ಆದರ್ಶ ಗ್ರಾಮಕ್ಕೆ ಕೈ ಜೋಡಿಸುತ್ತಿರುವ ಬಳ್ಪ ಗ್ರಾಮಸ್ಥರು
ಗ್ರಾಮಸ್ಥರೂ ಆದರ್ಶ; ಮೂಲ ಸೌಕರ್ಯ ಕಲ್ಪಿಸಲು ಸಹಕಾರ
Team Udayavani, Nov 12, 2019, 11:57 PM IST
ಬಳ್ಪದಲ್ಲಿ ಪರಸ್ಪರ ಸಹಕಾರದ ಮೂಲಕ ದಶಕಗಳ ಬಳಿಕ ರಸ್ತೆ ನಿರ್ಮಿಸಿಕೊಂಡ ನಿವಾಸಿಗಳು.
ಸುಬ್ರಹ್ಮಣ್ಯ: ಸರಕಾರ ಕೋಟಿ ರೂಪಾಯಿ ಖರ್ಚು ಮಾಡಿದ ಮಾತ್ರಕ್ಕೆ ಆದರ್ಶ ಗ್ರಾಮ ನಿರ್ಮಾಣವಾಗದು. ಗ್ರಾಮದ ಜನತೆ ಕೈ ಜೋಡಿಸಿದಾಗ ಮಾತ್ರ ಅದು ಸಾಧ್ಯ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು ಅವರ ಆದರ್ಶ ಗ್ರಾಮ ಬಳ್ಪದ ನಾಗರಿಕರು ಇದಕ್ಕೆ ಉದಾಹರಣೆಯಾಗಿದ್ದಾರೆ. ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಹಲವು ಮಂದಿ ಭೂಮಿ ನೀಡಿದ್ದಾರೆ. 6 ಕಡೆಗಳಲ್ಲಿ ಮೂಲ ಸೌಕರ್ಯ ವೃದ್ಧಿಗೆ ಜಾಗ ನೀಡಿ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳೂ ಸಹಕರಿಸುತ್ತಿದ್ದಾರೆ. ದಶಕಗಳಿಂದ ರಸ್ತೆಗೆ ಸಂಬಂಧಿಸಿದ್ದ ಸಮಸ್ಯೆಗಳು ಪರಿಹಾರ ವಾಗುತ್ತಿವೆ.
ಬಗೆಹರಿದ ಸಮಸ್ಯೆ
ಗ್ರಾಮದ ಕಟ್ಟ ವೀರಪ್ಪ ಗೌಡ ಮತ್ತು ವೆಂಕಟ್ರಮಣ ಗೌಡರ ಮನೆಗಳಿಗೆ ರಸ್ತೆ ಸಂಪರ್ಕವಿರಲಿಲ್ಲ. 500 ಮೀ. ದೂರ ನಡೆದು ತೆರಳಬೇಕಿತ್ತು, ಸಾಮಗ್ರಿ ಸಾಗಿಸಲು ಅಡ್ಡಿಯಾಗುತ್ತಿತ್ತು. ರಸ್ತೆ ನಿರ್ಮಿಸಿ ಕೊಡುವಂತೆ ಕಂದಾಯ ಇಲಾಖೆಗೆ ಮನವಿ ಮಾಡಿದ್ದು, ಖಾಸಗಿ ತಕರಾರು ಇದ್ದ ಕಾರಣ ನ್ಯಾಯಾಲಯದ ಮೆಟ್ಟಿಲೇರಿತ್ತು. 35 ವರ್ಷಗಳಿಂದ ಇತ್ಯರ್ಥವಾಗದ ಸಮಸ್ಯೆಯನ್ನು ಬಳ್ಪ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಮುಟ್ನೂರು ಅವರ ಗಮನಕ್ಕೆ ತಂದು, ಬಗೆಹರಿಸುವಂತೆ ಮನವಿ ಮಾಡಲಾಗಿತ್ತು. ಅವರು ಗ್ರಾ.ಪಂ. ಸದಸ್ಯೆ ಬೇಬಿ ಭಾಸ್ಕರ ಕಟ್ಟ ಅವರ ಸಹಕಾರ ಪಡೆದು ಅಕ್ಕಪಕ್ಕದ ನಿವಾಸಿಗಳಾದ ಕಟ್ಟ ಮೋಹನ ಗೌಡ, ಪುರುಷೋತ್ತಮ ಗೌಡ, ಚಂದ್ರಶೇಖರ ಗೌಡ, ಗುಣಸಾಗರ ಗೌಡ, ಹೇಮಲತಾ ಲಿಂಗಪ್ಪ ಮಾಸ್ತರ್ ಮತ್ತು ವಸಂತ ಗೌಡ ಕಲ್ಗುಂಡಿ ಅವರ ಜತೆ ಮಾತುಕತೆ ನಡೆಸಿದರು. ಅವರು ತಮ್ಮ ಜಮೀನಿನಲ್ಲಿ ನೂತನ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದು, ಈಗ ನಿರ್ಮಾಣಗೊಂಡಿದೆ.
ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ
ಕಾಂಜಿ-ಪಡಿಕಲಾಯ ಭಾಗಕ್ಕೆ ರಸ್ತೆ ಇಲ್ಲದೆ ಇತ್ತೀಚೆಗೆ ಮಳೆ ಜೋರಿದ್ದಾಗ ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರನ್ನು ಸ್ಥಳೀಯರು 1 ಕಿ.ಮೀ. ಹೊತ್ತೂಯ್ದು ಆಸ್ಪತ್ರೆಗೆ ದಾಖಲಿಸಿದ್ದರು. ದಶಕಗಳಿಂದ ಈ ಭಾಗಕ್ಕೆ ರಸ್ತೆ ಇರಲಿಲ್ಲ. ಬಳಿಕ ಸುಳ್ಯ ಶಾಸಕ ಎಸ್. ಅಂಗಾರ ಸ್ಥಳ ಪರಿಶೀಲನೆ ನಡೆಸಿದ್ದರು. ರಸ್ತೆ ಹಾದುಹೋಗುವ ಸ್ಥಳ ಕಿಟ್ಟಣ್ಣ ಪೂಜಾರಿ ಅವರಿಗೆ ಸೇರಿದ್ದಾಗಿತ್ತು. ಶಾಸಕರು, ಸ್ಥಳೀಯರ ಮಾತುಕತೆಯ ಬಳಿಕ ಅವರು ಸಾರ್ವಜನಿಕ ರಸ್ತೆ ನಿರ್ಮಾಣಕ್ಕೆ ಜಾಗ ನೀಡಲು ಒಪ್ಪಿದ್ದರು. ಅನಂತರ ಅಧಿಕಾರಿಗಳು ಆಗಮಿಸಿ ಅಂದಾಜು ಪಟ್ಟಿ ಸಿದ್ಧಪಡಿಸಿ ಸರಕಾರದ ಅನುಮೋದನೆಗೆ ಕಳುಹಿಸಿಕೊಟ್ಟಿದ್ದಾರೆ.
ಇಷ್ಟೇ ಅಲ್ಲ; ಗ್ರಾಮದ ಸಂಪ್ಯಾಡಿ, ಕೊಪ್ಪಾಳೆ, ಪಡಿಕಲಾಯ, ಕಾಂಜಿ, ಕಟ್ಟ ಮುಂತಾದ ಆರು ಕಡೆ ಈ ರೀತಿ ರಸ್ತೆ ವ್ಯಾಜ್ಯಕ್ಕೆ ಸಂಬಂಧಿಸಿ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲಾಗಿದೆ.
ರಸ್ತೆ ಸಂಪರ್ಕ ಕಲ್ಪಿಸಲು ಸ್ಥಳೀಯಾ ಡಳಿತ ಮುಂದಾದಾಗ ಖಾಸಗಿ ಜಾಗದ ತಕರಾರು ಎದುರಾಗುತ್ತಿತ್ತು. ಅಂತಹ ಸಂದರ್ಭಗಳಲ್ಲಿ ಎರಡೂ ಕಡೆಯವರ ಜತೆ ಮಾತುಕತೆ ನಡೆಸಿ ಮನವೊಲಿಸಿ ಬಗೆಹರಿಸುವ ಪ್ರಯತ್ನ ನಡೆಸಿದೆವು. ಅದು ಯಶಸ್ವಿಯಾಗುತ್ತಿದೆ. ಗ್ರಾಮಸ್ಥರು ಕೈ ಜೋಡಿಸಿದಾಗ ಆದರ್ಶ ಗ್ರಾಮದ ಕನಸು ನನಸಾಗುವುದು ಕಷ್ಟವಲ್ಲ. ಇದು ನಮಗೆ ಸ್ಫೂರ್ತಿ ತಂದಿದೆ ಎಂದು ಬಳ್ಪ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಮುಟ್ನೂರು ಪ್ರತಿಕ್ರಿಯಿಸಿದ್ದಾರೆ.
ಗ್ರಾಮದ ಅಭಿವೃದ್ಧಿಗೆ ಜನರು ಸ್ಪಂದಿಸುವ ಮೂಲಕ ಸಹಕಾರ ನೀಡುತ್ತಿರುವುದು ಆದರ್ಶ ಗ್ರಾಮದ ಕಲ್ಪನೆಗೆ ಪೂರಕವಾಗಿದೆ. ಜನರ ಸಹಕಾರದಿಂದ ಗ್ರಾಮ ಅಭಿವೃದ್ಧಿಯ ಕಡೆಗೆ ಹೆಜ್ಜೆ ಹಾಕುತ್ತಿದೆ.
– ನಳಿನ್‌ಕುಮಾರ್ ಕಟೀಲು, ಸಂಸದರು
ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಮೂಲ ಸೌಕರ್ಯಗಳಿಂದ ವಂಚಿತರಾಗಬಾರದು. ಎಲ್ಲರಿಗೂ ಸೌಲಭ್ಯಗಳು ಸಿಗಬೇಕು. ಗ್ರಾಮದಲ್ಲಿ ಪರಸ್ಪರ ಸಹಕಾರ ಅಗತ್ಯ. ಇದನ್ನು ಮನಗಂಡು ನಾವು ರಸ್ತೆ ನಿರ್ಮಿಸಲು ಜಾಗ ನೀಡಿದ್ದೇವೆ.
– ಅಭಿಲಾಷ್ ಕಟ್ಟ, ಸ್ಥಳೀಯ
– ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.