಖೆ ಸಿಬಂದಿ ಭೇಟಿ
ಸಾಮಾನ್ಯವಾಗಿ ಆಹಾರ ಅರಸಿ ಬಂದ ವೇಳೆ ಸಮಸ್ಯೆಗಳು ಉಂಟಾಗುತ್ತಿವೆ. ದಾಳಿ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬಂದಿ ಭೇಟಿ ನೀಡಿ, ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.

ಮುಂಜಾಗೃತ ಕ್ರಮ
ಇಲಾಖೆಯಿಂದ ಸ್ಥಳ ಪರಿಶೀಲನೆ ಮಾಡಲಾಗಿದೆ. ನಷ್ಟಕ್ಕೆ ಪರಿಹಾರ ಕೊಡಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಆನೆಗಳು ಮತ್ತೆ ಆಗಮಿಸಿದರೆ, ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಸಿಬಂದಿ ಸ್ಥಳಕ್ಕೆ ತೆರಳಿ ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯ ಮಾಡಲಿದ್ದಾರೆ.
– ಸುಬ್ಬಯ ನಾಯ್ಕ
ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ

ಪರಿಹಾರ ಬೇಕು
ಹಿಂದೆ ಒಂಟಿ ಸಲಗ ಮೂರು ಬಾರಿ ಇಲ್ಲಿಗೆ ಆಗಮಿಸಿತ್ತು. ಆನೆಗಳ ಹಿಂಡು ಎರಡನೇ ಬಾರಿಗೆ ಆಗಮಿಸಿದೆ. ಮನೆಯ ಬಳಿಗೆ ಸುಳಿಯದಿರುವುದೇ ಸಮಾಧಾನಕರ ವಿಚಾರ. ಅವುಗಳು ಆಗಮಿಸಿದ ವೇಳೆ ಹೊರಗೆ ತೆರಳುವುದೂ ಕಷ್ಟ. ಬೆಳೆಗೆ ಸೂಕ್ತ ಪರಿಹಾರ ಸಿಗಬೇಕಿದೆ.
 – ಚಂದಪ್ಪ ಕೃಷಿ ನಷ್ಟಕ್ಕೊಳಗಾದ ಕೃಷಿಕ

ಬೆಳೆಗಳು ಕೈತಪ್ಪುತ್ತಿವೆ
ಕಾಡಾನೆಗಳು, ಕಾಡುಕೋಣ ಆಗಮಿಸಿ ಕೃಷಿಗೆ ಹಾನಿ ಉಂಟು ಮಾಡಿವೆ. ಗ್ರಾಮಗಳಿಗೆ ಆಗಮಿಸಿ ಬೇಕಾದ್ದನ್ನು ತಿಂದರೂ ಸಮಸ್ಯೆಯಿಲ್ಲ. ಆದರೆ ಹಾಳುಗೆಡವುತ್ತಿರುವುದು ಬೇಸರ ಮೂಡಿಸುತ್ತದೆ. ಕಷ್ಟಪಟ್ಟು ಬೆಳೆದ ಬೆಳೆಗಳು ಕೈತಪ್ಪುತ್ತಿವೆ.
 – ಉದಯ,
  ಸ್ಥಳೀಯರು

ಹರ್ಷಿತ್‌ ಪಿಂಡಿವನ

ಟಾಪ್ ನ್ಯೂಸ್

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.